Advertisement

ಕುಂಭಾಶಿ: ಆನೆಗುಡ್ಡೆ  ಶ್ರೀ ವಿನಾಯಕನಿಗೆ 6 ಸಾವಿರ ಕಡುಬು ನೈವೇದ್ಯ

02:44 PM Mar 16, 2017 | |

ತೆಕ್ಕಟ್ಟೆ (ಆನೆಗುಡ್ಡೆ): ಪುರಾಣ ಪ್ರಸಿದ್ಧ  ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಾ. 16ರಂದು ನಡೆಯುವ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ   ವಿಶೇಷವಾಗಿ ಶ್ರೀದೇವರಿಗೆ ಸುಮಾರು 16 ಸಾವಿರ ಕಡಬು (ಮೂಡೆ) ನೈವೇದ್ಯಗೊಳ್ಳಲಿದ್ದು  ಅನಂತರ ಭಕ್ತರಿಗೆ ಕಡುಬು (ಮೂಡೆ) ಪ್ರಸಾದ ವಿತರಣಾ ಕಾರ್ಯಕ್ಕಾಗಿ  ದೇಗುಲದಲ್ಲಿ ಸಕಲ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

Advertisement

16 ಸಾವಿರ ಕಡುಬು (ಮೂಡೆ) ತಯಾರಿಯ ಹಿಂದೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ ಶ್ರೀದೇವರಿಗೆ ಸುಮಾರು 16 ಸಾವಿರ ಕಡುಬು (ಮೂಡೆ)  ತಯಾರಿಯ ಪೂರ್ವ ಸಿದ್ಧತೆಗಾಗಿ ಸುಮಾರು ಒಂದು ವಾರದಿಂದಲೂ ಹಾಲಾಡಿ, ಹೊಸಂಗಡಿ ಮುಂತಾದ ಗ್ರಾಮೀಣ ಭಾಗದಿಂದ  ಓಲೆಗಳನ್ನು (ಕುಂದಾಪ್ರ ಕನ್ನಡದಲ್ಲಿ ಮುಂಡ್ಕನೊಲಿ) ತಂದು  25 ಕ್ಕೂ ಹೆಚ್ಚು  ಗ್ರಾಮೀಣ ಮಹಿಳೆಯರು ಕಡುಬಿನ ಓಲೆ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ ಹಾಗೂ ಸುಮಾರು 500 ಕೆ.ಜಿ. ಅಕ್ಕಿ ಹಾಗೂ ಉದ್ದಿನ ಬೇಳೆ  ಪ್ರಮಾಣಕ್ಕನುಸಾರವಾಗಿ ಐದು ಅರೆಯುವ ಯಂತ್ರಗಳನ್ನು ಬಳಸಿಕೊಂಡು 25 ಕ್ಕೂ ಅಧಿಕ ಮಂದಿ ನುರಿತ ಪಾಕಶಾಸ್ತ್ರಜ್ಞರು ಮಾ. 15ರ ರಾತ್ರಿಯಿಂದಲೇ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ವಿಶೇಷವಾಗಿ ಸಂಕಷ್ಟ ಹರ ಚತುರ್ಥಿಯಂದು ನಂಬಿದ  ಸಹಸ್ರಾರು ಭಕ್ತರು ಆನೆಗುಡ್ಡೆ ಶ್ರೀ ವಿನಾಯಕ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿಸಿಕೊಂಡು ಇಷ್ಟಾರ್ಥವನ್ನು ಪಡೆದು ಕೃತಾರ್ಥರಾಗುತ್ತಾರೆ. ಅಂಗಾರಕ ಚತುರ್ಥಿಯ ದಿನವು ಅತ್ಯಂತ ಮಂಗಳಕರವಾದುದು.
– ಕೆ. ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿಗಳು
 
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಾ. 16ರ‌ಂದು ನಡೆಯುವ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ  ದೇಗುಲದ ಇತಿಹಾಸದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ  ದೇವರ ಪರಮ ಭಕ್ತರು ಹಾಗೂ ದೇಗುಲದ ಅರ್ಚಕ ಮನೆತನದವರಾದ ಕೃಷ್ಣಾನಂದ ಉಪಾಧ್ಯಾಯರು ಸುಮಾರು 16 ಸಾವಿರ ಕಡುಬು (ಮೂಡೆ)  ಶ್ರೀದೇವರಿಗೆ ನೈವೇದ್ಯ ನೀಡುತ್ತೇನೆ ಎಂದು ಸಂಕಲ್ಪ ಹೊಂದಿದ್ದಾರೆ.
– ಕುಂಭಾಶಿ ರವಿರಾಜ್‌ ಉಪಾಧ್ಯಾಯ, ಆನುವಂಶಿಕ ಪರ್ಯಾಯ ಅರ್ಚಕರು.

Advertisement

Udayavani is now on Telegram. Click here to join our channel and stay updated with the latest news.

Next