Advertisement

5 ವರ್ಷ ಕುಮಾರಸ್ವಾಮಿಯೇ ಸಿಎಂ

06:00 AM Jun 02, 2018 | Team Udayavani |

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ನಿರ್ಧರಿಸುವ ಸಂದರ್ಭದಲ್ಲಿ ಮುಂದಿನ ಐದು ವರ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಯಾಗಿ ಮುಂದುವರಿಸಲು ಕಾಂಗ್ರೆಸ್ಸನ್ನು ಒಪ್ಪಿಸುವಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಯಶಸ್ವಿಯಾಗಿದ್ದಾರೆ.

Advertisement

ಶುಕ್ರವಾರ ಎರಡೂ ಪಕ್ಷಗಳ ಮಧ್ಯೆ ಖಾತೆಗಳ ಹಂಚಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ದೇವೇಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮತ್ತಿತರರು ಸಭೆ ನಡೆಸಿದರು. ಈ ವೇಳೆ ರಾಹುಲ್‌ ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಮಾತುಕತೆ ವೇಳೆ ಸರ್ಕಾರದ ಮಟ್ಟದಲ್ಲಿ ಆಗಿರುವ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸುವ ಬಗ್ಗೆ ವೇಣುಗೋಪಾಲ್‌ ಅವರು ದೇವೇಗೌಡರಲ್ಲಿ ಪ್ರಸ್ತಾಪಿಸಿದರು. ಇದೇ ಅವಕಾಶವನ್ನು ಬಳಸಿಕೊಂಡ ದೇವೇಗೌಡರು, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಕಾಂಗ್ರೆಸ್‌ನ ಸ್ಪಷ್ಟನೆ ಕೇಳಿದರು. ಮೈತ್ರಿ ಮುಂದುವರಿಸುವ ಮುನ್ನ ಮುಖ್ಯಮಂತ್ರಿ ಹುದ್ದೆ ಬಗ್ಗೆ ನಿರ್ಧರಿಸುವಂತೆ ಕಾಂಗ್ರೆಸ್‌ಗೆ ಸೂಚಿಸಿದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ವಿದೇಶದಲ್ಲಿರುವ ರಾಹುಲ್‌ ಅವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿದ ವೇಣುಗೋಪಾಲ್‌, ಸ್ವಲ್ಪ ಹೊತ್ತು ಮಾತನಾಡಿ ನಂತರ ದೇವೇಗೌಡರಿಗೆ  ಫೋನ್‌ ಕೊಟ್ಟರು. ರಾಹುಲ್‌ ಜತೆ ಮಾತನಾಡಿದ ದೇವೇಗೌಡರು, ಮೈತ್ರಿ ಮುಂದುವರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಮುಖ್ಯಮಂತ್ರಿ ಹುದ್ದೆ ತಲಾ 30 ತಿಂಗಳು ಹಂಚಿಕೊಳ್ಳುವ ಬಗ್ಗೆ ನಿಮ್ಮ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಈ ರೀತಿಯಾದರೆ ಮೈತ್ರಿ ಮುಂದುವರಿಸುವುದು ಕಷ್ಟವಾಗಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ, ರಾಜ್ಯದಲ್ಲಿ ಬಿಜೆಪಿ ವಿರುದಟಛಿ ಹೋರಾಟ ಮಾಡಬೇಕಾದರೆ ಮೈತ್ರಿ ಅನಿವಾರ್ಯ ಎಂಬ ಕಾರಣಕ್ಕೆ ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿ ಪೂರ್ಣಾವಧಿ ಮುಂದುವರಿಯಲು ರಾಹುಲ್‌ ಒಪ್ಪಿಗೆ ನೀಡಿದರು. ಇದಾದ ಬಳಿಕವೇ ದೇವೇಗೌಡರು ಮೈತ್ರಿಗೆ ಸಮ್ಮತಿಸಿದ್ದರು ಎಂದು ಮೂಲಗಳು ಹೇಳಿವೆ.

ಹೊಸ ಬಜೆಟ್‌ ಮಂಡನೆ
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಸದಾಗಿ ಬಜೆಟ್‌ ಮಂಡಿಸಲಿದ್ದಾರೆ. ಕಾಂಗ್ರೆಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರೂ ಹಿಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ಗೆ ಬದಲಾಗಿ ಹೊಸ ಬಜೆಟ್‌ ಮಂಡಿಸಲು
ತೀರ್ಮಾನಿಸಿದ್ದಾರೆ. ಕುಮಾರಸ್ವಾಮಿಯವರೇ ಈ ಸರ್ಕಾರದಲ್ಲಿ ಹಣಕಾಸು ಸಚಿವರೂ ಆಗಲಿದ್ದು, ಅವರು ಮಂಡಿಸಲಿರುವ ಮೊದಲ ಬಜೆಟ್‌ ಸಹ ಇದಾಗಲಿದೆ.  ಹೀಗಾಗಿ, ಬಜೆಟ್‌ ಬಗ್ಗೆ ಕುತೂಹಲ ಮೂಡಿದೆ.

ಡಾ.ಸುಬ್ರಮಣ್ಯ ಸಿಎಂ ಆರ್ಥಿಕ ಸಲಹೆಗಾರ: ನಿವೃತ್ತ  ಐಎಎಸ್‌ ಅಧಿಕಾರಿ ಡಾ.ಎಸ್‌.ಸುಬ್ರಮಣ್ಯ ಅವರನ್ನು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಾ.ಸುಬ್ರಮಣ್ಯ ಅವರು ನಿವೃತ್ತಿ ನಂತರ ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡು
ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪ್ರಣಾಳಿಕೆ ಸಿದಟಛಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೂ ಅವರ ಹೆಸರು ಪ್ರಸ್ತಾಪವಾಗಿತ್ತು. ಕೊನೇ ಗಳಿಗೆಯಲ್ಲಿ ಧರ್ಮೇಗೌಡರಿಗೆ
ಎಂಎಲ್‌ಸಿ ಟಿಕೆಟ್‌ ಲಭ್ಯವಾಗಿತ್ತು. 

Advertisement

ಮುಖ್ಯಮಂತ್ರಿ ಸಭೆಗೆ ಮೊಬೈಲ್‌ ನಿಷೇಧ
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡೆಸುವ ಇಲಾಖಾ ಮುಖ್ಯಸ್ಥರ ಸಭೆಗಳಿಗೆ ಇನ್ನು ಮೊಬೈಲ್‌ ನಿಷೇಧ. ಇಲಾಖಾವಾರು ಅಧಿಕಾರಿಗಳ ಸಭೆಗಳಲ್ಲಿ ಅಧಿಕಾರಿಗಳು ಮೊಬೈಲ್‌ ಫೋನ್‌ಗಳಲ್ಲಿ ಸಂದೇಶ ನೋಡುವುದು, ರವಾನಿಸುವುದರಲ್ಲಿ ತೊಡಗಿರುವುದನ್ನು ಗಮನಿಸಿರುವ
ಮುಖ್ಯಮಂತ್ರಿಯವರು ಈ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ನಿಗದಿತ ಸಭೆಗೆ ಆಗಮಿಸುವ ಅಧಿಕಾರಿಗಳು ಕೊಠಡಿಯೊಳಗೆ ಮೊಬೈಲ್‌
ತರುವಂತಿಲ್ಲ. ಸಮನ್ವಯ ಅಧಿಕಾರಿಗಳ ಕೈಗೆ ಕೊಟ್ಟು ಒಳಗೆ ಬರಬೇಕು. ನಂತರ ವಾಪಸ್‌ ಪಡೆಯಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next