Advertisement
ರವಿವಾರ ಚೆನ್ನೈಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ “ಎ’ 47 ಓವರ್‌ಗಳಲ್ಲಿ 219ಕ್ಕೆ ಆಲೌಟ್ ಆಯಿತು. ಜವಾಬಿತ್ತ ಭಾರತ “ಎ’ 34 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 222 ರನ್ ಬಾರಿಸಿತು.
Related Articles
Advertisement
ಪೃಥ್ವಿ ಶಾ ಪರಾಕ್ರಮಚೇಸಿಂಗ್ ವೇಳೆ ಪೃಥ್ವಿ ಶಾ ಪ್ರಚಂಡ ರೀತಿಯಲ್ಲಿ ಬ್ಯಾಟ್ ಬೀಸಿ, ಕಿವೀಸ್ ಬೌಲರ್‌ಗಳ ಮೇಲೆರಗಿ ಹೋದರು. ಸಿಡಿಸಿದ್ದು 77 ರನ್. ಇದು ಕೇವಲ 48 ಎಸೆತಗಳಿಂದ ಬಂತು. ಈ ರಂಜನೀಯ ಬ್ಯಾಟಿಂಗ್ 11 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಇವರ ಜತೆಗಾರ ಋತುರಾಜ್ ಗಾಯಕ್ವಾಡ್ ಗಳಿಕೆ 30 ರನ್. ಮೊದಲ ವಿಕೆಟಿಗೆ 10.1 ಓವರ್‌ಗಳಿಂದ 82 ರನ್ ಹರಿದು ಬಂತು. ವನ್‌ಡೌನ್‌ನಲ್ಲಿ ಬಂದ ರಜತ್ ಪಾಟೀದಾರ್ 20, ನಾಯಕ ಸಂಜು ಸ್ಯಾಮ್ಸನ್ 37 ರನ್ ಮಾಡಿದರೆ, ತಿಲಕ್ ವರ್ಮ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ರಾಜ್ ಬಾವಾ ಕೂಡ ರನ್ ಗಳಿಸಲು ವಿಫಲರಾದರು. ರಿಷಿ ಧವನ್ ಅಜೇಯ 22 ಹಾಗೂ ಶಾರ್ದೂಲ್ ಠಾಕೂರ್ ಅಜೇಯ 25 ರನ್ ಮಾಡಿ ಭಾರತದ ಸರಣಿ ಗೆಲುವು ಸಾರಿದರು.
ಅಂತಿಮ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ. ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್ “ಎ’-47 ಓವರ್‌ಗಳಲ್ಲಿ 219 (ಜೋ ಕಾರ್ಟರ್ 72, ರಚಿನ್ ರವೀಂದ್ರ 61, ಸೋಲಿಯ 28, ಕುಲದೀಪ್ ಯಾದವ್ 51ಕ್ಕೆ 4, ರಿಷಿ ಧವನ್ 16ಕ್ಕೆ 2, ರಾಹುಲ್ ಚಹರ್ 50ಕ್ಕೆ 2). ಭಾರತ “ಎ’-34 ಓವರ್‌ಗಳಲ್ಲಿ 6 ವಿಕೆಟಿಗೆ 222 (ಪೃಥ್ವಿ ಶಾ 7, ಸಂಜು ಸ್ಯಾಮ್ಸನ್ 37, ಋತುರಾಜ್ ಗಾಯಕ್ವಾಡ್ 30, ಶಾರ್ದೂಲ್ ಠಾಕೂರ್ ಔಟಾಗದೆ 25, ರಿಷಿ ಧವನ್ ಔಟಾಗದೆ 22).