Advertisement

ಕುಂಬಳೆ ಪೇಟೆಯ ಟ್ರಾಫಿಕ್‌ ನಿಯಂತ್ರಣ ವ್ಯವಸ್ಥೆ ವಿಫಲ

07:10 AM Aug 03, 2017 | Team Udayavani |

ಕುಂಬಳೆ: ಒಂದು ವಿಭಾಗದ ವ್ಯಾಪಾರಿಗಳು ಪ್ರತಿಭಟನೆಯೊಂದಿಗೆ ರಂಗಕ್ಕಿಳಿಯುವುದರೊಂದಿಗೆ ಮಂಗಳವಾರದಿಂದ ಕುಂಬಳೆ ಪೇಟೆಯಲ್ಲಿ  ಜಾರಿ ಗೊಳಿಸಲು ನಿರ್ಧರಿಸಿದ್ದ  ಟ್ರಾಫಿಕ್‌ ನಿಯಂತ್ರಣ ವ್ಯವಸ್ಥೆಯು ವಿಫಲಗೊಂಡಿದೆ.

Advertisement

ಸಾರಿಗೆ ಅಡಚಣೆಯನ್ನು ಹೊರತು ಪಡಿಸಲು ಪಂಚಾಯತ್‌ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಮರ್ಚಂಟ್ಸ್‌ ಅಸೋಸಿಯೇಶನ್‌ ಅಲ್ಲದೆ ಪೊಲೀಸರು ಸೇರಿ ಕುಂಬಳೆ ಪೇಟೆಯಲ್ಲಿ  ಟ್ರಾಫಿಕ್‌ ನಿಯಂತ್ರಣ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದರು. ಅದರಂತೆ ಮಂಗಳವಾರ ಆಟೋರಿಕ್ಷಾ, ಬಸ್‌ಗಳನ್ನು  ಬದಿಯಡ್ಕ ರಸ್ತೆಯಲ್ಲಿರುವ ವ್ಯಾಪಾರ ಸಂಸ್ಥೆಗಳ ಮುಂದೆ ನಿಲ್ಲಿಸತೊಡಗಿದಾಗ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭ ಅಧಿಕಾರಿಗಳು ಮತ್ತು  ವ್ಯಾಪಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಇದೇ ವೇಳೆ ಈ ಪ್ರದೇಶದ ವ್ಯಾಪಾರಿಗಳು ಅಂಗಡಿಗಳನ್ನು  ಮುಚ್ಚಿ  ಪ್ರತಿಭಟನೆಯಲ್ಲಿ  ತೊಡಗಿದರು. ವ್ಯಾಪಾರಿಗಳ ಸಮಸ್ಯೆ ಪರಿಗಣಿಸದೆ ಟ್ರಾಫಿಕ್‌ ವ್ಯವಸ್ಥೆಯನ್ನು  ಅನುಷ್ಠಾನಕ್ಕೆ ತರಲಾಗಿದೆಯೆಂದೂ ಏಕಪಕ್ಷೀಯವಾದ ಈ ತೀರ್ಮಾನವನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದು ಬದಿಯಡ್ಕ ರಸ್ತೆಯ ವ್ಯಾಪಾರಿಗಳು ತಿಳಿಸಿದ್ದಾರೆ.

ಟ್ರಾಫಿಕ್‌ ನಿಯಂತ್ರಣದ ಅಂಗವಾಗಿ ವಾಹನಗಳನ್ನು ನಿಲುಗಡೆಗೊಳಿಸಲು ಸಿದ್ಧಪಡಿಸಿದ ಸ್ಥಳದ ಕುರಿತು ಕೂಡ ಆರೋಪ ಹುಟ್ಟಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ  ರೈಲು ನಿಲ್ದಾಣದ ಸಮೀಪ ವಾಹನಗಳ ನಿಲುಗಡೆಗೆ ಸೌಕರ್ಯ ಏರ್ಪಡಿಸಲಾಗಿದೆ. ಆದರೆ ಇಲ್ಲಿ  ವಾಹನಗಳನ್ನು  ನಿಲ್ಲಿಸುವುದು ಅಪಘಾತಗಳಿಗೆ ಕಾರಣವಾಗಲಿದ್ದು, ಪೇಟೆಗೆ ಬರುವವರಿಗೆ ಅನನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ  ಸಮರ್ಪಕ ವ್ಯವಸ್ಥೆ  ಅಳವಡಿಸದ ಟ್ರಾಫಿಕ್‌ ನಿಯಂತ್ರಣ ಯೋಜನೆಯು ಅಸ್ತವ್ಯಸ್ತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next