ಕುಂಬಳೆ :ಅತ್ಯಂತ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ಶಬರಿಮಲೆಗೆ ಅಪಚಾರ ಎಸಗಿದವರು ಮುಂದೆ ಇದರ ಪ್ರತಿಫಲ ವನ್ನು ಉಣಲಿರುವರು.ಕ್ಷೇತ್ರ ಆಚಾರ ಉಲ್ಲಂಘನೆಯನ್ನು ಪ್ರತಿಭಟಿಸಿದ ಹಿಂದೂ ಗಳ ಮೇಲಿನ ಹಲ್ಲೆ ದಬ್ಟಾಳಿಕೆ ಅನೀತಿಗೆ ಮುಂದಿನ ದಿಗಳಲ್ಲಿ ತಕ್ಕ ಉತ್ತರ ದೊರೆಯಲಿ ರುವುದಾಗಿ ಧಾರ್ಮಿಕ ನಾಯಕ ಕುಂಟಾರು ರವೀಶ ತಂತ್ರಿ ಹೇಳಿದರು.
ಕ್ಷೇತ್ರ ಆಚಾರ ಲಂಘನೆಯ ವಿರುದ್ಧ ಮಾತೆಯರು ಹೋರಾಟಕ್ಕೆ ಇಳಿದಿರು ವುದು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರು ಜಾತಿಭೇಧ ಬಿಟ್ಟು ಒಟ್ಟಾಗಿ ಅನಾಚಾರದ ವಿರುದ್ಧ ಪ್ರತಿಭಟಿಸಬೇಕೆಂದರು.
ಮಂಗಲ್ಪಾಡಿ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಹನ್ಮೊಂದನೇ ವರ್ಷದ ವಿಶೇಷ ಹೂವಿನ ಪೂಜೆ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಅಡ್ಕ ಶ್ರೀ ಭಗವತೀ ಕ್ಷೇತ್ರದ ಆಡಳಿತ ಸಮಿತಿ ಕೋಶಾಧಿಕಾರಿ ಪಿ.ಕೃಷ್ಣ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್ ಕಾರ್ಯದರ್ಶಿ ಗಣೇಶ್ ಪಾರೆಕಟ್ಟೆ ಅತಿಥಿಯಾಗಿ ಭಾಗವಹಿಸಿದರು.ಮಹಿಳಾ ಸಂಘದ ಅಧ್ಯಕ್ಷೆ ಹೇಮಲತಾ ಬಾಲಕೃಷ್ಣ ಬಂದ್ಯೋಡು ಮಹಿಳಾ ಸಂಘದ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ವಿದ್ಯಾರ್ಥಿ ವೇತನ ವಿತರಣೆ ಮತ್ತು ದ್ವಿತೀಯ ಪದವಿಪೂರ್ವ ಪರೀಕ್ಷೆಯಲ್ಲಿ ಶೇ. 97 ಅಂಕ ಪಡೆದ ವಿದ್ಯಾರ್ಥಿನಿ ಅಮೃತಾ ಅವರನ್ನು ಸಮ್ಮಾನಿಸಲಾಯಿತು. ರಜನಿ ಸುರೇಶ್ ಮುಟ್ಟ ಸ್ವಾಗತಿಸಿದರು. ಅಮಿತಾ ಆನಂದ್ ವೀರನಗರ ವಂದಿಸಿದರು. ಮೋಹಿನಿ ಹರೀಶ್ ನಿರೂಪಿಸಿದರು.