Advertisement

ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿ: ಅರಸಿನ ಕುಂಕುಮ 

02:08 PM Jan 22, 2019 | |

ನವಿ ಮುಂಬಯಿ: ತವರೂರಿನಲ್ಲಿ ನಡೆಯುವ ಸಂಘಗಳ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಆದರೆ ಮುಂಬಯಿಯ ನಗರದಲ್ಲಿ ಸಂಘ ಆಯೋಜಿಸುವ ಯಾವುದೇ ಕಾರ್ಯಕ್ರಮವಾದರೂ ಒಗ್ಗಟ್ಟಿನಿಂದ ಸೇರಿಕೊಳ್ಳುತ್ತಾರೆ. ಇದು ನಮ್ಮೂರಿನ ಸಂಘಗಳಿಗೆ ಮುಂಬಯಿ ಸಂಘ ಆದರ್ಶವಾಗಿದೆ. ಬಹಳಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ಸಂಘದ ಅಭಿವೃದ್ಧಿಯ ದ್ಯೋತಕವಾಗಿದೆ. ಮುಂದಿನ ದಿನಗಳಲ್ಲೂ ಕೂಡ ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಗಳಿಗೂ ಸ್ಫೂರ್ತಿ ತುಂಬುವ ಸೇವಾ ಕಾರ್ಯಗಳನ್ನು ಮಹಿಳೆಯರು ನಡೆಸಬೇಕು ಎಂದು ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ನುಡಿದರು.

Advertisement

ಜ. 13 ರಂದು ವಾಶಿಯ ಕನ್ನಡ ಸಂಘದ ಸಭಾಗೃಹದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ಅರಸಿನ ಕುಂಕುಮ ಮತ್ತು 100 ನೇ ಭಜನಾ ಮಂಗಳ್ಳೋತ್ಸವದ ಸಮಾರಂಭವನ್ನು ದೀಪಪ್ರಜ್ವಲಿಸಿ ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌ ಅವರು, ಅರ್ಥಪೂರ್ಣವಾಗಿರುವ ಅರಸಿನ ಕುಂಕುಮ ಕಾರ್ಯಕ್ರಮ ಮಹಿಳೆಯರನ್ನು ಒಗ್ಗೂಡಿಸಿದೆ. ನಮ್ಮ ಬದುಕನ್ನು ಧಾರ್ಮಿಕತೆಯತ್ತ ಕೊಂಡೊಯ್ಯಲು ಭಜನೆಯಿಂದ ಸಾಧ್ಯ. ಅಂತಹ ಭಜನೆಯನ್ನು ನೂರು ಮನೆಗಳಲ್ಲಿ ನಡೆಸಿರುವ ನವಿಮುಂಬಯಿ ಸ್ಥಳೀಯ ಸಮಿತಿಯ ಎಲ್ಲಾ ಬಂಧುಗಳು ಅಭಿನಂದನಾರ್ಹರು. ನಮ್ಮ ಸಮಾಜದ ಬಂಧುಗಳು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿರುವುದು ಸಮಾಜಕ್ಕೆ ಸಂಘಕ್ಕೆ ಕೀರ್ತಿ ತಂದಿದೆ. ಸಮಾಜ ಬಾಂಧವರು ನಡೆಸುವ ಯಾವುದೇ ಕಾರ್ಯಕ್ರಮಕ್ಕೂ ಕೂಡ ಸಹಕಾರ ನೀಡಬೇಕು ಎಂದು ನುಡಿದರು.

ವೇದಿಕೆಯಲ್ಲಿ ನವಿಮುಂಬಯಿ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಸುರೇಶ್‌ ಕೆ. ಕುಲಾಲ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಲಾ ಎಸ್‌. ಮೂಲ್ಯ, ಉಪಾಧ್ಯಕ್ಷೆ ಹರಿಣಾಕ್ಷೀ ಎ. ಸಾಲ್ಯಾನ್‌, ಕಾರ್ಯದರ್ಶಿ ಬೇಬಿ ವಿ. ಬಂಗೇರ, ಕೋಶಾಧಿಕಾರಿ ಮಲ್ಲಿಕಾ ಡಿ. ಕುಲಾಲ್‌ ಅವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಶಿಕಲಾ ಎಸ್‌. ಮೂಲ್ಯ ಸ್ವಾಗತಿಸಿದರು. ಪ್ರೇಮಾ ಸಿ. ಮೂಲ್ಯ ಅರಸಿನ ಕುಂಕುಮದ ಬಗ್ಗೆ ವಿವರಿಸಿ ಅದರ ಮಹತ್ವವನ್ನು ತಿಳಿಸಿದರು. 
ಮಮತಾ ಕುಲಾಲ್‌ ಅತಿಥಿಗಳನ್ನು ಪರಿಚಯಿಸಿದರು. ಸುನೀತಾ ಎಸ್‌. ಮೂಲ್ಯ ಭಜನೆ ಬಗ್ಗೆ ತಿಳಿಸಿದರು. ಶಕುಂತಳಾ ಆರ್‌. ಬಂಜನ್‌, ಉಷಾ ಆರ್‌. ಮೂಲ್ಯ, ಸುಶೀಲಾ ಪಿ. ಬಂಗೇರ ಪ್ರಾರ್ಥನೆಗೈದರು.

Advertisement

ಹರಿಣಾಕ್ಷೀ ಎ. ಸಾಲ್ಯಾನ್‌ ವಂದಿಸಿದರು. ಬೇಬಿ ವಿ. ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಜಯ ಅಂಚನ್‌ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಐದು ಸ್ಥಳೀಯ ಸಮಿತಿಗಳಿಂದ ಭಜನೆ, ಕುಣಿತ ಭಜನೆ ನಡೆಯಿತು. ಆನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ, ಭಜನೆಯ ಮಂಗಳ್ಳೋತ್ಸವವು ಜರಗಿತು.

ದಯಾನಂದ ಕುಲಾಲ್‌ ಮತ್ತು ಮಲ್ಲಿಕಾ ಕುಲಾಲ್‌ ಅವರ ಸೇವಾರ್ಥಕವಾಗಿ ಅನ್ನಸಂತರ್ಪಣೆ ನಡೆಯಿತು. ಸಭಾಂಗಣದಲ್ಲಿ ಕುಲಾಲ ಸಮಾಜದ ಮೂಲ ಕಸುಬಿನ ಚಿತ್ರಣಗಳು, ವಾರ್ಷಿಕ ಸಮಾರಂಭದಲ್ಲಿ ಆಯೋಜಿಸಿದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಚಿತ್ರಣಗಳನ್ನು ಪ್ರದರ್ಶಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next