Advertisement

ಮಾದರಿಯತ್ತ ಸಾಗುತ್ತಿದೆ ಕುಂಚಾವರಂ

12:46 PM Feb 07, 2018 | Team Udayavani |

ಚಿಂಚೋಳಿ: ತಾಲೂಕಿನ ಗಡಿಪ್ರದೇಶದ ಜನರಿಗೆ ಮೂಲ ಸೌಕರ್ಯ ನೀಡಲು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರಕಾರದ ವಿವಿಧ ಯೋಜನೆಗಳಿಂದ ಕೋಟ್ಯಂತರ ರೂ. ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿದ್ದರಿಂದ ಇದೀಗ ಕುಂಚಾವರಂ ಮಾದರಿಯತ್ತ ಸಾಗುತ್ತಿದೆ ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು.

Advertisement

ತಾಲೂಕಿನ ಶಾದೀಪುರದಲ್ಲಿ ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಕುಂಚಾವರಂ ಗಡಿಪ್ರದೇಶ ಅತ್ಯಂತ ತೀರ ಹಿಂದುಳಿದ ಪ್ರದೇಶವಾಗಿತ್ತು. ತಾವು ಶಾಸಕರಾದ ಬಳಿಕ ಕುಡಿಯುವ ನೀರು, ಸಿಸಿ ರಸ್ತೆ, ಆಸ್ಪತ್ರೆ ಕಟ್ಟಡ ನಿರ್ಮಾಣ, ಶಾಲೆ ಕೋಣೆಗಳು ಹಾಗೂ ಹೊಸದಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ಆಂಗ್ಲ ಮಾಧ್ಯಮ ವಸತಿ ಶಾಲೆ, ವಾಜಪೇಯಿ ಜನಸ್ನೇಹಿ ಕೇಂದ್ರ, ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ, ಪ್ರವಾಸಿ ಮಂದಿರ ನಿರ್ಮಾಣ, ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆಗೆ 9 ಕೋಟಿ ರೂ. ಗಳಲ್ಲಿ ಕುಂಚಾವರಂ ವಿದ್ಯುತ್‌ ವಿತರಣಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಶಿವರಾಮಪುರ, ಶಿವರೆಡ್ಡಿ, ಮಗದಂಪುರ, ಧರ್ಮಸಾಗರ, ವೆಂಕಟಾಪುರ, ಲಚಮಾಸಾಗರ, ಪೋಚಾವರಂ ಗ್ರಾಮಗಳ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಮಾಡಲಾಗಿದೆ ಎಂದು ಹೇಳಿದರು.

ಎಇಇ ಈರಣ್ಣ ಕುಣಕೇರಿ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪುಷ್ಪ ಪೂಜಾರಿ, ತುಳಸೀರಾಮ ಜಾಧವ, ರಾಮರಾವ ಪಾಟೀಲ, ಕೃಷ್ಣಾ ಸೇಠ, ತಾಪಂ ಸದಸ್ಯ ಚಿರಂಜೀವಿ, ಕುಂಚಾವರಂ ಗ್ರಾಪಂ ಅಧ್ಯಕ್ಷ ಗೋಪಾಲ, ಗ್ರಾಪಂ ಸದಸ್ಯರಾದ ಗೋಪಾಲ ಜಾಧವ, ಸಂಜೀವ ಪವಾರ, ಚಂದರ ಕಾರಭಾರಿ, ಮಧುಕರ ಪಾಟೀಲ, ಎಪಿಎಂಸಿ ನಿರ್ದೇಶಕ ಚಂದು ದಳಪತಿ, ಇಂದಮ್ಮ ಕಾವಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next