ಈ ಬಾರಿ ಕುಂದಾಪುರ ಪುರಸಭೆಯಲ್ಲಿ ಮಾತ್ರ 23 ವಾರ್ಡ್‌ಗಳ ಪೈಕಿ ಕೇವಲ 10 ವಾರ್ಡ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. 2007 ರಲ್ಲಿದ್ದ ವಾರ್ಡುವಾರು ಮೀಸಲಾತಿ ಪಟ್ಟಿಯನ್ನೇ 2013 ರಲ್ಲಿಯೂ ಮುಂದುವರಿಸಿದ್ದು, ಈಗ 10 ವರ್ಷಗಳ ಅನಂತರ ವಾರ್ಡುವಾರು ಮೀಸಲಾತಿಯನ್ನು ಬದಲಿಸಲಾಗಿದೆ.
Advertisement
ಒಂದೇ ಮೀಸಲಾತಿಪ್ರತಿ 5 ವರ್ಷಕ್ಕೊಮ್ಮೆ ವಾರ್ಡುವಾರು ಮೀಸಲಾತಿ ಬದಲಾಗಬೇಕು ಎನ್ನುವ ನಿಯಮವಿದ್ದರೂ, ಕಳೆದ 3 ಅವಧಿಯಿಂದಲೂ ಕುಂದಾಪುರ ಪುರಸಭೆಯ ಹುಂಚಾರುಬೆಟ್ಟು ವಾರ್ಡಿನಲ್ಲಿ ಸಾಮಾನ್ಯ ಮಹಿಳೆಗೆ, ಮದ್ದುಗುಡ್ಡೆ ವಾರ್ಡಿನಲ್ಲಿ ಸಾಮಾನ್ಯ, ಸೆಂಟ್ರಲ್ ವಾರ್ಡ್‌ನಲ್ಲಿ ಸಾಮಾನ್ಯಕೋಡಿ ಉತ್ತರ ವಾರ್ಡ್‌ನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಪಟ್ಟಿ ಮೇ 25 ಕ್ಕೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರು ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಆದರೆ ಅದರ ಪ್ರಕಾರ ವಾರ್ಡುವಾರು ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಕೆಗೆ 7 ದಿನಗಳ ಕಾಲಾವಕಾಶ ಈಗಾಗಲೇ ಮುಗಿದಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್, ಅವಧಿ ಮುಗಿದಿದ್ದರೂ, ಏನಾದರೂ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಡಿಸಿಯವರಿಗೆ ಕಳುಹಿಸಬಹುದು ಎಂದು ತಿಳಿಸಿದ್ದಾರೆ.