Advertisement
ಆಕ್ರಮವಾಗಿ ಶರಾಬು, ಹೊಯಿಗೆ ಸಾಗಿಸಿದ ಮತ್ತು ಪರವಾನಿಗೆ ಇಲ್ಲದ ಅಪಘಾತಕ್ಕೊಳಗಾದ ವಾಹನಗಳನ್ನು ಮತ್ತು ಹೊಳೆಯಿಂದ ಮರಳು ಸಾಗಿಸಿದ ದೋಣಿಗಳನ್ನು ವಶಪಡಿಸಿ ಠಾಣೆಯ ಸುತ್ತ ಮುತ್ತ ಇರಿಸಲಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಲೇ ಇರುವುದು.ಇದರಲ್ಲಿ ಕೆಲವು ವಾಹನಗಳ ಟಯರ್ ಮತ್ತು ಬಿಡಿ ಭಾಗಗಳು ಮಾಯವಾಗುವುದು.ಇನ್ನು ಕೆಲವು ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿದು ಹಾಳಾಗುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಪೊಲೀಸ್ ಠಾಣೆ ಆರಂಭವಾದಾಗಿನಿಂದಲೂ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಆವರಣದೊಳಗೆ ಸುತ್ತಮುತ್ತ ವಾಹನಗಳ ಸಂತೆಯನ್ನು ಕಾಣಬಹುದು. ಈ ವಶಪಡಿಸಿಕೊಂಡ ವಾಹನಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಾಗಿರುವುದರಿಂದ ಕೇಸು ಆಮೆ ನಡಿಗೆಯ ಗತಿಯಲ್ಲಿ ಸಾಗುವುದರಿಂದ ವಾಹನಗಳು ಇನ್ನಷ್ಟು ಹಾಳಾಗಲು ಕಾರಣ ವಾಗುವುದು. ಆದುದರಿಂದ ಇದರಲ್ಲಿ ಬೆಲೆಬಾಳುವ ಕೆಲವು ಬಸ್ಸು ಲಾರಿಗಳ ಸಹಿತ ವಾಹನಗಳು ತುಕ್ಕು ಹಿಡಿದು ಮಣ್ಣು ಸೇರುತ್ತಿವೆ.ಹೆಚ್ಚಿನ ವಾಹನಗಳ ಟಯರುಗಳ ಗಾಳಿ ಹೋಗಿ ಜಗ್ಗಿ ಮಣ್ಣಿನೊಂದಿಗೆ ಲೀನವಾಗಲು ಕಾರಣವಾಗುತ್ತಿದೆ.
ವಾಹನಗಳ ವಿರುದ್ಧ ನ್ಯಾಯಾ ಲಯದಲ್ಲಿ ದಾವೆ ಹಲವು ವರ್ಷಗಳ ತನಕ ಮುಂದುವರಿಯುವುದರಿಂದ ವಶಪಡಿಸಿದ ವಾಹನಗಳು ಹಾಳಾಗಲು ಕಾರಣವಾಗುವುದು. ದಾಖಲೆಗಳು ಸರಿ ಇಲ್ಲದೆ ಮತ್ತು ವಾಹನಗಳಿಗೆ ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಮಾಲಕರು ಸಾಲ ಪಾವತಿಸಲು ಬಾಕಿ ಇರುವುದರಿಂದ ಹೆಚ್ಚಿನ ವಾಹನ ಮಾಲಕರು ದಾವೆ ಮುಗಿದ ಬಳಿಕವೂ ವಾಹನಗಳನ್ನು ಒಯ್ಯಲು ಸಿದ್ಧರಾಗದ ಕಾರಣ ವಾಹನಗಳು ತುಕ್ಕು ಹಿಡಿದು ನಷ್ಟವಾಗಲು ಕಾರಣವಾಗಿದೆ. ಕೇಸು ಮುಗಿದ ವಾಹನಗಳನ್ನು ಗುಜಿರಿಗೆ ಒಯ್ಯಲೂ ಮಾಲಕರು ಮುಂದಾಗುವುದಿಲ್ಲ. ನ್ಯಾಯಾ ಲಯದ ಕಾಯಿದೆಯಲ್ಲಿ ಬದಲಾವಣೆ ಯಾದಲ್ಲಿ ರಾಷ್ಟ್ರೀಯ ನಷ್ಟವನ್ನು ತಡೆಯಬಹುದಾಗಿದೆ.
-ರಾಜೀವನ್ ವಳಪ್ಪು.
ಸ್ಟೇಶನ್ ಹೌಸ್ ಆಫೀಸರ್, ಕುಂಬಳೆ
Related Articles
Advertisement