Advertisement
ನದಿಯಲ್ಲಿ ಪ್ಲಾಸ್ಟಿಕ್ ಹಾಗೂ ಬಟ್ಟೆ ಬರೆಗಳ ತ್ಯಾಜ್ಯ ವ್ಯಾಪಕವಾಗಿ ಹರಡಿಕೊಂಡ ಬಗ್ಗೆ ಪರಿಸರಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ನಾಲ್ವರು ಸ್ಕೌಟ್ಸ್ ವಿದ್ಯಾರ್ಥಿಗಳು ಕಳೆದ ರವಿವಾರ ಸ್ವಯಂಪ್ರೇರಿತರಾಗಿ ನದಿಯಲ್ಲಿದ್ದ ಅಗಾಧ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಿದ್ದರು.
ಸ್ಕೌಟ್ಸ್ ವಿದ್ಯಾರ್ಥಿಗಳ ನದಿ ಸ್ವತ್ಛತಾ ಅಭಿಯಾನವನ್ನು ಶ್ಲಾ ಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇಗುಲದ ವ್ಯವಸ್ಥಾಪಕ ವೆಂಕಟೇಶ್ ರಾವ್, ದೇಗುಲದಲ್ಲಿ ಪಿಂಡ ಪ್ರದಾನ ಮಾಡಲು ಬರುವ ಭಕ್ತರು ಅಸ್ಥಿಯನ್ನು ಪ್ಲಾಸ್ಟಿಕ್ ಕರಡಿಗೆಯ ಬದಲು ಮಣ್ಣಿನ ಮಡಕೆಯಲ್ಲೇ ತರಲು ನಿರ್ದೇಶನ ನೀಡಲಾಗುವುದು. ಪಿಂಡ ಪ್ರದಾನಾದಿ ವಿಧಿವಿಧಾನಗಳ ಬಳಿಕ ನದಿಯಲ್ಲಿ ಯಾವುದೇ ವಸ್ತ್ರಗಳನ್ನು ತ್ಯಜಿಸಬಾರದೆನ್ನುವ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಖಾಸಗಿಯಾಗಿ ಬಂದು ಸಂಗಮ ಕ್ಷೇತ್ರದಲ್ಲಿ ಅಪರ ಕ್ರಿಯೆಗಳನ್ನು ನಡೆಸುವ ಮಂದಿಯಿಂದ ನದಿ ಸ್ವಚ್ಛತೆಗೆ ಭಂಗ ಉಂಟಾಗುತ್ತಿದ್ದು, ಅಂತಹವರ ವಿರುದ್ಧ ಆಡಳಿತ ವ್ಯವಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.