Advertisement

ನೆಕ್ಕಿಲಾಡಿ ಸಮೀಪದ ಕುಮಾರಧಾರಾ ನದಿ ಕಿಂಡಿ ಅಣೆಕಟ್ಟು: ತುಂಬಿದ ಹೂಳು: ನೀರು ಸಂಗ್ರಹ ಸವಾಲು

10:25 PM Dec 09, 2020 | mahesh |

ಪುತ್ತೂರು: ನಗರಕ್ಕೆ ನೀರೊದ ಗಿಸಲು ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಸಮೀಪ ಕುಮಾರಧಾರಾ ನದಿಗೆ ನಿರ್ಮಿ ಸಿರುವ ಕಿಂಡಿ ಅಣೆಕಟ್ಟಿನಲ್ಲಿ ಹೂಳು ತುಂಬಿದೆ. ಇದರಿಂದ ನಿರೀಕ್ಷೆಯ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಮಸ್ಯೆ ಉಂಟಾ ಗಿದೆ ಈ ಹಿನ್ನೆಲೆಯಲ್ಲಿ ನಗರಾಡಳಿತ ಹೂಳು ತೆರವು ಮಾಡಲು ಯೋಜನೆ ರೂಪಿಸಿದೆ.

Advertisement

12 ವರ್ಷಗಳ ಹಿಂದೆ ಕುಡ್ಸೆಂಪ್‌ ಯೋಜನೆಯಡಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನ ಒಳಭಾಗದಲ್ಲಿ ಜಾಕ್‌ವೆಲ್‌ ಸುತ್ತ ಹೂಳು ಭರ್ತಿಯಾಗಿದ್ದರೆ, ಹೊರ ಭಾಗದಲ್ಲಿ ಮರಳು ತುಂಬಿಕೊಂಡಿದೆ. ಎರಡೂ ಸಮಸ್ಯೆ ಏಕಕಾಲದಲ್ಲಿ ಕಾಣಿಸಿ ಕೊಂಡ ಕಾರಣ ಜನವರಿಯಲ್ಲಿ ನಗರಕ್ಕೆ ಕುಡಿಯುವ ನೀರಿನ ಅಭಾವ ತಲೆ ದೋರುವ ಭೀತಿ ಎದುರಾಗಿದೆ. ಇದನ್ನು ಮನಗಂಡ ನಗರಸಭೆಯ ನೂತನ ಆಡಳಿತ ಹೂಳೆತ್ತಿ ನೀರು ಸಂಗ್ರಹ ಸಮಸ್ಯೆ ಪರಿಹರಿಸಲು ನಿರ್ಧರಿಸಿದೆ.

9 ಮೀಟರ್‌ ಎತ್ತರವಿರುವ ಕಿಂಡಿ ಅಣೆ ಕಟ್ಟಿನಲ್ಲಿ 630 ಮಿಲಿಯನ್‌ ಲೀಟರ್‌ (ಎಂಎಲ್‌ಡಿ) ನೀರು ತುಂಬಿಕೊಳ್ಳುವ ಸಾಮರ್ಥ್ಯವಿದೆ. ನಗರಕ್ಕೆ ಇದಕ್ಕಿಂತ ಹೆಚ್ಚಿನ ನೀರಿನ ಆವಶ್ಯಕತೆ ಇರುವ ಕಾರಣ, ನಗರದ ನಾನಾ ಕಡೆ ಕೊರೆಯಲಾಗಿರುವ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಅಣೆಕಟ್ಟಿನ ಹೊರ ಭಾಗದಲ್ಲಿ ನದಿಯಲ್ಲಿ ಮರಳು ಹೇರಳ ವಾಗಿ ಶೇಖರಣೆ ಯಾಗಿ ರುವುದೂ ಸಮಸ್ಯೆಯಾಗಿದೆ. ಮರಳು ತೆಗೆಯುವ ಅಧಿಕಾರ ನಮಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಿದ್ದೇವೆ. ಜಿಲ್ಲಾಡಳಿತದಿಂದಲೇ ಮರಳು ತೆಗೆ ದರೆ ಉತ್ತಮ ಅಥವಾ ನಗರಸಭೆಗೆ ವಿಶೇಷ ಅಧಿಕಾರ ನೀಡಿದರೆ ಜಲಸಿರಿ ಯೋಜನೆ ಯಡಿ ಕೆಲಸ ಮಾಡಿಸಲು ಅವಕಾಶವಿದೆ ಎನ್ನುತ್ತಾರೆ ನಗರಸಭೆಯ ಜನಪ್ರತಿನಿಧಿಗಳು. 2019, 2020ರ ಬೇಸಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಅದಕ್ಕಿಂತ ಹಿಂದಿನ 2 ವರ್ಷಗಳಲ್ಲಿ ಎಪ್ರಿಲ್‌ ಹೊತ್ತಿಗೆ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೇ ವೇಳೆ ಮಂಗಳೂರು ನಗರದ ಸಮಸ್ಯೆ ನಿವಾರಿಸಲು ಉಪ್ಪಿನಂಗಡಿ ಬಳಿಯ ಅಣೆಕಟ್ಟನ್ನು ತೆರೆದು ನೀರು ಹರಿಸಲಾಗಿತ್ತು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಹಲಗೆ ಜೋಡಣೆಗೆ ಯಾಂತ್ರಿಕ ಪರಿಕರವಿಲ್ಲ
ಈಗಾಗಲೇ ಬೇಸಗೆ ಕಾಲಿಟ್ಟಿರುವ ಕಾರಣ ಕೆಲವೇ ದಿನಗಳಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಿಸುವ ಕೆಲಸ ನಡೆಯಬೇಕಾಗಿದೆ. ಕಟ್ಟೆಯ ಕಿಂಡಿಗಳಲ್ಲಿ ಹಲಗೆಗಳನ್ನು ಇಳಿಸಿ ನೀರು ಸಂಗ್ರಹಿಸಲಾಗುತ್ತದೆ. ಇಲ್ಲಿ ಮಾನವ ಶ್ರಮದ ಮೂಲಕ ಹಲಗೆ ಜೋಡಿಸಲಾಗುತ್ತದೆ. ರಾಜ್ಯದ ಹಲವೆಡೆ ಪೌರಾಡಳಿತ ಸಂಸ್ಥೆಗಳ ಕುಡಿಯುವ ನೀರಿನ ಯೋಜನೆಯಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಯಾಂತ್ರೀಕೃತವಾಗಿ ಹಲಗೆ ಇಳಿಸಲಾಗುತ್ತದೆ. ಪುತ್ತೂರಿನಲ್ಲಿ ಈ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ.

Advertisement

7 ಲಕ್ಷ ರೂ. ಯೋಜನೆ
ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿನ ಹೂಳು ತೆಗೆಯುವ ಕಾಮಗಾರಿ ನಡೆಯಲಿದೆ. 7 ಲಕ್ಷ ರೂ. ಗಳ ಅಂದಾಜು ಪಟ್ಟಿ ತಯಾರಿಸಿದೆ. ಅಣೆಕಟ್ಟು ನಿರ್ಮಾಣ ವಾದಂದಿನಿಂದ ಇದೇ ಮೊದಲ ಹೂಳು ಮೇಲೆತ್ತುವ ಯೋಜನೆ ರೂಪಿಸ ಲಾಗಿದೆ.
-ಜೀವಂಧರ್‌ಜೈನ್‌,  ಅಧ್ಯಕ್ಷರು, ನಗರಸಭೆ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next