Advertisement

ಕುಮಾರ ಪರ್ವತ ಚಾರಣಕ್ಕೆ ತೆರಳಿದ್ದ ಯುವತಿಯ ಕಾಲು ಮುರಿತ; ಹೊತ್ತು ತಂದ ಯುವಕರು

10:15 AM Oct 16, 2019 | keerthan |

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಹ್ಮಣ್ಯದಿಂದ ಕುಮಾರಪರ್ವತ ಚಾರಣಕ್ಕೆ ಸೋಮವಾರ ತೆರಳಿದ್ದ ಬೆಂಗಳೂರು ಮೂಲದ ಯುವತಿಯೋರ್ವಳು ಬಿದ್ದು ಕಾಲು ಮುರಿದುಗೊಂಡಿದ್ದು ಆಕೆಯನ್ನು ಸುಬ್ರಹ್ಮಣ್ಯದ ಸ್ಥಳೀಯ ಯುವಕರು ಸುಮಾರು 7 ಕಿಲೋಮೀಟರ್ ದೂರದವರೆಗೆ ಸುರಕ್ಷಿತವಾಗಿ ಹೊತ್ತು ತಂದ ಘಟನೆ ಮಂಗಳವಾರ ನಡೆದಿದೆ.

Advertisement

ಬೆಂಗಳೂರು ಮೂಲದ 23 ಜನರ ತಂಡದ ಚಾರಣಕ್ಕೆ ಸೋಮವಾರ ತೆರಳಿತ್ತು. ಈ  ಪೈಕಿ ಒಬ್ಬರು ಯುವತಿ ಜಾರಿ ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದರು. ಇದಾದ ನಂತರ ಪರ್ವತದ ಅರಣ್ಯ ಅಧಿಕಾರಿಗಳು ಸುಬ್ರಹ್ಮಣ್ಯದ ಯುವಕರಿಗೆ ಮಾಹಿತಿ ನೀಡಿದ್ದಾರೆ.

ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕುಸುಮಾಧರ, ಧರ್ಮಪಾಲ ಗೋಪಾಲಿ, ಕೃಷ್ಣ ಕುಮಾರ್ ಶೆಟ್ಟಿ, ಜೀವನ್ ಟಾಟಾಎಸಿ, ಸುಂದರ ಗೌಡ ಚೇರು ಎಂಬ ಯುವಕರ ತಂಡ ತಕ್ಷಣ ತೆರಳಿ ಯುವತಿಯನ್ನು ಅಟ್ಟೆ ಮೇಲೆ ಮಲಗಿಸಿ ಸುಮಾರು ಏಳು ಕಿಲೋಮೀಟರ್ ಹೆಗಲಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾರೆ.

ಯುವಕರ ಈ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next