Advertisement
ಮಧ್ಯಾಹ್ನ ಗಣಪತಿಗೆ ಚೌತಿ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಇಲ್ಲಿ ತೆನೆ ಪೂಜೆಗಾಗಿ ಬಳಸುವ ಗದ್ದೆ ನಾಟಿಯನ್ನು ಭಕ್ತರೇ ಸೇರಿ ಮಾಡಿದ್ದು ವಿಶೇಷವಾಗಿದೆ. ಕಳೆದ 19 ವರ್ಷಗಳಿಂದ ಭಕ್ತರ ಶ್ರಮದಾನದ ಮೂಲಕ ವ್ಯವಸ್ಥಿತವಾಗಿ ಗದ್ದೆ ಬೆಸಾಯ ಮಾಡಿಕೊಂಡು ಬಂದು ಇತರರಿಗೆ ಮಾದರಿಯಾಗಿದ್ದಾರೆ. 2000ನೇ ಇಸವಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಿ| ಸಿ.ಪಿ. ಜಯರಾಮ ಗೌಡರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ದೇವಸ್ಥಾನದ ಹತ್ತಿರದ ಗದ್ದೆಯೊಂದನ್ನು ದೇವಸ್ಥಾನಕ್ಕಾಗಿ ಖರೀದಿ ಮಾಡಿ ಮುಖ್ಯವಾಗಿ ತೆನೆ ಹಬ್ಬ (ಕೊರಲ್ ಪರ್ಬ) ಕೊರಲ್ ಕಟ್ಟುವ ಉದ್ದೇಶಕ್ಕಾಗಿಯೇ ಬೇಸಾಯ ಮಾಡುತ್ತಾ ಬರಲಾಗಿದೆ.
Related Articles
Advertisement
ದೇವಸ್ಥಾನದಲ್ಲಿ ಒಂದು ವರ್ಷದ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ನಾಲ್ಕು ಬೈಲಿನ ಮೂರು ಪಂಗಡಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಪಂಗಡದಲ್ಲೂ 100 ಮನೆಗಳಿವೆ. ದೇವಸ್ಥಾನದ ಜಾತ್ರೆಯಿಂದ ಹಿಡಿದು ಗದ್ದೆ ಬೇಸಾಯ, ಇತರ ಕೆಲಗಳನ್ನು ಒಂದು ವರ್ಷದ ಮಟ್ಟಿಗೆ ಒಂದು ಪಂಗಡಕ್ಕೆ ವಹಿಸಿಕೊಡಲಾಗುತ್ತದೆ. ಇಲ್ಲಿ ಜನವರಿಯಲ್ಲಿ ಜಾತ್ರೆ ಮುಗಿಯುತ್ತದೆ. ಫೆಬ್ರವರಿಯ ಸಂಕ್ರಮಣದಂದು ಎಲ್ಲ ಲೆಕ್ಕಾಚಾರಗಳು ಮುಗಿದ ಬಳಿಕ ಮುಂದಿನ ಜನವರಿಯ ತನಕ ಇನ್ನೊಂದು ಪಂಗಡಕ್ಕೆ ಜವಾಬ್ದಾರಿಯನ್ನು ಹಂಚಲಾಗುತ್ತದೆ. ಆ ತಂಡ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾರ್ಗದರ್ಶನದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಈ ವೇಳೆ ದೇವಸ್ಥಾನದಿಂದ ಊಟ, ತಿಂಡಿಯ ಖರ್ಚು ಭರಿಸಲಾಗುತ್ತದೆ. ಆದರೆ ಅಡುಗೆ ಇನ್ನಿತರ ತಯಾರಿ ಭಕ್ತರದ್ದೇ ಆಗಿರುತ್ತದೆ. ಈ ಬಾರಿಯ ಜವಾಬ್ದಾರಿ ಕಂಪಕರಂದ್ಲಾಜೆ, ನಾಣಿಲ 1, 2, ಉಳವ ಬೈಲಿನ ಮನೆಗಳ ಮೂರನೇ ಪಂಗಡಕ್ಕೆ ವಹಿಸಲಾಗಿತ್ತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಉಳವ ಸಹಿತ ಸಮಿತಿ ಪದಾಧಿಕಾರಿಗಳು, ಪಂಗಡದ ಮುಖ್ಯಸ್ಥರಾದ ವಿಶ್ವನಾಥ ಕಂಪ ಹಾಗೂ ಕೇಶವ ಗೌಡ ಖಂಡಿಗ ಅವರ ಮಾರ್ಗದರ್ಶನದಲ್ಲಿ ಬೇಸಾಯ ಕಾರ್ಯ ಯಶಸ್ವಿಯಾಗಿ ನಡೆದಿತ್ತು.
ಪ್ರತೀ ವರ್ಷ ಭತ್ತದ ಬಿತ್ತನೆ ಮಾಡಿ ನೇಜಿ ತಯಾರಿ ಮಾಡಲಾಗುತ್ತದೆ. ಜೂನ್ ತಿಂಗಳಲ್ಲೇ ನಾಟಿ ಮಾಡಲಾಗುತ್ತದೆ. ಅದು ಗಣೇಶ ಚೌತಿ ಸಂದರ್ಭ ಪೈರಾಗಿ ಕೊರಲ್ ಹಬ್ಬಕ್ಕೆ ತಯಾರಾಗಬೇಕು ಎನ್ನುವ ಉದ್ದೇಶದಿಂದ ಜೂನ್‌ನಲ್ಲಿ ನೇಜಿ ನಾಟಿ ಮಾಡಲಾಗಿದೆ. ಚೌತಿಯಂದು ಅರ್ಚಕರು ಗದ್ದೆಗೆ ಹಾಲು ಇಡುವ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ 300 ಮನೆಯ ಭಕ್ತರು ಪೈರನ್ನು ಮನೆಗೆ ಕೊಂಡೊಯ್ದು ಮನೆ ತುಂಬಿಸುವ ಕಾರ್ಯವನ್ನು ಮಾಡಿದರು.
ಕೊರಲ್ ಹಬ್ಬಕ್ಕೆ ತಯಾರಿಪ್ರತೀ ವರ್ಷ ಭತ್ತದ ಬಿತ್ತನೆ ಮಾಡಿ ನೇಜಿ ತಯಾರಿ ಮಾಡಲಾಗುತ್ತದೆ. ಜೂನ್ ತಿಂಗಳಲ್ಲೇ ನಾಟಿ ಮಾಡಲಾಗುತ್ತದೆ. ಅದು ಗಣೇಶ ಚೌತಿ ಸಂದರ್ಭ ಪೈರಾಗಿ ಕೊರಲ್ ಹಬ್ಬಕ್ಕೆ ತಯಾರಾಗಬೇಕು ಎನ್ನುವ ಉದ್ದೇಶದಿಂದ ಜೂನ್‌ನಲ್ಲಿ ನೇಜಿ ನಾಟಿ ಮಾಡಲಾಗಿದೆ. ಚೌತಿಯಂದು ಅರ್ಚಕರು ಗದ್ದೆಗೆ ಹಾಲು ಇಡುವ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ 300 ಮನೆಯ ಭಕ್ತರು ಪೈರನ್ನು ಮನೆಗೆ ಕೊಂಡೊಯ್ದು ಮನೆ ತುಂಬಿಸುವ ಕಾರ್ಯವನ್ನು ಮಾಡಿದರು.
ಹಿರಿಯರ ಸಂಪ್ರದಾಯ
ಕೊರಲ್ ಕಟ್ಟುವ ಉದ್ದೇಶದಿಂದ 18 ವರ್ಷಗಳ ಹಿಂದೆ ದೇವಸ್ಥಾನದ ಹಿರಿಯರ ಮಾರ್ಗ ದರ್ಶನದಲ್ಲಿ ಪ್ರಾರಂಭವಾದ ಗದ್ದೆ ಬೇಸಾಯ ಇಂದಿಗೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ನಮ್ಮ ಯುವಜನತೆಯಲ್ಲಿ ಬೇಸಾಯದ ಪರಿಕಲ್ಪನೆಯನ್ನು ಉದ್ದೀಪನಗೊಳಿಸಿ ಉಳಿಸಿ ಬೆಳೆಸುವುದಕ್ಕೆ ಪ್ರೇರಣೆ ಯಾಗುತ್ತಿದೆ. ಹೊರಗಿನ ಭಕ್ತರು ಆಗಮಿಸಿ ಇಲ್ಲಿಂದ ಭತ್ತದ ಪೈರು ಕೊಂಡೊಯ್ಯತ್ತಾರೆ. ಅವರು ನಮ್ಮ ದೇವಸ್ಥಾನದ ಜಾತ್ರೆ ಸಂದರ್ಭ ಅಕ್ಕಿ , ಬೆಲ್ಲ ಮೊದಲಾದ ವಸ್ತುಗಳನ್ನು ನೀಡಿ ಸಹಕರಿಸುತ್ತಾರೆ.
– ಮೋನಪ್ಪ ಗೌಡ ಉಳವ,ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ