ತೆಕ್ಕಟ್ಟೆ : ಇಲ್ಲಿನ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದ ಚಿತ್ರದುರ್ಗ ಮೂಲದ ಶಿಕ್ಷಕನೋರ್ವ ವಿದ್ಯಾರ್ಥಿಗಳು ವಾಹನದ ಕಡೆಗೆ ವಿಳಂಬವಾಗಿ ಬಂದಳು ಎನ್ನುವ ಕಾರಣಕ್ಕೆ ಮಕ್ಕಳಿಗೆ ಅಮಾನವೀಯವಾಗಿ ಹೊಡೆಯುತ್ತಿರುವುದನ್ನು ನೋಡಿದ ಪ್ರವಾಸಿಗರು ತತ್‌ಕ್ಷಣವೇ ಮೊಬೈಲ್‌ನಲ್ಲಿ ವೀಡಿಯೋವನ್ನು ಸೆರೆ ಹಿಡಿದು, ಶಿಕ್ಷಕನಿಗೆ ಛೀಮಾರಿ ಹಾಕಿ ಫೇಸ್ ಬುಕ್ ಅಪ್ಲೋಡ್ ಮಾಡುವ ಮೂಲಕ ಕ್ರಮಕ್ಕೆ ಆಗ್ರಹಿಸಿದ ಘಟನೆ ನ.27 ರಂದು ನಡೆದಿದೆ.
Advertisement
ಈ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು , ಶಿಕ್ಷಕನ ದುವರ್ತನೆಗೆ ಖಂಡನೆ ವ್ಯಕ್ತವಾಗಿದೆ.