Advertisement
ಇತ್ತೀಚೆಗೆ, ಕೆಲವು ವ್ಯಕ್ತಿಗಳು ಸಚಿವರನ್ನು ಭೇಟಿ ಮಾಡಿಸುವುದಾಗಿ ಜನರನ್ನು ಕರೆತರುವುದು. ಶಿಫಾರಸು ಪತ್ರ ಕೊಡಿಸುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳ ಹೆಸರಿನಲ್ಲಿ ಹಣ ಪಡೆಯುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಮಾಧ್ಯಮಗಳಿಗೂ ಕೆಲವೊಂದು ನಿರ್ಬಂಧ ಹೇರುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿ ಹಾಗೂ ಸಚಿವರು ಪತ್ರಿಕಾಗೋಷ್ಠಿ ನಡೆಸುವಾಗ ಸಮ್ಮೇಳನ ಸಭಾಂಗಣದಲ್ಲಿ ಸಮಯ ನಿಗದಿ ಮಾಡಿ ಪತ್ರಿಕಾಗೋಷ್ಠಿ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಒಂದೊಮ್ಮೆ ಮಾಧ್ಯಮಗಳು ಸಚಿವರಿಂದ ಅಥವಾ ಅಧಿಕಾರಿಗಳಿಂದ ಸ್ಪಷ್ಟನೆ, ವಿವರ ಬಯಸಿದಲ್ಲಿ ಸಂಬಂಧಪಟ್ಟವರು ಲಭ್ಯತೆ ಇದ್ದರೆ ಸಮ್ಮೇಳನ ಸಭಾಂಗಣದಲ್ಲೇ ಬಂದು ಮಾಹಿತಿ ನೀಡುವ ವ್ಯವಸ್ಥೆ ಜಾರಿಗೂ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಮುಖ್ಯಮಂತ್ರಿ ಕುಮಾರ ಸ್ವಾಮಿ ಯವರು ಪ್ರತಿಕ್ರಿಯಿಸಿ, “”ವಿಧಾನಸೌಧ- ವಿಕಾಸ ಸೌಧಕ್ಕೆ ಕೆಲವು ದಳ್ಳಾಳಿಗಳು ಪ್ರವೇಶ ಪಡೆಯುತ್ತಿದ್ದಾರೆ. ಈ ದೃಶಗಳು ಸಿಸಿ ಟಿವಿಗಳಲ್ಲಿ ರೆಕಾರ್ಡ್ ಆಗಿವೆ. ಇದರಿಂದಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ತೊಡಕು ಉಂಟಾಗುತ್ತಿದೆ ಎಂದರು.
ನಡೆಯುತ್ತಿರುವ ಬಗ್ಗೆ ಹಾಗೂ ಸಚಿವರಿಂದ ಕೆಲಸ ಮಾಡಿಸಿ ಕೊಡುವುದಾಗಿ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಹೀಗಾಗಿ, ಪ್ರವೇಶಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ವಿಧಾನಸೌಧ- ವಿಕಾಸ ಸೌಧಕ್ಕೆ ಭದ್ರತೆಯೂ ಅಗತ್ಯವಾದ್ದರಿಂದ ಅತಿ ಭದ್ರತಾ ವಲಯ ಎಂದು ಘೋಷಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದೆ” ಎಂದಿದ್ದಾರೆ. ಕಾರ್ಯಕರ್ತರ ಪ್ರವೇಶ ಜಾಸ್ತಿ: ಮೂಲಗಳ ಪ್ರಕಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗ್ಗೆ ವೇಳೆ ವಿಧಾನಸೌಧಕ್ಕೆ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಸೇರಿ ದಂತೆ ಸಚಿವರು ದೈನಂದಿನ ಕೆಲಸ ಕಾರ್ಯ ಮಾಡಲು ಬಿಡುತ್ತಿಲ್ಲ. ಶಿಫಾರಸು ಪತ್ರ, ನೆರವು ಮತ್ತಿತರ ಸಹಾಯ ಕೇಳಿ ಬರುವುದು. ಕಚೇರಿಗಳ ಮುಂದೆ ಜಮಾವಣೆಗೊಳ್ಳುವುದು ಹೆಚ್ಚಾಗುತ್ತಿದೆ. ಹೀಗಾಗಿ, ಇದನ್ನು ನಿಯಂತ್ರಿಸಲು ಅತಿ ಭದ್ರತಾ ವಲಯ ಎಂದು ಘೋಷಿಸಲು ನಿರ್ಧರಿಸಲಾಗಿದೆ.
Related Articles
Advertisement
ಮಾಧ್ಯಮಕ್ಕೂ ನಿರ್ಬಂಧ?ಈ ಮಧ್ಯೆ ಮಾಧ್ಯಮದವರನ್ನು ಬಿಡದಂತೆ ವಿಧಾನ ಸೌಧ ಡಿಸಿಪಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಈ ಕುರಿತು ಮೌಖೀಕ ಆದೇಶ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಮಂಗಳವಾರ ವಿಧಾನಸೌಧದ ಸಿಎಂ ಕಚೇರಿ ಬಳಿ ಮಾಧ್ಯಮದವರು ತೆರಳಲು ಹೋದಾಗ ಪೊಲೀಸರಿಂದ ತಡೆಯುವ ಪ್ರಯತ್ನ ನಡೆಯಿತು. ಹೀಗಾಗಿ, ಮಾಧ್ಯಮದವರು ಹಾಗೂ ಪೊಲೀಸರ ನಡುವೆ ಮಾತಿನ ಘರ್ಷಣೆಯೂ ನಡೆಯಿತು. ನಂತರ ಸಿಎಂ ಕುಮಾರಸ್ವಾಮಿಯವರೇ ಈ ಬಗ್ಗೆ ಸ್ಪಷ್ಟನೆ ನೀಡಿದರು. ಮಾಧ್ಯಮಗಳಿಗೆ ನಿರ್ಬಂಧ ಹೇರಿಲ್ಲ. ಮಾಧ್ಯಮಗಳು ವಿಧಾನಸೌಧದಲ್ಲಿ ಎಲ್ಲೆಡೆ ಸುತ್ತಾಡಿ, ಒಂದೊಂದು ಬಾರಿ ಒಬ್ಬೊಬ್ಬರು ಬಂದು ಪ್ರತಿಕ್ರಿಯೆ ಕೇಳುತ್ತಿದ್ದಾರೆ. ಹೀಗಾಗಿ, ಮಾಧ್ಯಮಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಅಲ್ಲೇ ಎಲ್ಲ ಮಾಹಿತಿ ಸಿಗುವ ವ್ಯವಸ್ಥೆ ಮಾಡಲಿದ್ದೇನೆ ಎಂದು ತಿಳಿಸಿದರು. ಸದ್ಯದ ವ್ಯವಸ್ಥೆಯೇನು?
ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ವರೆಗೆ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಅವಕಾಶ ಇದೆ. ಮುಂದೆಯೂ ಆ ವ್ಯವಸ್ಥೆ ಇರಲಿದೆ. ನಿರ್ಬಂಧ ಯಾರ್ಯಾರಿಗೆ?
ಬೆಳಗ್ಗೆ 10.30 ರಿಂದ 3 ಗಂಟೆ ತನಕ ಸಾರ್ವಜನಿಕರು, ರಾಜಕಾರಣಿಗಳು, ಶಾಸಕರು, ಸಚಿವರ ಬೆಂಬಲಿಗರು. ಮಾಧ್ಯಮಗಳ ನಿಯಂತ್ರಣ
ಕುರಿತಂತೆ ಸಿಎಂ ಏನು ಹೇಳುತ್ತಾರೆಯೋ ಅದರಂತೆ ನಾವು ನಡೆದುಕೊಳ್ಳುತ್ತೇವೆ. ಅವರು ನಮ್ಮ ಮುಖ್ಯಸ್ಥರು. ಅವರು ಹೇಳಿದಂತೆ ನಾವು ನಡೆಯಬೇಕಾಗುತ್ತದೆ.
● ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ