Advertisement
ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿದರು.ಕಾಸರಗೋಡು ಜಿ. ಪಂ. ಸದಸ್ಯರಾದ ಹರ್ಷಾದ್, ಫರೀದಾ ಝಕೀರ್, ಪುಷ್ಪಾ ಅಮೆಕ್ಕಳ, ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಉಮೇಶ್ ಶೆಟ್ಟಿ, ಬೇಕೂರು ಶಾಲಾ ಮುಖ್ಯಶಿಕ್ಷಕ ಉದಯಶಂಕರ್, ಪಿ.ಟಿ.ಎ. ಅಧ್ಯಕ್ಷ ಅಬ್ದುಲ್ ರಹಿಮಾನ್ ಸಹಾಯಕ ನಿರ್ದೇಶಕ ಡಾ| ಗಿರೀಶ್ ಚೋಳಯಿಲ್, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಮಂಜೇಶ್ವರ ಎಸ್.ಐ. ಶಾಜಿ ಎಂ.ಪಿ., ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಕಾಸರಗೋಡು ಮುಂತಾದವರ ಸಮ್ಮುಖದಲ್ಲಿ ಮಾತುಕತೆ ನಡೆಯಿತು.
Related Articles
Advertisement
ನಿಯುಕ್ತ ಕನ್ನಡ ಬಲ್ಲ ಮಲೆಯಾಳಿ ಅಧ್ಯಾಪಕರನ್ನು ಶಿಕ್ಷಣ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಕನ್ನಡದ ಕುರಿತು ಪ್ರಶ್ನಿಸಿದಾಗ ಇವರಿಗೆ ಕನ್ನಡ ಏನೂ ಅರಿಯದೆಂಬುದಾಗಿ ಮನದಟ್ಟಾ ಯಿತು. ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕನ್ನಡ ಬಲ್ಲವರೆಂದು ಸುಳ್ಳು ಮಾಹಿತಿ ನೀಡಿ ಉದ್ಯೋಗ ಗಿಟ್ಟಿಸಿರುವುದಾಗಿ ದೃಢವಾಯಿತು. ಇದನ್ನು ಒಪ್ಪಿಕೊಂಡ ಇವರು ಮುಂದಿನ ದಿನಗಳಲ್ಲಿ ಕನ್ನಡ ಅಭ್ಯಾಸ ಮಾಡಿ ಶಾಲೆಗೆ ಬರುವುದಾಗಿ ಬರಹ ಮೂಲಕ ತಿಳಿಸಿದರು.
ಮಕ್ಕಳ ದಿಟ್ಟ ನಿಲುವುಕನ್ನಡ ಬಲ್ಲೆನೆಂಬುದಾಗಿ ಹಿಂಬಾಗಿಲ ಮೂಲಕ ನೇಮಕಗೊಂಡ ಈ ಅಧ್ಯಾಪಕರನ್ನು ತರಗತಿಯ ಪಾಠಕ್ಕೆ ಬರಲು ಬಿಡ ಲಾರೆವು.ಅಧ್ಯಾಪಕರಿಗೆ ಉದ್ಯೋಗ ಪ್ರಶ್ನೆಯಾದರೆ ಇದು ನಮ್ಮ ಭವಿಷ್ಯದ ಪ್ರಶ್ನೆ.ಕನ್ನಡ ತಿಳಿಯದ ನಾವು ಪರೀಕ್ಷೆ ಯ ಮುಂದಿನ ದಿನಗಳಲ್ಲಿ ನಮಗೆ ಮಲಯಾಳಿ ಅಧ್ಯಾಪಕರು ಪಾಠ ಮಾಡಿದಲ್ಲಿ ಇದನ್ನು ಅರಗಿಸಲು ಕಷ್ಟ. ಆದುದರಿಂದ ಮುಂದೆ ನಾವು ಉಪವಾಸ ಪ್ರತಿಭಟನೆ ನಡೆಸಲೂ ಸಿದ್ಧವೆಂಬುದಾಗಿ ಉಭಯ ಶಾಲಾ ಮಕ್ಕಳ ಹೇಳಿಕೆಯಾಗಿತ್ತು. ಎರಡೂ ಶಾಲೆಗಳಲ್ಲಿ ಮಧ್ಯಾಹ್ನದ ತನಕ ಸುಡುಬಿಸಿಲಿನಲ್ಲಿ ಶಾಲೆಯ ಗೇಟಿನಲ್ಲಿ ಪ್ರತಿಭಟನೆ ನಡೆಸಿದರು. ಸುಳಿಯದ ಕನ್ನಡ ಸಂಘಟನೆಗಳು
ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಯವರನ್ನು ಬಿಟ್ಟರೆ ಯಾವುದೇ ಕನ್ನಡ ಸಂಘಟನೆಗಳ ನಾಯಕರು ಇತ್ತ ಸುಳಿಯದಿರುವುದು ಹಲವರ ಸಂಶಯಕ್ಕೆ ಎಡೆ ಮಾಡಿತು. ಕರ್ನಾಟಕ ಸರಕಾರದಿಂದ ಕೇವಲ ಸವಲತ್ತಿಗಾಗಿ ಕಾರ್ಯಕ್ರಮಗಳನ್ನು ನಡೆಸುವ ಕೆಲವು ಕನ್ನಡ ಸಂಘಟನೆಗಳ ನಾಯಕರೆನಿಸಿ ಕೊಳ್ಳುವವರು ಇಂತಹ ಕನ್ನಡದ ಜ್ವಲಂತ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂಬ ಆರೋಪಕ್ಕೆ ಕಾರಣವಾಯಿತು.