Advertisement
ಬುಧವಾರ ಎಎಸ್‌ಪಿ ಹರಿರಾಮ್ ಶಂಕರ್ ಅವರು ಬಸ್‌ನಿಲ್ದಾಣ ಪರಿಸರಕ್ಕೆ ಭೇಟಿ ನೀಡಿದರು. ಈಗಾಗಲೇ ಪುರಸಭೆ ಫೆರ್ರಿ ರಸ್ತೆಯ ಫೆರ್ರಿ ಪಾರ್ಕ್ ಬಳಿ 30 ಸೆಂಟ್ಸ್‌ನಷ್ಟು ಜಾಗದಲ್ಲಿ ಬಸ್ ತಂಗಲು ವ್ಯವಸ್ಥೆ ಮಾಡಿದೆ. ಈ ಜಾಗ ಕಸದ ರಾಶಿ ಹಾಕಲು ಬಳಕೆಯಾಗುತ್ತಿತ್ತು. ಕೆಲವರು ಎಲ್ಲೆಲ್ಲಿಂದಲೋ ತಂದು ಇಲ್ಲಿ ಕಸ ಸುರಿದು ಹೋಗುತ್ತಿದ್ದರು. ಅಷ್ಟಲ್ಲದೇ ಎಲ್ಲೆಲ್ಲೋ ತೆಗೆದ ಇಂಟರ್‌ಲಾಕ್‌ನ ತುಂಡುಗಳನ್ನು ಇಲ್ಲಿ ತಂದು ಸುರುವಲಾಗಿತ್ತು. ಆದರೆ ಇದೀಗ ಪುರಸಭೆ ಇವೆಲ್ಲವನ್ನೂ ತೆಗೆದು ಬಸ್‌ಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಲು ಅನುವು ಮಾಡಿದೆ.
ಹದಿನೈದು ನಿಮಿಷ ಸಮಯಾವಕಾಶ ಇದ್ದರೂ ಬಸ್‌ಗಳು ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಕಾರಣ ಇತರ ಬಸ್‌ಗಳಿಗೆ ಜಾಗ ಸಾಲುತ್ತಿರಲಿಲ್ಲ. ಇನ್ನು ಕೆಲವು ಬಸ್‌ಗಳು ಫೆರ್ರಿ ರಸ್ತೆ ಬದಿಯಲ್ಲಿ ನಿಲ್ಲುತ್ತಿದ್ದವು. ಇದರಿಂದ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಕಚೇರಿಗೆ ಬರುವವರಿಗೆ, ಫೆರ್ರಿ ರಸ್ತೆಯಲ್ಲಿ ಸಾಗುವವರಿಗೆ, ಮಸೀದಿಗೆ ಹೋಗುವ ಸಂದರ್ಭ ವಾಹನ ಜಂಗುಳಿ ಹೆಚ್ಚಿದ್ದಾಗ ಸಮಸ್ಯೆಯಾಗುತ್ತಿತ್ತು. ಖಾಸಗಿ ಬಸ್ ತಂಗುದಾಣ
ಈಗ ಬಸ್ ನಿಲ್ದಾಣ ಇರುವಲ್ಲಿಗೆ ಕೆಲ ವರ್ಷಗಳ ಹಿಂದೆ ಬಸ್ ನಿಲ್ದಾಣ ಸ್ಥಳಾಂತರವಾಗಿತ್ತು. ಅದಕ್ಕೂ ಮುನ್ನ ಪುರಸಭೆ ಸಮೀಪ ಈಗ ಹಳೆಬಸ್ ನಿಲ್ದಾಣ ಎಂದು ಕರೆವಲ್ಲಿ ಬಸ್‌ಗಳು ನಿಲ್ಲುತ್ತಿದ್ದವು. ಈಗ ಸರಿಸುಮಾರು 550 ಖಾಸಗಿ ಬಸ್ಸುಗಳು, 70 ಕೆಎಸ್‌ಆರ್‌ಟಿಸಿ ಬಸ್ಸುಗಳು ಇಲ್ಲಿಗೆ ಬರುತ್ತವೆ. ಕೆಎಸ್‌ಆರ್‌ಟಿಸಿ ತಂಗುದಾಣ ಪ್ರತ್ಯೇಕ ಇದೆ.
Related Articles
Advertisement
ರೂಪರೇಷೆ ಸಿದ್ಧಪರಿಣತರ ಸಹಕಾರದಿಂದ ಪುರಸಭೆ ಪಾರ್ಕಿಂಗ್ ತಾಣ ಗುರುತಿಸಿದೆ. ಶಾಸಿŒ ಸರ್ಕಲ್‌ನಿಂದ ಹೊಸ ಬಸ್ ನಿಲ್ದಾಣವರೆಗೆ ಎರಡೂ ರಸ್ತೆಗಳಲ್ಲಿ ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನ ನಿಲ್ಲಿಸಲು ತಾಣ ಗುರುತಿಸಿದೆ. ಕೆಲವು ಸ್ಥಳಗಳನ್ನು ನೋ ಪಾರ್ಕಿಂಗ್ ಪ್ರದೇಶ ಮಾಡಲು ಜಿಲ್ಲಾಧಿಕಾರಿಗಳಿಂದ ನೋಟಿಫಿಕೇಶನ್ ಆಗಬೇಕಿದೆ. ಈ ನಿಟ್ಟಿನಲ್ಲೂ ಕಡತ ಸಿದ್ಧವಾಗಿದೆ. ಮಿನಿ ವಿಧಾನಸೌಧ ಎದುರು ಚತುಶ್ಚಕ್ರ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶ ಒದಗಿಸಲು 32 ಲಕ್ಷ ರೂ.ಗಳಲ್ಲಿ ಇಂಟರ್‌ಲಾಕ್ ಹಾಕಲಾಗುತ್ತಿದೆ. ಫೆರ್ರಿ ಪಾರ್ಕ್ ಬಳಿ ಖಾಸಗಿ ಬಸ್ಸುಗಳು ನಿಂತರೆ ತಕ್ಕಮಟ್ಟಿಗೆ ಸಮಸ್ಯೆ ಪರಿಹಾರವಾಗಲಿದೆ. ಜಾಗೃತಿ
ಹೊಸಬಸ್ ನಿಲ್ದಾಣ ಸಮೀಪ ಗುರುವಾರ ಸಂಜೆ ಸಂಚಾರಿ ಠಾಣೆ ಪೊಲೀಸರು ಪ್ರಯಾಣಿಕರಲ್ಲಿ ಜಾಗೃತಿಒ ಮೂಡಿಸುವ ಕೆಲಸ ಮಾಡಿದರು. ಖಾರ್ವಿಕೇರಿ ಕಡೆಗೆ ಹೋಗುವ ರಸ್ತೆ ಹಾದುಹೋಗುವಲ್ಲಿ ಅಂಗಡಿ ಬದಿ ಪ್ರಯಾಣಿಕರು ಬಸ್ಸಿಗಾಗಿ ಕಾದು ನಿಲ್ಲುತ್ತಿದ್ದು ಅಲ್ಲಿಯೂ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದಕ್ಕಾಗಿ ಸಂಚಾರಿ ಠಾಣೆ ಎಸ್‌ಐ ಪುಷ್ಪಾ ಅವರು ಸಿಬಂದಿ ಜತೆ ಇಲ್ಲಿ ಪ್ರಯಾಣಿಕರಲ್ಲಿ ಇಲ್ಲಿ ಬಸ್‌ಗಾಗಿ ಕಾಯದೇ ಬಸ್ ತಂಗುದಾಣದಲ್ಲಿಯೇ ಕಾಯುವಂತೆ ಮನವಿ ಮಾಡಿದರು. ರಿಬ್ಬನ್ ಕಟ್ಟಿ ಜನರು ನಿಲ್ಲದಂತೆ ಸೂಚಿಸಿದರು. ಬಸ್ಸು ಮಾಲಕರು ಚಾಲಕರ ಗಮನಕ್ಕೆ
ಹೊಸ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಎಲ್ಲಾ ಬಸ್ಸಿನವರು ಅಡ್ಡಾದಿಡ್ಡಿಯಾಗಿ ಬಸ್ಸುಗಳನ್ನು ನಿಲ್ಲಿಸುತ್ತಿದ್ದು ಸುಗಮ ವಾಹನಗಳ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಇನ್ನು ಮುಂದಕ್ಕೆ 10 ರಿಂದ 15 ನಿಮಿಷಗಳ ಕಾಲಾವಕಾಶ ಇರುವ ಬಸ್ಸುಗಳನ್ನು ಕುಂದಾಪುರ ಪುರಸಭಾ ವ್ಯಾಪ್ತಿಗೆ ಸಂಬಂಧಪಟ್ಟ ಪೆರಿ ರಸ್ತೆಯಲ್ಲಿ ಬಸ್ಸುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು ಚಾಲಕರು ಅಲ್ಲೇ ಬಸ್ಸುಗಳನ್ನು ನಿಲ್ಲಿಸಬೇಕು.
-ಸುದರ್ಶನ್,
ಎಸ್‌ಐ,ಸಂಚಾರ ಠಾಣೆ