Advertisement

ಕುಂಡಡ್ಕ ದೇವಸ್ಥಾನ ಬ್ರಹ್ಮಕಲಶ ಧರ್ಮಸಭೆ

12:59 AM Feb 09, 2019 | |

ವಿಟ್ಲ: ಕುಂಡಡ್ಕ ದೇಗುಲ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬರೂ ತನು-ಮನ-ಧನದ ಸಹಕಾರ ನೀಡಿದ್ದು ಮಾದರಿಯಾಗಿದೆ. ಇಲ್ಲಿನ ಸ್ವಾವಲಂಬಿ ಗ್ರಾಮದ ಕಲ್ಪನೆ ಸಾಕಾರಗೊಳ್ಳಲಿ ಎಂದು ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಶುಕ್ರವಾರ ಕುಳ-ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ, ಶಿಬರಿಕಲ್ಲ ಮಾಡ ಶ್ರೀ ಮಲರಾಯ – ಮೂವರ್‌ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆನು ವಂಶಿಕ ಮೊಕ್ತೇಸರ ರತ್ನಾಕರ ರಾಜ ಕಿನ್ಯಕ್ಕ ಬಲ್ಲಾಳರು ಅಧ್ಯಕ್ಷತೆ ವಹಿಸಿದ್ದರು. ಕರಿಂಜೆ ಓಂ ಶ್ರೀ ಶಕ್ತಿಗುರು ಮಠ ಶ್ರೀಕ್ಷೇತ್ರ ಶ್ರೀ ಮುಕ್ತಾನಂದ ಸ್ವಾಮೀಜಿ, ಮಂಗಳೂರು ಇಸ್ಕಾನ್‌ ಅಧ್ಯಕ್ಷ ಶ್ರೀ ಕಾರುಣ್ಯಸಾಗರದಾಸ ಪ್ರಭು ಆಶೀರ್ವಚನ ನೀಡಿದರು.

ಗಣ್ಯರಾದ ಜಗನ್ನಾಥ ಚೌಟ ಮಾಣಿ, ಶ್ರೀಧರ ಶೆಟ್ಟಿ ದೇವರಗುಂಡಿ, ಸದಾಶಿವ ಆಚಾರ್ಯ ಕೈಂತಿಲ ವಿಟ್ಲ, ಡಾ| ಕೆ.ಎಂ. ಕೃಷ್ಣ ಭಟ್‌ ಕೊಂಕೋಡಿ, ಡಾ| ಎಂ.ಎಸ್‌. ಗೋವಿಂದೇ ಗೌಡ,

ಅಜಿತ್‌ ರೈ ಮಾಲಾಡಿ, ಎನ್‌.ಕೆ. ಶಿವ, ಡಾ| ರವಿಶಂಕರ್‌ ಪೆರ್ವಾಜೆ, ಡಾ| ಅಶೋಕ್‌ ಜಿ.ಕೆ., ಸುಂದರ ಆಚಾರ್ಯ ಬೆಳುವಾಯಿ, ಯೋಗೀಶ್‌ ಕುಡ್ವ, ಕೆ.ಟಿ.
ವೆಂಕಟೇಶ್ವರ ನೂಜಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಮ್ಮಾನ
ನಿವೃತ್ತ ಸೈನಿಕರಾದ ರಮೇಶ್‌ ಬಿ.ಕೆ. ಪಟ್ಲ, ಲಿಂಗಪ್ಪ ಗೌಡ ಆಲಂಗಾರು, ಕ್ರೀಡಾ ಕ್ಷೇತ್ರದ ಶ್ರೇಯಾ ಡಿ. ಶೆಟ್ಟಿ, ಯಕ್ಷಗಾನ ಕಲಾವಿದ ಶಿವಪ್ರಸಾದ್‌ ಭಟ್‌, ನಾಟಿ ವೈದ್ಯ ಬಾಲು ನಾಯ್ಕ ಕುಡುವರಬೆಟ್ಟು ಅವರನ್ನು ಸಮ್ಮಾನಿಸಲಾಯಿತು.
ತಿಮ್ಮಪ್ಪ ಮಂಜಪಾಲು ಸ್ವಾಗತಿಸಿ ದರು. ಹರೀಶ್‌ ಪೂಜಾರಿ ನೀರಕೋಡಿ ಪ್ರಸ್ತಾವನೆಗೈದರು. ನವೀನ್‌ ಮೂಡೈ ಮಾರು ವಂದಿಸಿದರು. ಪೂಜಾ ದರ್ಬೆ ನಿರೂಪಿಸಿದರು. ಶ್ರೀಪತಿ ನಾಯಕ್‌, ಸುಮಂತ್‌ ಆಳ್ವ ಪ್ರತಿಭಾ ಪುರಸ್ಕಾರ ನಡೆಸಿದರು. ನಾರಾಯಣ ಪೂಜಾರಿ ಎಸ್‌.ಕೆ., ಸುನೀತಾ ಅಡ್ಯಾಲು ಗೌರವಾರ್ಪಣೆ ನಡೆಸಿದರು.

ಮಾತೃ ಸಮಾವೇಶ
ಬೆಳಗ್ಗೆ ನಡೆದ ಮಾತೃ ಸಮಾವೇಶ ದಲ್ಲಿ ಒಡಿಯೂರು ಸಂಸ್ಥಾನದ ಸಾಧಿ Ì ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿದರು. ರಾಷ್ಟ್ರಸೇವಿಕಾ ಸಮಿತಿ ಪ್ರಾಂತ ಕಾರ್ಯ ಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವರ್ಮುಡಿ ಪದ್ಮಿನಿ ರಾಮ ಭಟ್‌ ಆಲಂಗಾರು, ಅರಣ್ಯ ಇಲಾಖೆಯ ಶಶಿಕಲಾ ಶಿವಮೊಗ್ಗ ಉಪಸ್ಥಿತರಿದ್ದರು.

ಗ್ರಾಮಸ್ಥರಿಗೆ ಸಮ್ಮಾನ
ಬ್ರಹ್ಮಕಲಶ ಸಂದರ್ಭ ಪ್ರತಿದಿನ ಧರ್ಮಸಭೆಯ ಬಳಿಕ ದೇಗುಲ ನಿರ್ಮಾಣಕ್ಕೆ ಕಾರಣರಾದ ಗ್ರಾಮಸ್ಥ ರನ್ನು ಅತಿಥಿಗಳು ಸಮ್ಮಾನಿಸುತ್ತಾರೆ. ಕುಟುಂಬದ ಮುಖ್ಯಸ್ಥರನ್ನು ಕುಳ್ಳಿರಿಸಿ, ಸಮ್ಮಾನಿಸಲಾಗುತ್ತದೆ. ಕುಟುಂಬಸ್ಥರು ಅವರ ಹಿಂದೆ ನಿಂತಿರುತ್ತಾರೆ. ಇದು ಈ ಬ್ರಹ್ಮಕಲಶ ಸಭೆಯ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next