Advertisement

ಕುಳಂಜೆ: ಶಾಲಾ ಸಮೀಪದ ಗುಡ್ಡದ ಮೇಲೆ ಬತ್ತದ ನೀರಿನ ಬುಗ್ಗೆ

08:55 PM Jun 10, 2019 | Team Udayavani |

ಶಂಕರನಾರಾಯಣ: ವಿಜ್ಞಾನ ಎಷ್ಟೇ ಮುಂದುವರಿದರೂ ಭೂಮಿಯ ಒಳಗೆ ಜಲ ಸಂಚಲನ ಹೇಗೆ, ಎಲ್ಲಿ ಹರಿಯುತ್ತದೆ ಎಂದು ತಿಳಿಯುವುದು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ.

Advertisement

ಕೆಲವು ಬಾರಿ ಅತ್ಯಂತ ಎತ್ತರದ ಗುಡ್ಡದ ತುದಿಯಲ್ಲೂ ಜಲ ಸಂಶೋಧನೆ ಆದರೆ, ಕೆಲವು ಕಡೆ ಅತ್ಯಂತ ಪಾತಾಳದಲ್ಲಿ ಒಂದು ತುಟುಕು ಜೀವ ಜಲ ದೊರೆಯುವುದಿಲ್ಲ. ಇದು ಪ್ರಕೃತಿಯ ವಿಸ್ಮಯ.

ಇದಕ್ಕೆ ಅಪವಾದ ಎಂಬಂತೆ ಶಂಕರನಾರಾಯಣ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದ ಕುಳಂಜೆ ಗ್ರಾಮದ ಕುಳಂಜೆ ಸ.ಕಿ.ಪ್ರಾ ಶಾಲೆಯ ಸಮೀಪದ ಗುಡ್ಡದ ಮೇಲಿರುವ ರಾಯರ ದರ್ಕಾಸ್ತು ಎಂಬಲ್ಲಿ (ಸಮುದ್ರ ಮಟ್ಟಕ್ಕಿಂತ 45 ಮೀ. ಎತ್ತರದಲ್ಲಿ) ಒಂದು ನೀರಿನ ಬುಗ್ಗೆ ಇದ್ದು, ಎಂತಹ ಕಡು ಬೇಸಿಗೆಯಲ್ಲೂ ನೀರು ಬತ್ತದೆ ಇರುವುದು ಸೋಜಿಗವೆನಿಸುತ್ತದೆ.

ಶಾಲೆಗೂ ನೀರು
1956ನೇ ಇಸವಿಯಲ್ಲಿ ಸ.ಕಿ.ಪ್ರಾ.ಶಾಲೆ ಕುಳಂಜೆ ಪ್ರಾರಂಭವಾದಾಗ ಹತ್ತಿರದಲ್ಲಿ ಬಾವಿ ಇಲ್ಲದೆ ಶಾಲಾ ಮಕ್ಕಳು ಇದೇ ಗುಡ್ಡದ ಈ ಜಲಧಾರೆ ಇರುವ ಕೇವಲ 4 ಅಡಿ ಗಾತ್ರದ ಗುಹೆ ಆಕಾರದ ಚಿಲುಮೆಯಿಂದ ನೀರು ತಂದು ಶಾಲೆಯಲ್ಲಿ ಕುಡಿಯಲು ಉಪ ಯೋಗಿಸುತ್ತಿದ್ದರು. ಇತ್ತೀಚೆಗೆ ಕುಳಂಜೆ ಶಾಲೆಗೆ ಸರಕಾರಿ ಬಾವಿ ಮಂಜೂರಾತಿ ಆಗಿದೆ.

ಬತ್ತುವುದಿಲ್ಲ
ಬೇಸಗೆಯಲ್ಲಿ ಗುಡ್ಡದ ಕೆಳಗಿನ ಪ್ರದೇಶದ ಮನೆಗಳ ಬಾವಿಗಳಲ್ಲಿ ನೀರು ಆರಿ ಹೋದರೂ, ಪ್ರಕೃತಿ ಸೋಜಿಗದ ಈ ಚಿಲುಮೆಯಲ್ಲಿ ನೀರು ಬತ್ತುವುದಿಲ್ಲ.

Advertisement

ಇತ್ತೀಚೆಗೆ ಇಲ್ಲಿನ ಕೆಲ ಸಾರ್ವಜನಿಕರು ಜೆಸಿಬಿ ಮೂಲಕ ನೀರಿನ ಬುಗ್ಗೆಯ ಗಾತ್ರವನ್ನು ಹಿಗ್ಗಿಸಿ, ಪಂಪ್‌ ಮೂಲಕ ನೀರೆತ್ತುತ್ತಿದ್ದರೂ ಇಲ್ಲಿ ನೀರಿನ ಒರತೆ ಕುಗ್ಗಿಲ್ಲ. ನೀರಿನ ಕೊರತೆಯೂ ಆಗಿಲ್ಲ.

ಹಲವರಿಗೆ ಉಪಯೋಗ
ವರನಟ ಡಾ| ರಾಜಕುಮಾರ್‌ ಅವರ ಇಚ್ಛೆಯಂತೆ ಅವರ ಮರಣ ನಂತರ ಅವರ ನೇತ್ರಗಳ‌ನ್ನು ತೆಗೆದು ದಾನ ಮಾಡಿದ ಬೆಂಗಳೂರಿನ ಖ್ಯಾತ ನಾರಾಯಣ ನೇತ್ರಾಲಯದ ವೈದ್ಯ ಡಾ| ಭುಜಂಗ ಶೆಟ್ಟಿ, ಬೆಂಗಳೂರಿನ ಪೊಲೀಸ್‌ ಉಪ ಅ ಧೀಕ್ಷಕ ಚಿಟ್ಟೆ ವೇಣುಗೋಪಾಲ ಹೆಗ್ಡೆ ಸಹಿತ ಹಲವಾರು ವಿದ್ಯಾರ್ಥಿಗಳು ಈ ನೀರಿನ ಬುಗ್ಗೆಯನ್ನೇ ವಿದ್ಯಾರ್ಥಿ ಜೀವನದಲ್ಲಿ ಉಪಯೋಗಿಸಿಕೊಂಡವರು.
-ಚಿಟ್ಟೆ ರಾಜಗೋಪಾಲ ಹೆಗ್ಡೆ,
ಹಳೆ ವಿದ್ಯಾರ್ಥಿ
ಸ.ಕಿ.ಪ್ರಾ.ಶಾಲೆ ಕುಳಂಜೆ

Advertisement

Udayavani is now on Telegram. Click here to join our channel and stay updated with the latest news.

Next