Advertisement

ಹಕ್ಕುಪತ್ರ ಬೇಡಿಕೆ ಈಡೇರಿಲ್ಲ

06:00 AM Aug 12, 2018 | Team Udayavani |

ಕುಂದಾಪುರ ಪುರಸಭೆಯ ಈಸ್ಟ್‌ ಬ್ಲಾಕ್‌ ವಾರ್ಡ್‌ನಲ್ಲಿ  ಚರಂಡಿ, ಸ್ಲಾಬ್‌ ಅಳವಡಿಕೆ, ರಸ್ತೆ ನಿರ್ಮಾಣದಂತಹ ಕೆಲಸಗಳು ಈಗಾಗಲೇ ನಡೆದಿವೆ. ಆದರೂ ಕೆಲವೆಡೆ ಚರಂಡಿಗಳ ನಿರ್ಮಾಣವಾಗಬೇಕಿದ್ದು, ನಿವೇಶನ ಸಮಸ್ಯೆ ಇದೆ.

Advertisement

ಕುಂದಾಪುರ: ಚಿಕ್ಕನ್‌ಸಾಲ್‌ ರಸ್ತೆ ಹಾಗೂ ಖಾರ್ವಿಕೇರಿಯ ಭಾಗಗಳನ್ನು ಹೊಂದಿದ ವಾರ್ಡ್‌ ಈಸ್ಟ್‌ ಬ್ಲಾಕ್‌ ವಾರ್ಡ್‌. ಬಿಜೆಪಿ ಪಾರಮ್ಯ ಇರುವ ಕ್ಷೇತ್ರ.ಈ ವಾರ್ಡ್‌ನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇವುಗಳಲ್ಲಿ ಪ್ರಮುಖವಾಗಿ ಚರಂಡಿ, ಸ್ಲಾಬ್‌ ಅಳವಡಿಕೆ, ರಸ್ತೆ ನಿರ್ಮಾಣ ನಡೆದಿದೆ. ಆದರೆ ಅನೇಕರಿಗೆ ಹಕ್ಕುಪತ್ರದ ಸಮಸ್ಯೆ ಇದ್ದು ಇತ್ಯರ್ಥವಾಗದೇ ಉಳಿದಿದೆ.

ಒಂದೆಡೆ ಹಾಲಾಡಿ ಹೊಳೆ, ಇನ್ನೊಂದೆಡೆ ಖಾರ್ವಿಕೇರಿ ರಸ್ತೆ ಹಾಗೂ ಚಿಕ್ಕನ್‌ಸಾಲ್‌ ರಸ್ತೆ, ಮತ್ತೂಂದೆಡೆ ಈಸ್ಟ್‌ಬ್ಲಾಕ್‌ ರಸ್ತೆ, ಪುರಸಭೆಯ ಮುಖ್ಯ ರಸ್ತೆಯಿದೆ.  ಮುಖ್ಯರಸ್ತೆಯಿಂದ ಆರಂಭಿಸಿ ರಾಮಚಂದ್ರ ಕಲ್ಯಾಣ ಮಂಟಪ, ಚಿಕ್ಕಮ್ಮನ ಸಾಲ್‌ ರಸ್ತೆ, ಪೊಲೀಸ್‌ ಕ್ವಾರ್ಟರ್ಸ್‌, ರಕ್ತೇಶ್ವರಿ ದೇವಸ್ಥಾನ ಇಲ್ಲೆಲ್ಲ ಅಂತಹ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಕಂಡು ಬಂದಿಲ್ಲ. 

ಆದ ಕೆಲಸ
ಕಾಂಕ್ರೀಟೀಕರಣ

ರಿಂಗ್‌ರೋಡ್‌ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ ಅಳವಡಿಸಬೇಕೆಂದು ಅನೇಕ ಸಮಯದಿಂದ ಇದ್ದ ಜನರ ಬೇಡಿಕೆ ಈಡೇರಿದೆ.  

ಚರಂಡಿ ಅಭಿವೃದ್ಧಿ
ಈಸ್ಟ್‌ ಬ್ಲಾಕ್‌ ರಸ್ತೆಯ ದಿನೇಶ್‌ ಗಾಣಿಗ ಅವರ ಮನೆ ಹತ್ತಿರದಿಂದ 2 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಅಭಿವೃದ್ಧಿ ಮಾಡಲಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುವ ಸಮಸ್ಯೆ ತಪ್ಪಿದೆ. 

Advertisement

ಹೊಸ ರಸ್ತೆ
ಮಹಾಕಾಳಿ ದೇವಸ್ಥಾನ ಎದುರು ಚರಂಡಿ ನಿರ್ಮಾಣ ಮತ್ತು ಸ್ಲಾಬ್‌ ಅಳವಡಿಸಲಾಗಿದೆ. ಬಾಲಕಿಯರ ಹಾಸ್ಟೆಲ್‌ ಸಮೀಪ ಬಹುಕಾಲದ ಬೇಡಿಕೆಯಾಗಿದ್ದ ಚರಂಡಿ ಹಾಗೂ ಹೊಸ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಪುರಸಭೆ 3.9 ಲಕ್ಷ ರೂ. ವ್ಯಯಿಸಿದೆ. ಇದರಿಂದಾಗಿ ಈ ಭಾಗದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಇಂಟರ್‌ಲಾಕ್‌
ಎ.ಬಿ. ಶೆಟ್ಟಿ ಕಾಂಪೌಂಡ್‌ ಬಳಿಯಿಂದ ಡೊÂಗಫೆರಿ ರಸ್ತೆ ಎಡಬದಿಗೆ ಸುಮಾರು 4.28 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ಗಳನ್ನು ಅಳವಡಿಸಲಾಗಿದೆ. ಈಸ್ಟ್‌ ವೆಸ್ಟ್‌ ಕ್ಲಬ್‌ನ ಹಿಂಭಾಗದ ಚರಂಡಿಯ ಅಭಿವೃದ್ಧಿ ಕಾಮಗಾರಿ ನಡೆದಿದೆ.

ರಿಂಗ್‌ರೋಡ್‌
ರಿಂಗ್‌ರೋಡ್‌ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ ಹಾಕಬೇಕು ಎಂಬುದು ಜನ ಸಾಮಾನ್ಯರ ಬಹುಕಾಲದ ಬೇಡಿಕೆಯಾಗಿತ್ತು. ಜನರ ಬೇಡಿಕೆಗೆ ಅನುಸಾರವಾಗಿ ಈ ರಸ್ತೆಗೆ ಕಾಂಕ್ರೀಟ್‌ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಲಾಗಿದೆ.

ಆಗದೆ ಇರುವ ಕೆಲಸ
ನಿವೇಶನ ಸಮಸ್ಯೆ

ಖಾರ್ವಿಕೇರಿಯ ನೂರಾರು ಮಂದಿಗೆ ನಿವೇಶನವೇ ಇಲ್ಲ. ಈ ಕುರಿತು ಸಾಕಷ್ಟು ಹೋರಾಟಗಳಾಗಿವೆ. ಪುರಸಭೆಗೂ ಬೇಡಿಕೆ ಪಟ್ಟಿ ಮಂಡಿಸಲಾಗಿದೆ. ಆದರೆ ಬೇಡಿಕೆ ಈಡೇರಿಲ್ಲ. ಸರಕಾರ ಅಸ್ತಿತ್ವಕ್ಕೆ ತಂದ 94ಡಿ ಕಾನೂನು ಪ್ರಕಾರ ಇರುವವನೇ ಮನೆಯೊಡೆಯ ಕಾನೂನಿನಂತೆ ಇವರಿಗೆಲ್ಲ ಮನೆ ನಿವೇಶನ ದೊರೆಯಬೇಕೆಂಬ ಬೇಡಿಕೆಯಿದೆ. 

ಚರಂಡಿ ಬೇಡಿಕೆ
ಕೇರಿಯ ಮಧ್ಯದಲ್ಲಿಯೇ ಚರಂಡಿ ವ್ಯವಸ್ಥೆಯಿಲ್ಲ. ಇದರಿಂದಾಗಿ ಮಳೆ ಬಂದರೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ವಾಹನ ಸಂಚಾರಕ್ಕೆ ಕೂಡ ಈ ಸಂದರ್ಭ ಅಡಚಣೆ ಉಂಟಾಗುತ್ತಿದ್ದು, ಅನೇಕ ಸಮಯದಿಂದ ಇಲ್ಲಿ ಚರಂಡಿ ನಿರ್ಮಾಣಕ್ಕೆ ಬೇಡಿಕೆಯಿದೆ. ಆದರೆ ಸ್ವಲ್ಪ ದೂರ ಖಾಸಗಿ ಜಾಗ ಇರುವ ಕಾರಣ ಸಮಸ್ಯೆ ಹಾಗೆಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next