Advertisement

ಮೇಳಕ್ಕೆ ಇಂದು ತೆರೆ

12:30 AM Mar 04, 2019 | Team Udayavani |

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ತ್ರಿವೇಣಿ ಸಂಗಮದಲ್ಲಿ ಸಂಕ್ರಾಂತಿಯಂದು ಆರಂಭಗೊಂಡಿದ್ದ ಕುಂಭ ಮೇಳ, ಶಿವರಾತ್ರಿಯ ಪವಿತ್ರ ದಿನವಾದ ಮಾ. 4ರಂದು ಕೊನೆಗೊಳ್ಳಲಿದೆ. 

Advertisement

ಮೇಳದ ಜೀವಾಳವಾದ ಮಹಾಸ್ನಾನಕ್ಕೂ ಇಂದೇ ತೆರೆಬೀಳಲಿದೆ. ಮಹಾ ಶಿವರಾತ್ರಿಯು, ತುಂಬಾ ವರ್ಷಗಳ ನಂತರ, ಶಿವನಿಗೆಂದೇ ಮೀಸಲಾಗಿರುವ ಸೋಮವಾರವೇ ಬಂದಿರುವುದು ಧಾರ್ಮಿಕವಾಗಿ ಮಹತ್ವ ಪಡೆದಿದೆ.

ಈ ಬಗ್ಗೆ ವಿವರಣೆ ನೀಡಿರುವ ರಾಮನಾಮ ಬ್ಯಾಂಕ್‌ ಅಧ್ಯಕ್ಷೆ ಗುಂಜನ್‌ ವರ್ಷಿಣಿ, “ಸಮುದ್ರ ಮಂಥನದಲ್ಲಿ ಜನಿಸಿದ ವಿಷವನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ ದಿನವಾದ ಶಿವರಾತ್ರಿಯು, ಶಿವನ ವಿವಾಹದ ದಿನವೂ ಹೌದು. ಇಂಥ ಪವಿತ್ರ ದಿನದಂದೇ ಕುಂಭ ಮೇಳ ಮುಕ್ತಾಯವಾಗುತ್ತಿರುವುದು ವಿಶೇಷವಾಗಿದ್ದು,  ಈವರೆಗೆ  ಬರುತ್ತಿದ್ದ ಜನಸಾಗರ ಅಂತಿಮ ದಿನ ಗಣನೀಯವಾಗಿ ಹೆಚ್ಚಾಗುವ‌ ನಿರೀಕ್ಷೆಯಿದೆ’ ಎಂದಿದ್ದಾರೆ.  

ಇದಲ್ಲದೆ, ಹಿಂದೂ ಧರ್ಮದಲ್ಲಿ ಶಿವನ ಪೂಜೆಗಾಗಿಯೇ ಮೀಸಲಾಗಿರುವ ಸೋಮವಾರದಂದೇ ಶಿವರಾತ್ರಿ ಬಂದಿದೆ. ಇದೂ ಸಹ ಬಹಳ ವರ್ಷಗಳ ನಂತರ ಬಂದಿರುವುದರಿಂದ ಈ ಬಾರಿಯ ಶಿವರಾತ್ರಿಗೆ ಹೆಚ್ಚಿನ ಮಹತ್ವ ಬಂದಿದೆ. ಹಾಗಾಗಿಯೇ, ಕುಂಭ ಮೇಳಕ್ಕೆ ಬರುವ ಭಕ್ತರ ಉತ್ಸಾಹ ಇಮ್ಮಡಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಸುಮಾರು 32,000 ಹೆಕ್ಟೇರ್‌ ಪ್ರದೇಶದಲ್ಲಿ ನಡೆಯುತ್ತಿರುವ ಈ ಬಾರಿಯ ಕುಂಭ ಮೇಳಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ, 22 ಕೋಟಿ ಜನರು ಸ್ನಾನ ಮಾಡಿರುವ ಅಂದಾಜಿದೆ. 

ಕುಂಭಮೇಳಕ್ಕೆ 3ನೇ ಗಿನ್ನೆಸ್‌ ಗರಿ 
ಈ ಕುಂಭಮೇಳದಲ್ಲಿ ಅತಿ ದೊಡ್ಡ “ಪೇಂಟ್‌ ಮೈ ಸಿಟಿ’ ಅಭಿಯಾನ ಕೈಗೊಂಡಿದ್ದಕ್ಕೆ ಹಾಗೂ ಅತ್ಯುತ್ತಮ ಸಾರಿಗೆ ಸೌಕರ್ಯ ಕಲ್ಪಿಸಿದ್ದಕ್ಕಾಗಿ ಎರಡು ಗಿನ್ನೆಸ್‌ ದಾಖಲೆ ಬರೆದ ಪ್ರಯಾಗ್‌ರಾಜ್‌ ಮೇಳ ಆಯೋಗ (ಪಿಎಂಎ), ಕೋಟ್ಯಂತರ ಜನರು ಭಾಗವಹಿಸಿದ್ದ ಈ ಮೇಳದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದಕ್ಕೆ ಮತ್ತೂಂದು ಗಿನ್ನೆಸ್‌ ದಾಖಲೆ ಗೌರವ ಗಳಿಸಿದೆ. ಸ್ವತ್ಛ ಭಾರತ ಅಭಿಯಾನದಡಿ ಕುಂಭಮೇಳ ನಡೆದ ಪ್ರದೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದಕ್ಕೆ ಈ ಗೌರವ ಸಿಕ್ಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next