Advertisement

ಪಾಂಡಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ವಿಜ್ಞಾನೋತ್ಸವ ಸಂಭ್ರಮ

09:07 PM Oct 20, 2019 | sudhir |

ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ವಿಜ್ಞಾನೋತ್ಸವ 2019 ಪಾಂಡಿ ಸರ್ಕಾರಿ ಹೆ„ಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.

Advertisement

ಒಟ್ಟು 117 ಶಾಲೆಗಳಿಂದ 5000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ ಪ್ರತಿಭೆಗಳು ಭಾಗವಹಿಸಿದರು. ಕಾರ್ಯಕ್ರಮವನ್ನು ಕಾಸರಗೋಡು ಡಯಟ್‌ ಪ್ರಾಂಶುಪಾಲ ಡಾ. ಎಂ ಬಾಲನ್‌ ಅವರು ಉದ್ಘಾಟಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್‌ ಎನ್‌ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಯೋಜನಾ ಅಧಿಕಾರಿ ಎಸ್‌ ಎಸ್‌ ಕೆ ಕಾಸರಗೋಡು ಇದರ ಡಾ. ಎಂ ವಿ ಗಂಗಾದರನ್‌, ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಪುಷ್ಪ ಕೆ.ವಿ, ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದ ಜಿಲ್ಲಾ ಸಂಯೋಜಕ ಪಿ. ದಿಲೀಪ್‌ ಕುಮಾರ್‌, ಉಪಸ್ಥಿತರಿದ್ದರು ದೇಲಂಪಾಡಿ ಜಿ ವಿ ಎಚ್‌ ಎಸ್‌ ಎಸ್‌ ಶಾಲೆಯ ಮುಖ್ಯ ಶಿಕ್ಷಕ ರಾಮಣ್ಣ ಡಿ, ಕುಂಬಳೆ ಬಿಪಿಒ ಕುಂಞಿಕೃಷ್ಣನ್‌ ಎನ್‌ ವಿ, ಕುಂಬಳೆ ಉಪಜಿಲ್ಲಾ ಎಚ್‌ ಎಂ ´ೋರಮ್‌ ಸಂಚಾಲಕ ವಿಷ್ಣುಪಾಲ ಪಿ, ಪಾಂಡಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಂಶುದ್ದೀನ್‌ ಡಿ ಎ, ಹಿರಿಯ ಶಿಕ್ಷಕಿ ರೇಖಸ್ಮಿತ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್‌ ನಾಯಕ್‌ ಎ ಆರ್‌, ಆಹಾರ ಸಮಿತಿ ಅಧ್ಯಕ್ಷ ಕೆ.ಎಂ ಅಬ್ದುಲ್ಲ ತೋಟಂ, ಸ್ವಾಗತ ಸಮಿತಿಯ ಅಧ್ಯಕ್ಷ ರಮೇಶ್‌ ಚೀನಪ್ಪಾಡಿ, ಪ್ರದರ್ಶನ ಸಮಿತಿ ಅಧ್ಯಕ್ಷ ಪ್ರಭಾಕರನ್‌ ಬಿ, ಕಾಸರಗೋಡು ಉಪಜಿಲ್ಲಾ ಎಚ್‌ಎಂ ´ೋರಮ್‌ ಸಂಚಾಲಕ ರಾಜೀವನ್‌ ಕೆ.ಒ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲ ಸಹಶಿಕ್ಷಣಾಧಿಕಾರಿ ಯತೀಶ್‌ ಕುಮಾರ್‌ ರೈ ಕೆ ಸ್ವಾಗತಿಸಿದರು. ಪಾಂಡಿ ಸರ್ಕಾರಿ ಹೆ„ಯರ್‌ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ದೇಲಂಪಾಡಿ ವಂದಿಸಿದರು. ಕಾರ್ಯಕ್ರಮವನ್ನು ವಿಜಯನ್‌ ಶಂಕರಂಪಾಡಿ, ಮುನೀರ್‌ ಯಾಕಿಪರಂಬನ್‌, ಶೆ„ಲಜಾ ಟೀಚರ್‌ ನಿರೂಪಿಸಿದರು. ವಿಜ್ಞಾನ ಮತ್ತು ಸಮಾಜವಿಜ್ಞಾನ ಮೇಳ, ವೃತ್ತಿ ಪರಿಚಯ, ಗಣಿತ ಮತ್ತು ಐಟಿ ಮೇಳಗಳು ನಡೆಯಿತು. ಇದರಲ್ಲಿ ಒಟ್ಟು 117 ಶಾಲೆಗಳಿಂದ 3000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ ಪ್ರತಿಭೆಗಳು ಭಾಗವಹಿಸಿದರು.

ಬಟ್ಟೆಯಚೀಲ
ವಿಜ್ಞಾನೋತ್ಸವದ ಸಂದರ್ಭದಲ್ಲಿ ಇಕೋ ಕ್ಲಬ್‌ ಮತ್ತು ಸೀಡ್‌ ಕ್ಲಬ್‌ನ ನೇತƒತ್ವದಲ್ಲಿ ಶಾಲೆಯಲ್ಲಿಯೇ ತಯಾರಿಸಿದ ಬಟ್ಟೆಯಚೀಲಗಳನ್ನು ಬಿಡುಗಡೆಗೊಳಿಸಿ ವಿತರಿಸಲಾಯಿತು. ಜಿಜೆಬಿಎಸ್‌ ಕುಂಬಾxಜೆ ಶಾಲೆಯ ಇಕೋ ಕ್ಲಬ್‌ ವತಿಯಿಂದ ತಯಾರಿಸಿದ ಸೀಡ್‌ ಪೆನ್‌(ಪೇಪರ್‌ ಪೆನ್‌)ನ್ನು ವಿತರಿಸಿದರು.
ಈ ಪರಿಸರದ ಎಲ್ಲಾ ಕುಟುಂಬಶ್ರೀ ಸದಸ್ಯೆಯರು ಕಾರ್ಯಕ್ರಮದ ಯಶಸ್ವಿಗೆ ಅಹೋರಾತ್ರಿ ದುಡಿಯುತ್ತಿದ್ದು, ವಿಜ್ಞಾನೋತ್ಸವದ ಸಂದರ್ಭದಲ್ಲಿ ಅಪ್ಪ ಹಾಗೂ ಎಲೆಅಡೆ (ಸಿಹಿತಿಂಡಿ)ಯನ್ನು ತಯಾರಿಸಿ ವಿತರಿಸಿದರು.

ಅಧ್ಯಾಪಕ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕರ್ತರಾದ ಸುಭಾಶ್‌ ವನಶ್ರೀ ಇವರ ಮೋಬೆ„ಲ್‌ನಲ್ಲಿ ಚಿತ್ರೀಕರಿಸಿದ ವಿವಿಧ ´ೋಟೋಗಳ ಪ್ರದರ್ಶನವನ್ನು ಕುಂಬಳೆ ಉಪಜಿಲ್ಲಾ ಸಹಶಿಕ್ಷಣಾಧಿಕಾರಿ ಯತೀಶ್‌ ಕುಮಾರ್‌ ರೈ ಉದ್ಘಾಟಿಸಿದರು. ಫೋಟೋ ಗ್ಯಾಲರಿಯಲ್ಲಿ ಸುಮಾರು 150ಕ್ಕಿಂತಲೂ ಹೆಚ್ಚು ಚಿತ್ರಗಳಿದ್ದು ಅಪಾರ ಜನರ ಮನಸೂರೆಗೊಂಡಿತು. ಗೋತ್ರಸಾರಥಿಯವರಿಂದ ಪಾಂಡಿ- ಪಡ್ಯತ್ತಡ್ಕ-ಮುಳ್ಳೇರಿಯ ಪೇಟೆಗೆ ಉಚಿತ 6 ವಾಹನಗಳ ವ್ಯವಸ್ಥೆಯಿಂದ ವಿಜ್ಞಾನೋತ್ಸವಕ್ಕೆ ಆಗಮಿಸುವ ಪರವೂರಿನವರಿಗೆ ತುಂಬಾ ಪ್ರಯೋಜನವಾಯಿತು.

ಗ್ರಾಮೀಣ ಪ್ರದೇಶವಾದ ಪಾಂಡಿಯಲ್ಲಿ ನಡೆಯುತ್ತಿರುವ ವಿಜ್ಞಾನೋತ್ಸವವನ್ನು ಯಶಸ್ವಿಗೊಳಿಸಲು ನೂರಾರು ಮಂದಿ ದುಡಿದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next