Advertisement

ಕುಲಾಲ ಸುಧಾರಕ ಸಂಘ ಪುಣೆ ಅರಸಿನ ಕುಂಕುಮ ಕಾರ್ಯಕ್ರಮ

01:55 PM Jan 24, 2019 | |

ಪುಣೆ: ಪುಣೆ ಕುಲಾಲ ಸುಧಾರಕ ಸಂಘ ಪುಣೆ  ಇದರ ಮಹಿಳಾ ವಿಭಾಗದ ವತಿಯಿಂದ ಪ್ರತಿ ವರ್ಷ  ಆಚರಿಸಿಕೊಂಡು ಬಂದಿರುವ ಅರಸಿನ ಕುಂಕುಮ ಕಾರ್ಯಕ್ರಮವು ಜ. 20ರಂದು ಕಾತ್ರಾಜ್‌ ವಂಡರ್‌ ಸಿಟಿಯಲ್ಲಿರುವ  ಸಂಘದ ಭವನದಲ್ಲಿ ಅಪರಾಹ್ನ  4 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಮೊದಲಿಗೆ ಪುಣೆ ಕುಲಾಲ್‌ ಸಂಘದ  ಮಹಿಳಾ ವಿಭಾಗದ ಅಧ್ಯಕ್ಷೆ  ಶಾರದಾ ಮೂಲ್ಯ   ಮತ್ತು ಹಿರಿಯರು ಹಾಗೂ ಪದಾಧಿಕಾರಿಗಳು  ದೀಪ ಬೆಳಗಿಸಿ ಆರತಿಗೈದು  ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು. ಅನಂತರ  ಸಂಘದ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮವು ಜರಗಿತು. ನಂತರ ಪ್ರಧಾನ ಕಾರ್ಯಕ್ರಮವಾದ ಅರಸಿನ ಕುಂಕುಮ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಸಮಾಜದ ಮಹಿಳೆಯರು ಪರಸ್ಪರ ಅರಸಿನ ಕುಂಕುಮ ಹಚ್ಚಿಕೊಂಡು ಶುಭಹಾರೈಸಿಕೊಂಡರು. ಪುಣೆ  ಕುಲಾಲ ಸಂಘದ ಮಹಿಳಾ  ವಿಭಾಗದ ಪ್ರಮುಖರಾದ ಯಶೋದಾ ಮೂಲ್ಯ, ಜಯಂತಿ ಮೂಲ್ಯ, ಸರಸ್ವತಿ  ಸಿ. ಕುಲಾಲ್‌, ಸುಜಾತಾ ಅರ್‌. ಕುಲಾಲ್‌, ಅನಿತಾ ಕೊಡ್ಮಣRರ್‌, ಇತರ ಪದಾಧಿಕಾರಿಗಳು ಮತ್ತು  ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ  ವಿಭಾಗದ ಶಾರದಾ ಮೂಲ್ಯ ಇವರ   ಅಧ್ಯಕ್ಷತೆಯಲ್ಲಿ ಜರ ಗಿದ ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು  ಆಗಮಿಸಿದ್ದರು. ಕುಲಾಲ ಸಂಘ ಪುಣೆ ಇದರ ಅಧ್ಯಕ್ಷರಾದ ಹರೀಶ್‌ ಕುಲಾಲ್‌ ಮುಂಡ್ಕೂರು, ಉಪಾಧ್ಯಕ್ಷರಾದ ದೊಡ್ಡಣ್ಣ ಮೂಲ್ಯ, ಗೌರವ ಕಾರ್ಯದರ್ಶಿ  ನವೀನ್‌ ಬಂಟ್ವಾಳ್‌, ಕೋಶಾಧಿಕಾರಿ ವಾಸು ಕುಲಾಲ್‌ ವಿಟ್ಲ  ಹಾಗೂ ಸದಸ್ಯರಾದ ನಾಗೇಶ್‌ ಕುಲಾಲ್‌ ಕಡಂದಲೆ, ಸುರೇಂದ್ರ ಮೂಲ್ಯ, ಸದಾಶಿವ ಕುಲಾಲ್‌, ಕುಟ್ಟಿ ಮೂಲ್ಯ, ಕಾರ್ತಿಕ್‌ ಮೂಲ್ಯ, ಶಿವ ಪ್ರಸಾದ್‌ ಕೊಡ್ಮಣRರ್‌ ಮತ್ತು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ   ಸಹಕರಿಸಿದರು. ಕಾರ್ಯಕ್ರಮದ ಅನಂತರ  ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.  

ಚಿತ್ರ-ವರದಿ :  ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next