Advertisement

ಕುಂದಾಪುರ ಕೋಡಿ ಸೇತುವೆ ಕಾಮಗಾರಿ ವಾರದಲ್ಲಿ ಆರಂಭ

11:17 PM Jan 18, 2021 | Team Udayavani |

ಕುಂದಾಪುರ:  ವಿನಾಯಕ ಥಿಯೇ ಟರ್‌ ಬಳಿಯಿಂದ ಕೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಶಿಥಿಲ ಸೇತುವೆಯ ಕಾಮಗಾರಿ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

Advertisement

ಬೇಗ ಆರಂಭ :

ಇಲ್ಲಿನ ಬಸ್ರೂರು ಮೂರುಕೈ ಸಮೀಪದಿಂದ ವಿನಾಯಕ ಥಿಯೇಟರ್‌ ಪಕ್ಕದ ರಸ್ತೆಯಲ್ಲಿ ಕೋಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಆದರೆ ಇದರಲ್ಲೇ ಕೋಡಿಗೆ ಹೋಗುವ ಬಸ್‌ಗಳು, ಘನ ವಾಹನಗಳ ಸಂಚಾರ ಮುಂದುವರಿದಿದ್ದು ತೀವ್ರ ಅಪಾಯಕಾರಿಯಾಗಿದೆ. ಈ ಬಗ್ಗೆ “ಉದಯವಾಣಿ’ “ಸುದಿನ’ ವರದಿ ಮಾಡಿತ್ತು. ಇದಕ್ಕೆ ಶಾಸಕರು 2 ಕೋ. ರೂ. ಅನುದಾನ ಮಂಜೂರು ಮಾಡಿದ್ದು ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಬಸೂÅರಿನ ವಿಜಯಾನಂದ ಶೆಟ್ಟಿ ಅವರಿಗೆ ಗುತ್ತಿಗೆಯಾಗಿದ್ದು  ಕಾಮಗಾರಿ ಶೀಘ್ರ ಆರಂಭವಾಗಲಿದೆ. ಮೂರು ತಿಂಗಳ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನುದಾನ ಮಂಜೂರು :

ರಾಷ್ಟ್ರೀಯ ಹೆದ್ದಾರಿ ಹಂಗಳೂರು ಜಂಕ್ಷನ್‌ನಿಂದ ಬಸ್‌, ರಿಕ್ಷಾ, ಲಾರಿ ಎಂದು ನೂರಾರು ವಾಹನಗಳು ಪ್ರತಿನಿತ್ಯ ಓಡಾಡುವ ಶ್ರೀರಾಮ ವಿದ್ಯಾ ಕೇಂದ್ರದ ಬಳಿಯ ಹಾಗೂ ಬಡಾಕೆರೆಯ ಸೇತುವೆಗಳು ಶಿಥಿಲವಾಗಿವೆ. ಪೂರ್ಣ ನಾದುರಸ್ತಿಯಲ್ಲಿರುವ ಈ ಎರಡು ಸೇತುವೆಗಳನ್ನು ತೆಗೆದು ಹೊಸದಾಗಿ ರಚಿಸಲು 2 ಕೋ.ರೂ. ಮಂಜೂರಾಗಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸೇತುವೆ ರಚನೆಗಾಗಿ ಫೆಬ್ರವರಿಯಲ್ಲೇ ಅನುದಾನವನ್ನು ಮುಖ್ಯಮಂತ್ರಿಗಳಿಂದ ಖುದ್ದು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಆದರೆ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಈ ವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ.

Advertisement

ಅಪಾಯದಲ್ಲಿ :

ಸೇತುವೆ ಮೇಲೆ ಹಾಕಿದ್ದ ಡಾಮರು ಎಂದೋ ಎದ್ದು ಹೋಗಿದೆ. ತಡೆಹಿಡಿಕೆಗಳು ತುಕ್ಕು ಹಿಡಿದಿವೆ. ಸೇತುವೆ ಸ್ತಂಭದ ಕಲ್ಲುಗಳು ಕುಸಿಯಲಾರಂಭವಿಸಿವೆ. ಅನೇಕ ಸಮಯದಿಂದ ಈ ಕುರಿತು ಬೇಡಿಕೆ ಇದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂಬ ದೂರು ಕೂಡ ಕೇಳಿಬಂದಿತ್ತು.

ಮಳೆಗಾಲದ ಭಯ :

ಇಲ್ಲಿ ಕಾಮಗಾರಿ ಬೇಗ ಆರಂಭಿಸಬೇಕಾದ ಅನಿವಾರ್ಯವೂ ಇದೆ. ಏಕೆಂದರೆ ಒಂದೆಡೆ ಸೇತುವೆ ಶಿಥಿಲವಾಗಿದೆ. ಇನ್ನೊಂದೆಡೆ ಸಮೀಪದ ರಸ್ತೆ, ಮೋರಿ ಕುಸಿತಕ್ಕೊಳಗಾಗುತ್ತಿದೆ. ಅಷ್ಟಲ್ಲದೇ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಬೇಕಿದ್ದು ಬೇಗ ಕಾಮಗಾರಿ ಪೂರ್ಣಗೊಳ್ಳದೇ ಇದ್ದರೆ ಓಡಾಟಕ್ಕೆ ತೊಂದರೆ ಯಾಗಲಿದೆ. ಮಳೆಗಾಲ ಆರಂಭವಾದರೆ ಅರೆಬರೆ ಕಾಮಗಾರಿಯಾದರೆ ಎಲ್ಲವೂ ಅಯೋಮಯ ಆಗಲಿದೆ.  ಇಲ್ಲಿ ಫಿಶ್‌ಮಿಲ್‌ ಕಾರ್ಖಾನೆಗಳಿಗೆ ಹೋಗುವ ದೊಡ್ಡ ಲಾರಿಗಳು ಸೇರಿದಂತೆ ಘನ ವಾಹನಗಳು ಓಡಾಡುವ ಕಾರಣ ಸೇತುವೆ ಮೇಲಿನ ಓಡಾಟ ತಂತಿ ಮೇಲಿನ ಓಡಾಟದಷ್ಟೇ ಗಂಭೀರವಾಗಿದೆ.

ಕಳೆದ ಒಂದು ವರ್ಷದಿಂದ ಹಂಗಳೂರು, ಎಂ-ಕೋಡಿ, ಹಳೆ ಅಳಿವೆ, ಕೋಡಿ ಬೀಚ್‌ಗೆ ಸಂಬಂಧಿಸಿದಂತೆ ಓಡಾಟಕ್ಕೆ ವಾಹನಗಳು ಈ ಸೇತುವೆ ಮೇಲೆಯೇ ಭಯದಿಂದ ಸಂಚಾರ ನಡೆಸುತ್ತಿದ್ದವು. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಬೇಕು ಎನ್ನುವುದು ಒತ್ತಾಯ.  – ಮಹೇಶ್‌ ಶೆಣೈ ಕುಂಭಾಶಿ ರಿಕ್ಷಾ ಚಾಲಕ, ವಿನಾಯಕ ಪಾರ್ಕಿಂಗ್‌

ಎರಡು ಸೇತುವೆಗಳ ಕಾಮಗಾರಿಗೆ 2 ಕೋ.ರೂ.ಮಂಜೂರಾಗಿದ್ದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕೆಲಸಕ್ಕೆ ಆದೇಶ ನೀಡಲಾಗಿದೆ. 1 ವಾರದಲ್ಲಿ ಗುತ್ತಿಗೆ ಪಡೆದವರು ಕೆಲಸ ಆರಂಭಿಸಲಿದ್ದಾರೆ.  ದುರ್ಗಾದಾಸ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next