Advertisement

ಕುಂದಾಪುರ: ಕೋಡಿ ಕಡಲು ನೀಲ ವರ್ಣಕ್ಕೆ ; ಜನರಲ್ಲಿ ಕುತೂಹಲ

03:07 PM Mar 27, 2022 | Team Udayavani |

ಕುಂದಾಪುರ: ಕೋಡಿ ಕಡಲತೀರದಲ್ಲಿ ನೀರಿನ ಬಣ್ಣ ನೀಲ ವರ್ಣಕ್ಕೆ ತಿರುಗಿದ ಜೈವಿಕ ಪ್ರಕಾಶದ ವಿದ್ಯಮಾನ ಮಾರ್ಚ್ 24 ರ ಗುರುವಾರ ರಾತ್ರಿ ಕಂಡು ಬಂದಿದ್ದು, ಜನರು ಆ ವಿದ್ಯಮಾನವನ್ನು ಮತ್ತೆ ನೋಡಲು ಕಾತುರರಾಗಿದ್ದಾರೆ.

Advertisement

ನೀಲಿ ಅಲೆಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ಕಡಲತೀರ ಸಾಕ್ಷಿಯಾಯಿತು.ಅವರಲ್ಲಿ ಹೆಚ್ಚಿನವರು ತಡರಾತ್ರಿಯವರೆಗೂ ಇದ್ದು, ಅಪರೂಪದ ರಮ್ಯಾ ಮನೋಹರ ಕ್ಷಣವನ್ನು ಕಣ್ ತುಂಬಿಕೊಂಡರು, ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಂಡರು.

2020 ರಲ್ಲಿ, ಮಲ್ಪೆಯಿಂದ ಕಾರವಾರದವರೆಗಿನ ಕಡಲತೀರಗಳಲ್ಲಿ ಬಯೋಲ್ಯೂಮಿನೆಸೆನ್ಸ್ ಮಿಂಚುವಿಕೆಯ ಬಗ್ಗೆ ಸುದ್ದಿ ಹರಡಿದ ನಂತರ, ಈ ವಿದ್ಯಮಾನವನ್ನು ವೀಕ್ಷಿಸಲು ಸಾವಿರಾರು ಜನರು ರಾತ್ರಿ ವೇಳೆ ಬೀಚ್‌ಗಳಿಗೆ ಮುಗಿ ಬಿದ್ದು ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

ಬಯೋಲ್ಯುಮಿನೆಸೆನ್ಸ್ ಎನ್ನುವುದು ಜೀವಂತ ಜೀವಿಗಳು ಅಥವಾ ಪಾಚಿಗಳಿಂದ ಅವುಗಳ ದೇಹದಲ್ಲಿನ ರಾಸಾಯನಿಕ ಕ್ರಿಯೆಗಳ ಮೂಲಕ ಹೊರಸೂಸುವ ಬೆಳಕು. ಇದು ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಅಥವಾ ಕೆಸರು ಇಲ್ಲವೇ ಮರಳಿನಲ್ಲಿ ಬ್ಯಾಕ್ಟೀರಿಯಾಗಳ ಹೊಳಪು ಆಗಿರಬಹುದು.

Advertisement

Udayavani is now on Telegram. Click here to join our channel and stay updated with the latest news.

Next