Advertisement
ಯವರು ಜಂಟಿಯಾಗಿ ಶುಕ್ರವಾರ ನಡೆಸಿದರು. ಶುಕ್ರವಾರ ಮುಂಜಾನೆಯಿಂದ ಕಂದ್ಲೂರು, ಹಳ್ನಾಡು ಮರಳುಗಾರಿಕಾ ದಕ್ಕೆಗಳಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಸಾಗಿಸಲಾಯಿತು. ಅಲ್ಲದೇ ದಕ್ಕೆಗಳಲ್ಲಿ ರಾಶಿ ಹಾಕಿದ ಮರಳನ್ನು ಬಳ್ಕೂರು ಪಿಡಬ್ಲ್ಯುಡಿ ಯಾರ್ಡ್‌ಗೆ ಸಾಗಿಸಲಾಯಿತು.
Related Articles
ಉಡುಪಿ: ಹೊರರಾಜ್ಯದಿಂದ ಬಂದು ಕರಾವಳಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆಯಲ್ಲಿ ನಿರತರಾಗಿರುವ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ನವಾಬ್‌ಗಂಜ್ ಮೂಲದ ಐವರನ್ನು ಗಡಿಪಾರು ಮಾಡುವಂತೆ ಪೊಲೀಸರು ಜಿಲ್ಲಾ ದಂಡಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಉತ್ತರಪ್ರದೇಶದ ಕಾರ್ಮಿಕರಾದ ರೋಹಿತ್ (25), ಬಲರಾಮ್ (40), ರಾಮ್‌ಭವನ್ (24), ಲಲಿತ್‌ರಾಮ (25), ಮಾಸ್ತರ್ (21) ಅವರನ್ನು ಗಡಿಪಾರು ಮಾಡುವಂತೆ ಶಿಫಾರಸು ಮಾಡಲಾಗಿದೆ.
Advertisement
ಮುಂಜಾನೆಯಿಂದ ಗಣಿ ಇಲಾಖೆಯವರು, ಕಂದಾಯ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯವರು ಸಂಘಟಿತರಾಗಿ ಕಂದ್ಲೂರು ಹಾಗೂ ಇತರ ಕಡೆ ಅಕ್ರಮ ಮರಳುಧಿಗಾರಿಕೆ ಅಡ್ಡೆಗಳಲ್ಲಿರುವ ಸುಮಾರು 8ರಿಂದ 10 ದೋಣಿ ಹಾಗೂ ಮರಳನ್ನು ಮುಟ್ಟುಗೋಲು ಹಾಕಿದ್ದಾರೆ. ತಲ್ಲೂರು ಬಳಿ ಪಾರ್ತಿಕಟ್ಟೆಯಲ್ಲಿ ಅಕ್ರಮವಾಗಿ ದಾಸ್ತಾನಾಗಿಟ್ಟ 28 ಲೋಡು ಮರಳನ್ನು ಕುಂದಾಪುರ ಪುರಸಭೆಯ ಮರಳು ಯಾರ್ಡಗೆ ಕಳುಹಿಸಿದ್ದಾರೆ. ಕಾರ್ಯಾಚರಣೆೆ ಸಂಜೆ ವರೆಗೆ ಮುಂದುವರಿಯಿತು.ಜಿ.ಎಂ. ಬೋರ್ಕರ್, ತಹಶೀಲ್ದಾರ್, ಕುಂದಾಪುರ