Advertisement
ದಾಸೋಹ ನಿಲಯದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 29ರಂದು ಬೆಳಗ್ಗೆ 8ಕ್ಕೆ ಯಲಗೂರದಲ್ಲಿ ಯಲಗೂರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರವಾಸ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ 9ಕ್ಕೆ ಹುಲ್ಲೂರಿನ ಸಿಬಿಎಸ್‌ಸಿ ಶಾಲೆಯಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ. ಅಂದು ಹುಲ್ಲೂರ, ಮುದ್ದಾಪುರ, ಜೀರಲಭಾವಿ, ಇಟಗಿ, ಆರೇಶಂಕರ, ರಾಜನಾಳ, ಬ್ಯಾಲಾಳ, ಕಣಕಾಲ, ಜಾಯವಾಡಗಿ, ಬ್ಯಾಕೋಡ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿಯಲ್ಲಿ, 30 ರಂದು ಗಂಗನಳ್ಳಿ, ಹಿಟ್ಟಿನಹಳ್ಳಿ, ಚಿಕ್ಕರೂಗಿ, ಕಡ್ಲೆàವಾಡ, ಮುಳಸಾವಳಗಿ, ನಿವಾಳಖೇಡ, ಹರನಾಳ, ಇಂಗಳಗಿ, ದೇವರ ಹಿಪ್ಪರಗಿ, ಬೊಮ್ಮನಜೋಗಿ, ಇಬ್ರಾಹಿಂಪುರ, ಜಾಲವಾದ, ಕೋರವಾರದಲ್ಲಿ, 31ರಂದು ದೇವರಹಿಪ್ಪರಗಿ, ಕೊಂಡಗೂಳಿ, ಹಂಚಲಿ, ಬೀಬಿ ಇಂಗಳಗಿ, ಕಲಕೇರಿಯಲ್ಲಿ, ಫೆ. 1ರಂದು ಮುದ್ದೇಬಿಹಾಳ, ಕುಂಟೋಜಿ, ಮಿಣಜಗಿ, ಬಳಗಾನೂರ, ಕೊಣ್ಣೂರ, ತಾಳಿಕೋಟದಲ್ಲಿ, ಫೆ. 2ರಂದು ಮುದ್ದೇಬಿಹಾಳ, ಕವಡಿಮಟ್ಟಿ, ಹಿರೇಮುರಾಳ, ನಾಗರಬೆಟ್ಟ, ನಾಲತವಾಡದಲ್ಲಿ ಸಭೆ ನಡೆಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.
Related Articles
ಒಲವು ತೋರಿಸಿದ್ದಾರೆ. ಜೆಡಿಎಸ್ ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕುಮಾರಸ್ವಾಮಿ ಅವರನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ನಾವೆಲ್ಲ ಸಿದ್ಧರಾಗಿದ್ದೇವೆ ಎಂದರು.
Advertisement
ಈ ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿ ಕಟ್ಟಲು ಸಾಕಷ್ಟು ಶ್ರಮಿಸಿರುವ ದಿ| ಜೆ.ಎಸ್. ದೇಶಮುಖ ಅವರ ಪತ್ನಿ ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರು ಜೆಡಿಎಸ್ ಬೆಂಬಲಿಸುತ್ತಾರೆ. ಈ ವಿಷಯದಲ್ಲಿ ಎದ್ದಿರುವ ಊಹಾಪೋಹಗಳೆಲ್ಲ ಸುಳ್ಳು. ಹಿಂದೆ ನಡೆದ ಜಿಪಂ, ತಾಪಂ, ನಾಲತವಾಡ ಪಪಂ ಚುನಾವಣೆಯಲ್ಲಿ ಅವರು ಜೆಡಿಎಸ್ ಪರ ಸಕ್ರಿಯವಾಗಿದ್ದರು. ಅವರು ಹೇಳಿದವರಿಗೆ ಟಿಕೆಟ್ ಕೊಡಲಾಗಿದೆ. ವಿಮಲಾಬಾಯಿ ಅಮ್ಮಾವ್ರ ವಿಷಯದಲ್ಲಿಗೊಂದಲ, ಊಹಾಪೋಹಕ್ಕೆ ಯಾರೂ ಮಹತ್ವ ಕೊಡಬಾರದು. ಕುಮಾರಸ್ವಾಮಿ ಅವರು ಪ್ರವಾಸದ ಸಂದರ್ಭ ಅಮ್ಮಾವ್ರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ನಡಹಳ್ಳಿ ತಿಳಿಸಿದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ಪುರಸಭೆ ಸದಸ್ಯರಾದ ಮನೋಹರ ತುಪ್ಪದ, ಶಿವಪುತ್ರಯ್ಯ, ಮುಖಂಡರಾದ ಸಂಗಪ್ಪ ಲಕ್ಷಟ್ಟಿ, ದಾನಪ್ಪ ನಾಗಠಾಣ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಅರ್ಷದ್ ಮೋಮೀನ್, ಮಹಾಂತೇಶ ಬೂದಿಹಾಳಮಠ, ಸಂಗಪ್ಪ ಬಾಗೇವಾಡಿ, ಸಂಜಯ್ ಓಸ್ವಾಲ್, ಮಹಾಂತೇಶ ಗಂಗನಗೌಡರ, ಜಿಲಾನಿ ಮುದ್ನಾಳ ಸೇರಿದಂತೆ ಹಲವರು ಇದ್ದರು.