Advertisement

ಕುಂಭ ಮೇಳ ಕೋವಿಡ್ ಸೂಪರ್ ಸ್ಪ್ರೆಡರ್..? : ಅಧಿಕಾರಿಗಳ ಆತಂಕ

05:48 PM Apr 06, 2021 | Team Udayavani |

ನವ ದೆಹಲಿ : ದೇಶದಲ್ಲಿ ಕೋವಿಡ್ ನ ರೂಪಾಂತರಿ ಅಲೆ ದಿನೇ ದಿನೇ ಆತಂಕವನ್ನು ಹೆಚ್ಚಿಸುತ್ತಿದೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಕೋವಿಡ್ ನಿಯಂತ್ರಿಸಲು ಆಗುತ್ತಿಲ್ಲ. ಈಗಾಗಲೇ ಮಹಾರಾಷ್ಟ್ರ, ದೆಹಲಿಯಲ್ಲಿ ನೈಟ್​ ಕರ್ಫ್ಯೂ ಜಾರಿ ಮಾಡುವ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ.

Advertisement

ಸ್ವಲ್ಪ ಮಟ್ಟಿಗೆ ಚೇತರಿಕೆಗೊಂಡಿದ್ದ ಕೋವಿಡ್ ಸ್ಥಿತಿ ಈಗ ಮತ್ತೆ ದೇಶವನ್ನು ಸಮಸ್ಯೆಗೆ ಸಿಲುಕಿಸಿದೆ. ಈ ನಡುವೆ ಸೋಂಕಿನ ಹರಡುವಿಕೆಗೆ ಕುಂಭ ಮೇಳವು ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ತಿಳಿಸಿದೆ.

ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್​ 1ರಿಂದ ಕುಂಭ ಮೇಳ ನಡೆಯುತ್ತಿದ್ದು, ಇದು ಕೋವಿಡ್ ಸೋಂಕು ಮತ್ತಷ್ಟು ಹರಡುವಿಕೆಯ ವೇಗವನ್ನು ಪಡೆಯಲು ಕಾರಣವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಓದಿ : ಭ್ರಷ್ಟಾಚಾರ ಪ್ರಕರಣ : ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಮಹಾ’ ಸರ್ಕಾರ ಸುಪ್ರೀಂ ಮೊರೆ

ಕೋವಿಡ್​ ಪರಿಸ್ಥಿತಿ ಕುರಿತು ಕಾರ್ಯದರ್ಶಿ ಮಟ್ಟದಲ್ಲಿ ಉನ್ನತ ಸಭೆ ನಡೆದಿದ್ದು, ಈ ವೇಳೆ ಕುಂಭ ಮೇಳ ನಡೆಯುತ್ತಿರುವ ಬಗ್ಗೆ ಕೆಲವು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕುಂಭ ಮೇಳವು ಕೋವಿಡ್ ನ ಸೂಪರ್​ ಸ್ಪ್ರೆಡರ್​ ಆಗುವ ಸಾಧ್ಯತೆ ಇದೆ ಎಂದು ಕೆಲವು ಅಧಿಕಾರಿಗಳು ಆತಂಕ ಪಟ್ಟಿದ್ದಾರೆ. ಈ ಹಿನ್ನಲೆ ನಿಗದಿಗೂ ಮೊದಲೇ ಕಾರ್ಯಕ್ರಮವನ್ನು ಮುಗಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸುದ್ದಿ ಸಂಸ್ಥೆ ಎ ಎನ್ ಐ ವರದಿ ಮಾಡಿದೆ.

ಕುಂಭ ಮೇಳಕ್ಕೆ ಭೇಟಿ ನೀಡುವ ಸಾಧುಗಳು, ಭಕ್ತರು ಮಾಸ್ಕ್​ ಧರಿಸುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ, ಇದಕ್ಕಾಗಿ ಕೇಂದ್ರದಿಂದ ರಚನೆಯಾಗಿರುವ ತಂಡ ಧಾರ್ಮಿಕ ಮುಖಂಡರ ಸಹಾಯವನ್ನು ಪಡೆಯಬೇಕಿದೆ.  ಸರ್ಕಾರವು ಕೂಡ ಸೋಂಕಿನ ಕುರಿತು ಜನರಿಗೆ ಟಿವಿ, ರೇಡಿಯೋ, ಸಾರ್ವಜನಿಕ ಪೋಸ್ಟರ್​ ಮೂಲಕ ಅರಿವು ಮೂಡಿಸಬೇಕಿದೆ ಎಂದು ಸರ್ಕಾರ ಸೂಚಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಓದಿ : ಸಾರಿಗೆ ನೌಕರರ ಮುಷ್ಕರ : ನಾಳೆ 5 ನಿಮಿಷಕ್ಕೊಂದು ಮೆಟ್ರೋ ರೈಲು!

ಇನ್ನು ಈ ಕುಂಭಮೇಳವನ್ನು ಸಮಯಕ್ಕೂ ಮೊದಲೇ ಮುಕ್ತಾಯಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ರೀತಿಯ ಯೋಜನೆ ರೂಪಿಸಿಲ್ಲ. ಉತ್ತರಾಖಂಡ ಸರ್ಕಾರಕ್ಕೆ ಎಚ್ಚರಿಕೆಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ ಎಂಸು ಸುದ್ದಿ ಮೂಲಗಳು ತಿಳಿಸಿವೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಉತ್ತರಾಖಂಡ ಸರ್ಕಾರ ಕಟ್ಟುನಿಟ್ಟಿನ ಕೋವಿಡ್​ ಮಾರ್ಗಸೂಚಿ ಪ್ರಕಟ ಮಾಡಿದ್ದು, ನಿಯಮಗಳ ಉಲ್ಲಂಘನೆ ಮಾಡಿದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ. ಮಾತ್ರವಲ್ಲದೇ, ಕುಂಭ ಮೇಳಕ್ಕೆ ಆಗಮಿಸುವವರು 72ಗಂಟೆಗಳ ಮುನ್ನ ಆರ್​ ಟಿ ಪಿ ಸಿ ಆರ್​ ಪರೀಕ್ಷೆಗೆ ಒಳಗಾಗಬೇಕಿದ್ದು, ನೆಗಟಿವ್​ ವರದಿ ಕಡ್ಡಾಯವಾಗಿದೆ.

ಇನ್ನು, ನಿಗದಿಯಾದಂತೆಯೇ ಕುಂಭ ಮೇಳ ನಡೆದರೆ, ಏಪ್ರಿಲ್​ 1 ರಿಂದ ಆರಂಭವಾಗಿರುವ ಈ ಕುಂಭಮೇಳ ಏಪ್ರಿಲ್​ 30ರವರೆಗೆ ನಡೆಯಲಿದೆ.

ಓದಿ : ನಾಳೆ ಸಾರಿಗೆ ನೌಕಕರ ಮುಷ್ಕರ : ಪ್ರಯಾಣಿಕರಿಗೆ ಇಂದೇ ತಟ್ಟಿದ ಬಿಸಿ

Advertisement

Udayavani is now on Telegram. Click here to join our channel and stay updated with the latest news.

Next