Advertisement
ಭೂಬಾಲನ್ ಅವರು ಶುಕ್ರವಾರದಂದು ತುಮಕೂರು ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ತಮಿಳುನಾಡು ಮೂಲದ ಭೂಬಾಲನ್ 2015ರ ಐಎಎಸ್ ಬ್ಯಾಚ್‌ನ ಅಧಿಕಾರಿಯಾಗಿದ್ದು, 2018ರ ಜ. 16ರಂದು ಕುಂದಾಪುರ ಎಸಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಪಡೆದಿದ್ದರು.
ಚುನಾವಣಾ ಸಂದರ್ಭ ನಡೆದ ಹಲ್ಲೆ ಪ್ರಕರಣ, ಅಕ್ರಮ ಮರಳುಗಾರಿಕೆ ಸ್ವಲ್ಪ ಮಟ್ಟಿಗಿನ ಸವಾಲಿನ ಸಂಗತಿಯಾಗಿತ್ತು. ಒಟ್ಟಾರೆ ಇಲ್ಲಿನ ಪ್ರಾದೇಶಿಕ ಸೌಂದರ್ಯವನ್ನು ಆನಂದಿಸಿದ್ದೇನೆ. ಇಲ್ಲಿನ ಜನರಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ ಎಂದು ಟಿ. ಭೂಬಾಲನ್ “ಉದಯವಾಣಿ’ಗೆ ತಿಳಿಸಿದ್ದಾರೆ.