Advertisement

ಕುಂಭಾಸಿ: ವರ್ಷ ಕಳೆವ ಮೊದಲೇ ಹಾಳಾದ ಅಜ್ಜರಹಾಡಿ ರಸ್ತೆ

01:00 AM Mar 15, 2019 | Harsha Rao |

ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಜ್ಜರಹಾಡಿ ರಸ್ತೆ ಕಾಂಕ್ರೀಟೀಕರಣ ನಡೆದು ಇನ್ನೂ ವರ್ಷ ಕಳೆದಿಲ್ಲ. ಅಷ್ಟರಲ್ಲೇ ರಸ್ತೆ ಮೂಲ ಸ್ವರೂಪ ಕಳೆದುಕೊಳ್ಳತೊಡಗಿದೆ. 

Advertisement

ಕಳಪೆ ಗುಣಮಟ್ಟ 
2016-17ನೇ ಸಾಲಿನ ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಉಡುಪಿ  ಕೆ.ಆರ್‌.ಐ.ಡಿ.ಎಲ್‌   ಇಲಾಖೆಯಿಂದ ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ಸುಮಾರು 340 ಮೀ. ಉದ್ದ ಹಾಗೂ 3.15 ಮೀ. ಅಗಲದ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕಳಪೆ ಗುಣಮಟ್ಟದಿಂದಾಗಿ ಕಾಂಕ್ರೀಟ್‌ ಕಿತ್ತು ಬರತೊಡಗಿದೆ.  

ಡಾಮರು ತೇಪೆ!
ಕಾಂಕ್ರೀಟ್‌ ರಸ್ತೆ ಕಾಮಗಾರಿ ಮುಗಿದು ಸ್ವಲ್ಪ ದಿನದಲ್ಲಿಯೇ    ರಸ್ತೆಯ   ಮೇಲ್ಭಾಗದಲ್ಲಿ ಜಲ್ಲಿ ಕಾಣಿಸಲು ಶುರುವಾಗಿತ್ತು. ಅದನ್ನು ಮುಚ್ಚಿಡುವಂತೆ ಅವೈಜ್ಞಾನಿಕವಾಗಿ ಡಾಮರು ಹಾಕಲಾಗಿದೆ. ಇಂತಹ ಕಳಪೆ ಕಾಮಗಾರಿ ಕಾಮಗಾರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ದೂರು ಬಂದಿದೆ
ಅಜ್ಜರಹಾಡಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಗ್ರಾ.ಪಂ.ಗೆ ದೂರು ಬಂದಿದ್ದು, ಈ ಕುರಿತು  ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ .
-ಮಹಾಬಲೇಶ್ವರ ಆಚಾರ್‌,  ಉಪಾಧ್ಯಕ್ಷರು, ಗ್ರಾ.ಪಂ. ಕುಂಭಾಸಿ

ಭರವಸೆ
ಈ ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ್ದೇನೆ. ಮೇಲ್ಭಾಗದಲ್ಲಿ ಎದ್ದು ಹೋಗಿರುವ ಕಡೆಗಳಲ್ಲಿ ಮತ್ತೆ ಕಾಂಕ್ರೀಟ್‌ ಟ್ರೀಟ್‌ಮೆಂಟ್‌ ಮಾಡುವಂತೆ ಗುತ್ತಿದಾರರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಗುತ್ತಿದಾರರು ಪುನಃ ರಸ್ತೆಯ ಮೇಲ್ಪದರವನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
-ಸೂರ್ಯ ಎಂಜಿನಿಯರ್‌,  ಕೆ.ಆರ್‌.ಐ.ಡಿ.ಎಲ್‌ ಇಲಾಖೆ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next