ತೆಕ್ಕಟ್ಟೆ : ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಮಹಾನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅ.26 ರಂದು ಸಂಪನ್ನಗೊಂಡಿದ್ದು, ದೇವಾಲಯದಲ್ಲಿ ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀ ದೇವಿಯ ದರ್ಶನವನ್ನು ಪಡೆದು ಪುನೀತರಾದರು.
ಅಕ್ಷರ ಅಭ್ಯಾಸ , ತೊಟ್ಟಿಲು ಸೇವೆ : ವಿಜಯ ದಶಮಿಯಂದು ತ್ರಿಕಾಲ ಪೂಜೆಯ ಜತೆಗೆ ಮಕ್ಕಳಿಗೆ ಅಕ್ಷರ ಅಭ್ಯಾಸ, ಅನ್ನ ಪ್ರಾಶನ, ಬೆಳಗ್ಗೆ ಸಾಮೂಹಿಕ ಚಂಡಿಕಾ ಹೋಮ,ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಚಂಡಿಕಾ ಪಾರಾಯಣ, ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ ಅತ್ಯಂತ ಶೃದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ್, ಅನಿತಾ ಶೇರೆಗಾರ್, ದೇವಳದ ಪ್ರಧಾನ ಅರ್ಚಕ ಅನಂತ ಪುರಾಣಿಕ್, ಹೊಸ್ಮನೆ ಗಂಗಾಧರ, ದೇಗುಲದ ಧಾರ್ಮಿಕ ಉಸ್ತುವಾರಿ ಮೋಹನದಾಸ್ ಶೇರೆಗಾರ್, , ದೇವಳದ ವ್ಯವಸ್ಥಾಪಕ ರಾಜಶೇಖರ ಹೆಗ್ಡೆ ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.
ಚಿತ್ರಗಳು : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ