ಕುಮಟಾ: ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ 40 ವರ್ಷದೊಳಗೆ ಹಾಗೂ ಮೇಲ್ಪಟ್ಟ ಸಾರ್ವಜನಿಕರಿಗಾಗಿ ಶಾರದಾ ಹಾಗೂ ದುರ್ಗಯ್ಯ ದಿವಾಕರ ಸ್ಮರಣಾರ್ಥ ಆರ್.ಡಿ. ದಿವಾಕರ ಪ್ರಾಯೋಜಕತ್ವದಲ್ಲಿ ಲಾಯನ್ಸ್ ಕ್ಲಬ್ ವತಿಯಿಂದ ಚಿತ್ರಿಗಿ ವಿಷ್ಣು ತೀರ್ಥದಲ್ಲಿ ಈಜು ಸ್ಪರ್ಧೆ ನಡೆಯಿತು.
ಸ್ಪರ್ಧೆ ವಿಜೇತರ ಯಾದಿ ಇಂತಿದೆ: 1 ರಿಂದ 4ನೇ ತರಗತಿ ಹುಡುಗರಲ್ಲಿ ಅಥರ್ವ ಬಾಳಗಿ ಪ್ರಥಮ, ಆರ್ಯಾನ ರವಿ ನಾಯ್ಕ ದ್ವಿತೀಯ ಹಾಗೂ ಗಣೇಶ ಕುಬಾಲ ತೃತೀಯ ಸ್ಥಾನ ಪಡೆದರು. ಹುಡುಗಿಯರಲ್ಲಿ ಪೂರ್ವಿ ಅಶೋಕ ಶ್ಯಾನಭಾಗ ಪ್ರಥಮ, ಮಾನ್ಯಾ ನಾಯ್ಕ ದ್ವಿತೀಯ, ಸಮೀಕ್ಷಾ ಜೈನ್ ತೃತೀಯ ಸ್ಥಾನ ಪಡೆದರು. 5-6ನೇ ತರಗತಿ ಹುಡುಗರಲ್ಲಿ ಸ್ವಯಂ ಪೈ ಪ್ರಥಮ, ತುಷಾರ ಕುಬಾಲ ದ್ವಿತೀಯ, ಅನಂತ ಶ್ಯಾನಭಾಗ ತೃತೀಯ ಸ್ಥಾನ ಪಡೆದರು. ಹುಡುಗಿಯರಲ್ಲಿ ಅಕ್ಷತಾ ದೇಶಭಂಡಾರಿ ಪ್ರಥಮ, ಶ್ರೇಯಾ ನಾಯ್ಕ ದ್ವಿತೀಯ ಹಾಗೂ ಶ್ರೀಲಕ್ಷ್ಮಿ ಹೆಗಡೆ ತೃತೀಯ ಸ್ಥಾನ ಪಡೆದರು.
8ನೇ ತರಗತಿಯಿಂದ 10ನೇ ತರಗತಿಯವರೆಗಿನ ಹುಡುಗರಲ್ಲಿ ಸಂಕಲ್ಪ ನಾಯಕ ಪ್ರಥಮ, ಶರದ ನಾಯಕ ದ್ವಿತೀಯ, ಗಣಪತಿ ಶಾನಭಾಗ ಗೋಳಿ ತೃತೀಯ ಸ್ಥಾನ ಪಡೆದರು. ಹುಡುಗಿಯರಲ್ಲಿ ತೇಜಸ್ವಿನಿ ಶಾನಭಾಗ ಪ್ರಥಮ, ಕಾವ್ಯಾ ಆರ್. ದ್ವಿತೀಯ ಹಾಗೂ ದಿಶಾ ಪೂಜಾರಿ ತೃತೀಯ ಸ್ಥಾನ ಪಡೆದರು. ಕಾಲೇಜಿನ ವಿದ್ಯಾರ್ಥಿಗಳಲ್ಲಿ ವಿನೀತ್ ಶಾನಭಾಗ ಪ್ರಥಮ, ಪೃಥ್ವಿರಾಜ ನಾಯ್ಕ ದ್ವಿತೀಯ ಹಾಗೂ ಶ್ರೀಧರ ಕೇಶವ ಶಾನಭಾಗ ತೃತೀಯ ಸ್ಥಾನ ಪಡೆದರು. ವಿದ್ಯಾರ್ಥಿನಿಯರಲ್ಲಿ ನಮೃತಾ ಕಿಣಿ ಪ್ರಥಮ, ದೀಪ್ತಿ ನಾಯ್ಕ ದ್ವಿತೀಯ ಹಾಗೂ ಶಿವಾನಿ ಕಾಮತ್ ತೃತೀಯ ಸ್ಥಾನ ಪಡೆದರು. 40 ವರ್ಷದೊಳಗಿನ ಸಾರ್ವಜನಿಕರಲ್ಲಿ ಗೋವಿಂದ ಕಿಣಿ ಪ್ರಥಮ, ಕಿಶೋರ ಶೆಟ್ಟಿ ದ್ವಿತೀಯ, ಸುಧೀರ ಕಿಣಿ, ಕರುಣ ಹರಿಕಂತ್ರ ತೃತೀಯ ಸ್ಥಾನ ಪಡೆದರು.
40 ವರ್ಷ ಮೇಲ್ಪಟ್ಟ ಸಾರ್ವಜನಿಕರಲ್ಲಿ ದಿನೇಶ ಬಾಳಗಿ, ಧರ್ಮೇಂದ್ರ ನಾಯ್ಕ, ಡಾ| ಸಚ್ಚಿದಾನಂದ ನಾಯಕ, ಡಾ| ಸತೀಶ ನಾಯ್ಕ, ಮಹಿಳೆಯರಲ್ಲಿ ಮುಕ್ತ ಮಟ್ಟದಲ್ಲಿ ಸ್ವಾತಿ ಆರ್. ಪೈ, ಪಲ್ಲವಿ ಪ್ರಭು, ಪ್ರೀತಿ ಭಂಡಾರಿ, ಸಿರಿವಾಣಿ ಅನುಕ್ರಮವಾಗಿ ಬಹುಮಾನ ಪಡೆದರು.
ಡಾ| ವಿ.ಡಿ. ಕೆರೂರ್, ಡಾ| ಸಿ.ಎಸ್. ವರ್ಣೇಕರ, ಡಾ| ರೇವತಿ ರಾವ್, ಎಂ.ಎನ್. ಹೆಗಡೆ, ಎಂ.ಕೆ. ಶ್ಯಾನಭಾಗ, ಪ್ರಶಾಂತ ಪ್ರಭು, ಎಸ್.ಎಸ್. ಹೆಗಡೆ, ಡಾ| ಜಿ.ಜಿ. ಹೆಗಡೆ, ಡಾ| ಸತೀಶ ಪ್ರಭು, ಮೀರಾ ನಾಯಕ ಮತ್ತಿತರರು ಇದ್ದರು. ಡಾ| ಜಿ.ಡಿ. ಭಟ್ಟ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.