Advertisement

ಸವಣೂರು: ಶಿಥಿಲಾವಸ್ಥೆಯಲ್ಲಿದೆ ಕುಂಡಡ್ಕ ಸೇತುವೆ

12:52 AM Jun 23, 2020 | Sriram |

ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವ ಕುಂಡಡ್ಕದಲ್ಲಿ ಗೌರಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಏಕೈಕ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಹಂತದಲ್ಲಿದೆ. ಈ ಭಾಗದ ಜನರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಸೇತುವೆಯ ಪಿಲ್ಲರ್‌ ಶಿಥಿಲವಾಗಿದ್ದು, ಅಗಲ ಕಿರಿದಾದ ಈ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಚಲಿಸುತ್ತಿವೆ.

Advertisement

ಸೇತುವೆಗೆ ಸೂಕ್ತ ತಡೆಗೋಡೆ ಇಲ್ಲದೆ ಮಳೆಗಾಲದಲ್ಲಿ ವಾಹನ ಸವಾರರಿಗೆ, ಪುಟ್ಟ ಮಕ್ಕಳಿಗೆ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ತುಂಬಿದ್ದಾಗ ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಅಪಾಯ ಇದೆ.

ಈ ಸೇತುವೆಯು ಸುಳ್ಯ ವಿಧಾನಸಭೆ ಕ್ಷೇತ್ರಕ್ಕೊಳಪಟ್ಟಿದೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ತೆರಳಬೇಕಾದ ಪರಿಸ್ಥಿತಿ ಇದೆ.

ರಸ್ತೆ ತೀರಾ ಹದಗೆಟ್ಟಿದೆ
ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ, ಬೆಳಂದೂರು ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡ ಬಹುದು ಎನ್ನುವುದನ್ನು ಊಹಿಸುವುದು ಅಸಾಧ್ಯ. ಜತೆಗೆ ಸೇತುವೆಯನ್ನು ಸಂಪರ್ಕಿ ಸುವ ಬೆಳ್ಳಾರೆ ಜಿ.ಪಂ. ವ್ಯಾಪ್ತಿಗೆ ಬರುವ ಚೆನ್ನಾವರ ಮಸೀದಿ ಬಳಿಯಿಂದ ಹಾಗೂ ಕುಂಡಡ್ಕ ಜಂಕ್ಷನ್‌ ವರೆಗಿನ ರಸ್ತೆಯೂ ತೀರಾ ಹದಗೆಟ್ಟಿದೆ ಆ ರಸ್ತೆಯೂ ಅಭಿವೃದ್ಧಿಯಾಗಬೇಕಿದೆ. ಅಲ್ಲದೆ ಈ ಸೇತುವೆಗೆ ಅನುದಾನ ನೀಡುವಂತೆ ಶಾಸಕ ಅಂಗಾರ, ಸಂಸದ ನಳಿನ್‌ ಕುಮಾರ್‌, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ದ.ಕ.ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಲಾಗಿತ್ತು.

 ಶಾಸಕರ ಭರವಸೆ
ಈಗಿರುವ ಸೇತುವೆ ಅಗಲ ಕಿರಿದು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ಶಾಸಕ ಎಸ್‌. ಅಂಗಾರ ಅವರ ಗಮನಕ್ಕೂ ಸಾರ್ವಜನಿಕರು ತಂದಿದ್ದಾರೆ. ಈ ಕುರಿತು ಶಾಸಕರು ಮುಂದಿನ ವರ್ಷದಲ್ಲಿ ಸೇತುವೆ ಹಾಗೂ ಉಳಿದಿರುವ ರಸ್ತೆ ಡಾಮರು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಇಲ್ಲಿನ ಜನತೆಯ ಬೇಡಿಕೆ ಈಡೇರಿಸುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ 2 ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರು. ಆದರೆ ಈವರೆಗೂ ಅದರ ಯಾವುದೇ ಪ್ರಕ್ರಿಯೆ ನಡೆದಿಲ್ಲ. ತುರ್ತಾಗಿ ಸೇತುವೆಗೆ ಅನುದಾನ ನೀಡಬೇಕಿದೆ.
– ಪುಟ್ಟಣ್ಣ ನಾಯ್ಕ,
ಅಧ್ಯಕ್ಷರು, ಅಭ್ಯುದಯ ಯುವಕ ಮಂಡಲ, ಚೆನ್ನಾವರ

Advertisement

 ಸಣ್ಣ ಮಕ್ಕಳಿಗೆ ಅಪಾಯಕಾರಿ
ಅತೀ ಕಿರಿದಾದ ಸೇತುವೆಯಾಗಿದುದ್ದªರಿಂದ ಇದರಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳು ಮಾತ್ರ ಹೋಗು ವಂತಾಗಿದೆ. ಈ ಸೇತುವೆಯ ಮೂಲಕ ಮದ್ರಸ,ಅಂಗನವಾಡಿ, ಕಿ.ಪ್ರಾ. ಶಾಲೆಗೆ ಹೋಗಬೇಕಿದೆ.ಸೇತು ವೆಯ ಪಿಲ್ಲರ್‌ ಕುಸಿದಿದೆ.ಮಳೆಗಾಲ ದಲ್ಲಿ ಸೇತುವೆಯ ತಳಕ್ಕೆ ಬಡಿ ಯುವ ನೀರು,ಅಲುಗಾಡುವ ಸೇತುವೆ ಭಯದ ವಾತಾವರಣಕ್ಕೆ ಕಾರಣ ವಾಗಿದೆ.ಈ ಕುರಿತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು
– ಶರೀಫ್‌ ಕುಂಡಡ್ಕ, (ಸ್ಥಳೀಯರು)

Advertisement

Udayavani is now on Telegram. Click here to join our channel and stay updated with the latest news.

Next