ಕುಂದಾಪುರ: ಖಾಸಗಿ ಬಸ್ ಢಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಹಂಗಳೂರು ಗ್ರಾಮದ ಅಂಕದಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಅಂಕದಕಟ್ಟೆ ಸಮೀಪದ ಬಡಾಕೆರೆಯ ನಿವಾಸಿ ಗೋವಿಂದ ನಾಯ್ಕ (60) ಸಾವನ್ನಪ್ಪಿದವರು.
ಬಸ್ ಉಡುಪಿಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಘಟನ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಳಿಯಂಗಡಿ: ಬೈಕ್‌ನಿಂದ ಬಿದ್ದು ಸಹಸವಾರೆ ಸಾವು
ಸಿದ್ದಾಪುರ: ಗೋಳಿಯಂಗಡಿಯ ಶ್ರೀ ಬ್ರಾಹ್ಮೀ ಫಾಸ್ಟ್‌ಪುಡ್ ಅಂಗಡಿ ಬಳಿ ಅತೀ ವೇಗವಾಗಿ ಬೈಕ್ ಬಿಟ್ಟ ಪರಿಣಾಮ ಹಿಂಬದಿ ಕುಳಿತಿದ್ದ ಬೆಳ್ವೆ ಗ್ರಾಮದ ಗುಮ್ಮೊಲ ಗಿರಿಜಾ ಅವರು ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಮೃತ ಪಟ್ಟಿದ್ದಾರೆ. ಅವರು ಗೋಳಿಯಂಗಡಿಯಿಂದ ಬೆಳ್ವೆ ಕಡೆಗೆ ಬರುತ್ತಿದ್ದರು. ಕೂಡಲೆ ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುದ್ದಾಗಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.