Advertisement

ತೀವ್ರ ಒತ್ತಡದಲ್ಲಿರುವ ಕುಲಭೂಷಣ್ ಜಾಧವ್: ಪಾಕ್ ನ ಮತ್ತೊಂದು ಕುತಂತ್ರ ಬಯಲು

09:29 AM Sep 04, 2019 | Mithun PG |

ನವದೆಹಲಿ: ಕುಲಭೂಷಣ್ ಜಾಧವ್ ಮೇಲೆ ಪಾಕಿಸ್ತಾನ ತೀವ್ರ ಒತ್ತಡ ಹೇರುತ್ತಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.

Advertisement

ಗೂಢಾಚಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ  ಭಾರತೀಯ  ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು, ಭಾರತೀಯ ರಾಯಭಾರಿ ಗೌರವ್ ಅಹ್ಲುವಾಲಿಯಾ ಸೋಮವಾರ ಭೇಟಿ  ಮಾಡಿದ್ದರು.

ಪಾಕಿಸ್ತಾನ ಸುಳ್ಳು ಆರೋಪಗಳನ್ನು ಹೊರಿಸಿ ಜಾಧವ್ ರನ್ನು ಬಂಧಿಸಿದೆ. ಅದರ ಜೊತೆಗೆ ಅವರು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ತೀವ್ರ ಒತ್ತಡ ಹೇರುತ್ತಿದೆ. ಅವರ ಪ್ರತಿಯೊಂದು ಹೇಳಿಕೆ ಕೂಡ ಪಾಕಿಸ್ತಾನದ ನಿರ್ದೇಶನದಂತೆಯೆ ಇದೆ. ಇಂತಹ ಸುಳ್ಳು ಪ್ರತಿಪಾದನೆಗಳಿಂದ ಕುಲಭೂಷಣ್ ಜಾಧವ್ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಗೌರವ್ ಅಹ್ಲುವಾಲಿಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ನ್ಯಾಯಾಲಯದ (ಐಸಿಜೆ )ನಿರ್ದೇಶನದ ಹಿನ್ನಲೆಯಲ್ಲಿ ರಾಜತಾಂತ್ರಿಕ ಭೇಟಿಗೆ ಪಾಕಿಸ್ತಾನ ಅವಕಾಶ ಕಲ್ಪಿಸಿತ್ತು. ಈ ವೇಳೆ ಜಾಧವ್ ತೀವ್ರ ಒತ್ತಡಕ್ಕೆ ಸಿಲುಕಿದ್ದು ಗಮನಕ್ಕೆ ಬಂದಿತ್ತು. ಅದರ ಸಮಗ್ರ ವರದಿಗಾಗಿ ಎದುರು ನೋಡುತ್ತಿದ್ದೇವೆ, ತದನಂತರದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next