Advertisement

ಕುಂದಾಪುರ: ಬಿಜೆಪಿ ಗೆಲುವಿನ ಅಂತರ ಹೆಚ್ಚಿಸಲು ಬೃಹತ್‌ ಪಾದಯಾತ್ರೆ

03:59 PM May 07, 2023 | Team Udayavani |

ಕುಂದಾಪುರ: ಕುಂದಾಪುರದಲ್ಲಿ ಮತದಾರರು ಬಿಜೆಪಿ ಗೆಲುವನ್ನು ನಿಶ್ಚಯಿಸಿ ಆಗಿದೆ. ಭವಿಷ್ಯದ ಭರವಸೆಗಾಗಿ, ಮೋದಿ ಅವರ ಸಮರ್ಥ ನಾಯಕತ್ವಕ್ಕಾಗಿ, ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್‌ ಎಂಜಿನ್‌ನ ಆಡಳಿತ ನೀಡುವ ಸಲುವಾಗಿ ಮತದಾರರಿಗೆ ಬಿಜೆಪಿಯೇ ಉತ್ತಮ ಆಯ್ಕೆ. ಬಿಜೆಪಿ ಗೆಲುವಿನ ನಾಗಾಲೋಟ ತಡೆಯಲು ಯಾರಿಂದಲೂ ಸಾಧ್ಯವಾಗದು. ಆದರೆ ಹತಾಶ ಕಾಂಗ್ರೆಸ್‌ ಅಪಪ್ರಚಾರದ ಹಾದಿ ಹಿಡಿದಿದೆ ಎಂದು ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಹೇಳಿದರು.

Advertisement

ಅವರು ಶನಿವಾರ ಸಂಜೆ ಇಲ್ಲಿನ ನೆಹರೂ ಮೈದಾನದಿಂದ ಬಸ್‌ನಿಲ್ದಾಣವರೆಗೆ ಸಾಗಿ ಕುಂದೇಶ್ವರ ದೇವಸ್ಥಾನದಲ್ಲಿ ಸಮಾಪನಗೊಂಡ ಬಳಿಕದ ಸಭೆಯಲ್ಲಿ ಮಾತನಾಡಿದರು.

ಈವರೆಗೆ ಚುನಾವಣ ರಾಜಕೀಯದಲ್ಲಿ ಸ್ಪರ್ಧಿಸದೇ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡಿದವ. ಪಕ್ಷದಲ್ಲಿ ಯಾವುದೇ ಹುದ್ದೆಗೆ ಆಕಾಂಕ್ಷೆ ಪಟ್ಟವನಲ್ಲ. ಅಂತಹ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದೆ. ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮುಂದಾಳುತ್ವದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಪಕ್ಷದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸದಾ ಸರ್ವದಾ ಸಮಾಜದ ಒಳಿತಿಗಾಗಿ ಶ್ರಮಿಸುವ ಹಿಂದೂ ಸಂಘಟನೆಗಳ ಮೇಲೆ ಕಣ್ಣು ಹಾಕಿದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನೆಮ್ಮದಿಯಲ್ಲಿ ಬದುಕಲು ಬಿಡುವುದಿಲ್ಲ ಎಂದು ಚುನಾವಣೆಗೆ ಮುನ್ನವೇ ಘೋಷಿಸಿಕೊಂಡಂತಾಗಿದೆ. ತುಷ್ಟೀಕರಣದ ಮೂಲಕ ಹಿಂದೂಗಳ ಮಾರಣಹೋಮಕ್ಕೆ ಮುನ್ನುಡಿ ಬರೆವ ಮಾತಾಡಿದೆ. ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹಿಂದೂ ಕಾರ್ಯಕರ್ತರ ಸಾವಿಗೆ ಕಾರಣವಾದ ಸಂಘಟನೆಗಳ ಮೇಲೆ ಬಿಜೆಪಿ ಸರಕಾರ ನಿಷೇಧ ಹೇರಿದೆ. ಆದರೆ ಕಾಂಗ್ರೆಸ್‌ ಅವರ ಕೇಸುಗಳನ್ನು ಖುಲಾಸೆಗೊಳಿಸಿದೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್‌ ಶೆಟ್ಟಿ ಗೋಪಾಡಿ, ಸತೀಶ್‌ ಪೂಜಾರಿ ವಕ್ವಾಡಿ, ಯುವಮೋರ್ಚಾ ಅಧ್ಯಕ್ಷ ಅವಿನಾಶ್‌ ಉಳೂ¤ರು, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.

Advertisement

ಮೇಳೈಸಿದ ಕೇಸರಿ
ಟೀಕಿಸುವವರ ಕಣ್ಣು ಕೋರೈಸುವಂತೆ ನಗರದ ಬೀದಿ ಬೀದಿಗಳಲ್ಲಿ ಜಾಥಾದುದ್ದಕ್ಕೂ ಕೇಸರಿ ಶಾಲು, ಕೇಸರಿ ಧ್ವಜ ರಾರಾಜಿಸಿತು. ಕಾಂಗ್ರೆಸ್‌ ಮಂಡಿಸಿದ ಬಜರಂಗದಳ ನಿಷೇಧದ ಪ್ರಸ್ತಾಪಕ್ಕೆ ಬಿಜೆಪಿ ದಿಟ್ಟವಾಗಿ ಉತ್ತರ ನೀಡಲು ಎಲ್ಲೆಡೆ ಹಿಂದೂ ಸಂಘಟನೆ, ಹಿಂದುತ್ವ ನಮ್ಮ ಹೆಮ್ಮೆ ಎಂಬಂತೆ ಬಳಸುತ್ತಿದೆ.

ಭರವಸೆ
ಕುಂದಾಪುರ ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಪ್ರಯತ್ನ, ಕುಂದಾಪುರ ರಿಂಗ್‌ರೋಡ್‌ ಪೂರ್ಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತ ದರ್ಜೆಗೇರಿಸಲು ಪ್ರಯತ್ನ, ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗದ ಅವಕಾಶಕ್ಕಾಗಿ ವಿಶೇಷ ಕೈಗಾರಿಕಾ ವಲಯದ ಸ್ಥಾಪನೆಗೆ ಪ್ರಯತ್ನ , ಗ್ರಾಮದ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಪ್ರಯತ್ನ , ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಕಿರಣ್‌ ಕುಮಾರ್‌ ಕೊಡ್ಗಿ

Advertisement

Udayavani is now on Telegram. Click here to join our channel and stay updated with the latest news.

Next