Advertisement
ಸಂಘಟನಾತ್ಮಕವಾಗಿ ಸಾಗಿದಾಗ ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದು ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
Related Articles
Advertisement
ಬಂಟಕೋಡು ಪ್ರಗತಿಪರ ಕೃಷಿಕ ಬೈಲೂರು ಶಿವರಾಮ ಶೆಟ್ಟಿ ಹಾಗೂ ಸಿಂಗಾರಿ ಶೆಟ್ಟಿ ದಂಪತಿಗೆ ದಿ| ಎಂ. ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ಸರಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಬಿ.ಎನ್. ಶೆಟ್ಟಿ ನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಮಣಿಪಾಲದ ಚೇರ್‌ಮನ್ ಹರಿಪ್ರಸಾದ್ ರೈ, ಕುಂದಾಪುರ ಬಂಟರ ಯಾನೆ ನಾಡವರ ಮಾತೃಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಬೆಂಗಳೂರಿನ ಆರ್.ಪಿ. ಶೆಟ್ಟಿ ಇನ್‌ಫಾ ಪ್ರೈ.ಲಿ.ನ ರಾಘವೇಂದ್ರ ಪಿ. ಶೆಟ್ಟಿ, ಚಿಕ್ಕಮಗಳೂರು ಹೊಟೇಲ್ ಸನ್ ರೈಸ್ ಮಾಲಕ ರಾಜೀವ ಆರ್. ಶೆಟ್ಟಿ, ಉದ್ಯಮಿಗಳಾದ ಬಿ. ಹರ್ಷ ಶೆಟ್ಟಿ ಹೆಬ್ರಿ, ವಿಜಯ ಎನ್. ಶೆಟ್ಟಿ ಸಂಸಾಡಿ ರಾಮದುರ್ಗಾ, ಗೌರವಾಧ್ಯಕ್ಷ ಬಿ. ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಸಂಘದ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024-26ನೇ ಸಾಲಿನ ಅಧ್ಯಕ್ಷರಾಗಿ ನಿತೀಶ್ ಶೆಟ್ಟಿ ಬಸ್ರೂರು, ಗೌರವಾಧ್ಯಕ್ಷ ರಾಗಿ ವತ್ಸಲಾ ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ ಶೆಟ್ಟಿ ಹುಯ್ನಾರು, ಕೋಶಾಧಿಕಾರಿಯಾಗಿ ಭರತ್‌ರಾಜ್ ಶೆಟ್ಟಿ ಜಾಂಬೂರು ಆಯ್ಕೆಯಾದರು.
ಕಾರ್ಯಕ್ರಮದ ಸಂಚಾಲಕ ಡಾ| ಚೇತನ್ ಶೆಟ್ಟಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ವಂದಿಸಿದರು. ಗೌರವಾಧ್ಯಕ್ಷ ಬಿ. ಉದಯ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಅಕ್ಷಯ್ ಹೆಗ್ಡೆ, ರಾಜೀವ ಶೆಟ್ಟಿ, ಮೊಳಹಳ್ಳಿ ಪ್ರಶಸ್ತಿ ಪತ್ರ ವಾಚಿಸಿ, ಉಪನ್ಯಾಸಕಿ ರೇಷ್ಮಾ ಶೆಟ್ಟಿ, ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು.