Advertisement

ಲಾಕ್‌ಡೌನ್‌ ಆದೇಶ ಪಾಲಿಸಿ ಸಹಕರಿಸಲು ಮನವಿ

05:32 PM Apr 07, 2020 | Naveen |

ಕುಮಟಾ: ಪಟ್ಟಣದ ಕೊಳಗೇರಿ ಪ್ರದೇಶಗಳಾದ ಹೊಸಹೆರವಟ್ಟಾದ ಮುಕ್ರಿಕೇರಿ, ಬಗ್ಗೊàಣದ ಇಪ್ಪಡಿ,
ಹೆರವಟ್ಟಾದ ಮುಕ್ರಿ ಕಾಲೋನಿಯ ಪ್ರತಿ ಕುಟುಂಬಕ್ಕೆ ಸರ್ಕಾರದ ನಿರ್ದೇಶನದಂತೆ ಅರ್ಧ ಲೀಟರ್‌ ಹಾಲಿನಂತೆ ಒಟ್ಟೂ 100 ಲೀಟರ್‌ ಹಾಲನ್ನು ಉಚಿತವಾಗಿ ಶಾಸಕ ದಿನಕರ ಶೆಟ್ಟಿ ಸೋಮವಾರ ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹಾಲನ್ನು ಪಡೆಯಬೇಕು. ಕೊರೊನಾ ವೈರಸ್‌ ತಡೆಗಟ್ಟಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಬಡ ವರ್ಗದ ಅರ್ಹ ಫಲಾನುಭವಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಕಷ್ಟಕ್ಕೆ ನೆರವಾಗುತ್ತಿದೆ. ಜನಸಾಮಾನ್ಯರೂ ಲಾಕ್‌ ಡೌನ್‌ ಆದೇಶ ಪಾಲಿಸಿ ಕೋವಿಡ್‌ 19 ತಡೆಗಟ್ಟಲು ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಈ ಪ್ರದೇಶಗಳ ನಿವಾಸಿಗಳಿಗೆ ಟೋಕನ್‌ ಮೂಲಕ ಹಾಲು ವಿತರಿಸಬೇಕು. ಇದರಿಂದ ಸಾಮಾಜಿಕ ಅಂತರ ಸಾಧ್ಯವಾಗುತ್ತದೆ. ಪುರಸಭೆ ಈಗಾಗಲೇ 1,500 ಲೀಟರ್‌ ಹಾಲಿಗೆ ಬೇಡಿಕೆ ಸಲ್ಲಿಸಿದ್ದು, ಇನ್ನೂ ಹೆಚ್ಚಿನ ಹಾಲನ್ನು ಪೂರೈಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದರು. ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next