Advertisement
ಅರಸಿನ ಕುಂಕುಮ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶಾಲಿನಿ ಎಂ. ರಾವ್ ಅವರ ನೇತೃತ್ವದಲ್ಲಿ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಕೊನೆಯಲ್ಲಿ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ನಂತರ ನಡೆದ ಪರಿಷತ್ತಿನ ಮಹಾ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎಂ. ಡಿ. ರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸಮಾಜ ಬಾಂಧವರಿಗಾಗಿ ಸ್ವಂತ ಕಚೇರಿ ಪಡೆದುಕೊಳ್ಳುವ ವಿಷಯದಲ್ಲಿ ಸಭಿಕರೊಂದಿಗೆ ಚರ್ಚಿಸಿ, ಎಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಬೇಕೆಂದು ವಿನಂತಿಸಿದರು.
Related Articles
Advertisement
ಕಾರ್ಯಾಧ್ಯಕ್ಷೆಯಾಗಿ ಶಾಲಿನಿ ಮಿಲಿಂದ ರಾವ್ ಅವರು ಆಯ್ಕೆಯಾದರೆ, ಇತರ ಪದಾಧಿಕಾರಿಗಳಾಗಿ ಉಮಾ ಶಿವ ರಾವ್ , ಕಲ್ಪನಾ ಶಶಿ ರಾವ್, ಬಿಂದು ಕುಂದರ್, ಕವಿತಾ ರೋಹನ್, ವಿಶಾಲಾಕ್ಷಿ ಅರುಣ ಚಂದ್ರಗಿರಿ, ದಿವ್ಯಾ ಕಲ್‌ನಾಡ್ ಅವರು ಆಯ್ಕೆಯಾದರು. ವೇದಿಕೆಯಲ್ಲಿ ಅಧ್ಯಕ್ಷ ಎಂ. ಡಿ. ರಾವ್, ಉಪಾಧ್ಯಕ್ಷ ರವಿ ಚಂದ್ರಗಿರಿ, ಜತೆ ಕಾರ್ಯದರ್ಶಿ ಉಮಾನಾಥ್ ರಾವ್, ಕೋಶಾಧಿಕಾರಿ ಶಾಂತರಾಮ್ ಜೆ. ಮಾಂಗಾಡ್, ಸಲಹೆಗಾರ ಬಿ. ಎಸ್. ರಾವ್, ಸದಸ್ಯರಾದ ಶಾಲಿನಿ ಎಂ. ರಾವ್, ರವಿ ಎಸ್. ಕಲ್‌ನಾಡ್, ಸಾಗರ್ ಪಿ. ರಾವ್, ಕೆ. ಎಂ. ರಾವ್, ಸುರೇಂದ್ರ ಎ. ರಾವ್ ಅವರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಉಮಾನಾಥ ರಾವ್ ವಂದಿಸಿದರು.
ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.