Advertisement

ಕುಲಾಲ ಸಂಘ ನವಿಮುಂಬಯಿ:15ನೇ ರಚನ ಮಹೋತ್ಸವ

03:19 PM Oct 07, 2017 | Team Udayavani |

ನವಿಮುಂಬಯಿ: ಸ್ಥಳೀಯ ಸಮಿತಿಯು ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದು, ಆ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರಿಯಾಗುತ್ತಿದೆ. ಸಂಘದ ಕಾರ್ಯಕ್ರಮ ಗಳಲ್ಲಿ ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಸಮಾಜದ ಅಭಿವೃದ್ಧಿಯ ದ್ಯೋತಕವಾಗಿದೆ. ಯುವಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಸಂಘದ ಮುಖಾಂತರ ಮತ್ತಷ್ಟು ಬಲಿಷ್ಠಗೊಳಿಸಬೇಕು. ಸಂಘದ  ಯೋಜನೆಗಳಿಗೆ ದಾನಿಗಳು  ಸಹಕರಿಸಬೇಕು ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ನುಡಿದರು.

Advertisement

ಅ.1ರಂದು ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ 15ನೇ ಸಂಸ್ಥಾಪನ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳಿಗೆ ಪಾಲಕರು ಉನ್ನತ ಶಿಕ್ಷಣ ನೀಡಿದರೆ ಸಾಲದು, ಸಮಾಜ ಸೇವೆ ಮಾಡುವ ಪರಿಪಾಠವನ್ನು ನೀಡಬೇಕು. ಸಂಘವನ್ನು ಮುನ್ನಡೆಸಲು ಯುವ ಜನಾಂಗದ ಅಗತ್ಯವಿದೆ ಎಂದರು.

ಅಮೂಲ್ಯ ಪತ್ರಿಕೆಯ ಉಪ ಸಂಪಾದಕ ಶಂಕರ್‌ ವೈ. ಮೂಲ್ಯ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಮಾಜ ಬಾಂಧವರು ಬೆಳೆಯ ಬೇಕೆನ್ನುವ ಉದ್ಧೇಶನ್ನಿಟ್ಟು ಅಮೂಲ್ಯ ಪತ್ರಿಕೆ ಆರಂಭಗೊಂಡಿದೆ. ಇದು ಬೆಳೆಯಬೇಕಾದರೆ ಸಮಾಜ ಬಾಂಧವರು, ಸಾಹಿತ್ಯಕ ವಿಚಾರಗಳನ್ನು, ಜಾಹೀರಾತುಗಳನ್ನು ನೀಡಬೇಕು. ಪತ್ರಿಕೆ ಬಹುತೇಕ ಸದಸ್ಯರ ಮನೆಗೆ ತಲುಪುತ್ತಿಲ್ಲ ಎನ್ನವ ವಿಚಾರಗಳು ಆಡಳಿತ ಮಂಡಳಿ  ಗಮನಕ್ಕೆ ಬಂದಿದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಿಕೊ ಳ್ಳಲು ಎಲ್ಲರು ಮುಂದೆ ಬರಬೇಕು ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ಅವರು ಮಾತನಾಡಿ, ಮಹಿಳಾ ವಿಭಾಗದ ಕಾರ್ಯಕ್ರಮಗಳಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು. ಸಂಘದ ಬಹುಕೋಟಿ ಯೋಜನೆಗೆ ಪ್ರತೀ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ ಸಕ್ರಿಯವಾಗಿ ಶ್ರಮಿಸುತ್ತಿದೆ. ದೇಣಿಗೆ ಸಂಗ್ರಹಲ್ಲೂ ಅಪಾರವಾಗಿ ಶ್ರಮಿಸುತ್ತಿದ್ದಾರೆ. ಸಂಘದ ಆಡಳಿತ ಸಮಿತಿಗೆ ಮಹಿಳೆಯರು ನಾಮಪತ್ರ ಸಲ್ಲಿಸಬೇಕು. ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.

ಪ್ರಾರಂಭದಲ್ಲಿ ಪಾದೆಬೆಟ್ಟು ಶೇಖರ ಮೂಲ್ಯ ಸ್ವಾಗತಿಸಿದರು. ವೇದಿಕೆಯಲ್ಲಿ ಹಿರಿಯ ಸದಸ್ಯ ನಾರಾಯಣ ಬಂಜನ್‌, ಥಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಮೋಹನ್‌ ಬಂಜನ್‌, ಚರ್ಚ್‌ಗೇಟ್‌-ದಹಿಸರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ, ಸಿಎಸ್‌ಟಿ-ಮುಲುಂಡ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಮೂಲ್ಯ ಸಯಾನ್‌, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಮೂಲ್ಯ ಪಾದೆಬೆಟ್ಟು, ಉಪ ಕಾರ್ಯಾಧ್ಯಕ್ಷ ವಾಸು ಎಸ್‌. ಬಂಗೇರ, ಕಾರ್ಯದರ್ಶಿ ದಯಾನಂದ ಕೆ. ಮೂಲ್ಯ, ಕೋಶಾಧಿಕಾರಿ ಹರಿಶ್ಚಂದ್ರ ಮೂಲ್ಯ, ಜತೆ ಕಾರ್ಯದರ್ಶಿ ಸೂರಜ್‌ ಎಸ್‌. ಕುಲಾಲ್‌, ಜತೆ ಕೋಶಾಧಿಕಾರಿ ಕೃಷ್ಣ ಸಿ. ಕುಕ್ಯಾನ್‌, ಸಾಂಸ್ಕೃತಿಕ ವಿಭಾಗದ ಸಂಚಾಲಕ ಭಾಸ್ಕರ ಬಂಗೇರ, ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮಾ ಎಲ್‌. ಮೂಲ್ಯ, ಉಪ ಕಾರ್ಯಾಧ್ಯಕ್ಷೆ ಉಷಾ ಆರ್‌. ಮೂಲ್ಯ, ಕಾರ್ಯದರ್ಶಿ ಶೋಭಾ ಎನ್‌. ಬಂಗೇರ, ಕೋಶಾಧಿಕಾರಿ ವಿನೋದಾ ಎಸ್‌. ಮೂಲ್ಯ, ಜತೆ ಕಾರ್ಯದರ್ಶಿ ಬೇಬಿ ವಿ. ಬಂಗೇರ, ಜತೆ ಕೋಶಾಧಿಕಾರಿ ಶಶಿಕಲಾ ಎಸ್‌. ಮೂಲ್ಯ ಉಪಸ್ಥಿತರಿದ್ದರು.

Advertisement

ಈ ಸಂದರ್ಭದಲ್ಲಿ ಶೀನ ಮೂಲ್ಯ ಮತ್ತು ಶಶಿಕಲಾ ಎಸ್‌. ಮೂಲ್ಯ ದಂಪತಿಯನ್ನು ಸಮ್ಮಾನಿಸಲಾಯಿತು. 

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಹಲವು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು. 

ಸಲಹಾ ಸಮಿತಿಯ ಸದಸ್ಯರುಗಳಾದ ರಘು ಮೂಲ್ಯ ಪಿ. ಖಾರ್‌ಘರ್‌, ಸುಧಾಕರ ಟಿ. ಕುಲಾಲ್‌ ರಬಾಲೆ, ಜನಾರ್ಧನ ಆರ್‌. ಕುಲಾಲ್‌ ಖಾಂದೇಶ್ವರ, ಪ್ರೊ| ಉಮೇಶ್‌ ಕುಲಾಲ್‌ ವಾಶಿ, ಲಕ್ಷ್ಮೀ ನಾರಾಯಣ ಬಂಗೇರ ನೆರೂಲ್‌, ಜಯ ಎಸ್‌. ಅಂಚನ್‌ ಐರೋಲಿ, ಭೋಜ ಬಿ. ಬಂಗೇರ ಕೋಪರ್‌ಖರ್ಣೆ, ರಮೇಶ್‌ ಬಂಜನ್‌ ಖಾರ್‌ಘರ್‌, ಪ್ರಭಾಕರ ಡಿ. ಬಂಗೇರ ಪನ್ವೇಲ್‌, ಪ್ರಸಾದ್‌ ಎಸ್‌. ಮೂಲ್ಯ ಖಾರ್‌ಘರ್‌, ಡಾ| ಸುಚಿತ್ರಾ ಎಚ್‌. ಸಾಲ್ಯಾನ್‌ ನೆರೂಲ್‌, ಶೀನ ಎಂ. ಮೂಲ್ಯ ಪನ್ವೇಲ್‌,  ನಾರಾಯಣ ಎನ್‌. ಮೂಲ್ಯ ಪನ್ವೇಲ್‌, ಭರತ್‌ ಕುಲಾಲ್‌ ಪನ್ವೇಲ್‌, ಕರುಣಾಕರ ಮೂಲ್ಯ ಸಿಬಿಡಿ, ಕೃಪೇಶ್‌ ಟಿ. ಕುಲಾಲ್‌ ತುರ್ಬೆ, ದಿವಾಕರ ಎಂ. ಮೂಲ್ಯ ಐರೋಲಿ, ಶಶಿಕುಮಾರ್‌ ವಿ. ಕುಲಾಲ್‌ ಖಾಂದೇಶ್ವರ, ದಯಾನಂದ ಅಂಚನ್‌ ಪನ್ವೇಲ್‌, ಆನಂದ ಆರ್‌. ಮೂಲ್ಯ ಕಾಮೋಟೆ, ಎಲ್‌. ಆರ್‌. ಮೂಲ್ಯ ಪನ್ವೇಲ್‌, ಶೇಖರ ಬಂಗೇರ ಸೀವುಡ್‌, ಕೃಷ್ಣ ಕೆ. ಮೂಲ್ಯ ಖಾರ್‌ಘರ್‌ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ರಘು ಮೂಲ್ಯ ಪಾದೆಬೆಟ್ಟು, ಜಯ ಅಂಚನ್‌, ರಘು ಬಿ. ಮೂಲ್ಯ, ಬೇಬಿ ವಿ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಹರಿಶ್ಚಂದ್ರ ಮೂಲ್ಯ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಿತಿಯ ಮಕ್ಕಳಿಂದ ನೃತ್ಯ ವೈವಿಧ್ಯ, ಸಂಗೀತ, ಛದ್ಮವೇಷ ಸ್ಪರ್ಧೆ ನಡೆಯಿತು. 

ಆನಂತರ ಶಶಿಕುಮಾರ್‌ ವಿ. ಕುಲಾಲ್‌ ಅವರು ರಚಿಸಿ, ನಿರ್ದೇಶಿಸಿರುವ ಅರ್ತಾನಗ ಪೊರ್ತಾಂಡ್‌ ತುಳು ನಾಟಕವು ಸಮಿತಿಯ ಸದಸ್ಯರಿಂದ ಪ್ರದರ್ಶನಗೊಂಡಿತು. 

ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

87 ವರ್ಷಗಳ ಇತಿಹಾಸವನ್ನು ಹೊಂದಿರುವ ಸಂಘ ಯಾವ ರೀತಿಯಲ್ಲಿ ಬಂಧುಗಳಿಗೆ ಸೇವೆ ನೀಡುತ್ತಿದೆ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಆರು ಉಪಸಮಿತಿಗಳು ಸಮಾಜವನ್ನು ಬಲಿಷ್ಟಗೊಳಿಸುತ್ತ ಮಹತ್ತರ ಪಾತ್ರವಹಿಸುತ್ತಿದೆ. ಯುವ ಜನಾಂಗ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿಯಬೇಕಾಗಿದೆ. ಯುವಕರಿಗೆ ಸಮಾಜದ ಋಣ ಸಂದಾಯದ ಅರಿವಿರಬೇಕು. ಸಂಘದ ವೇದಿಕೆ ಸಮಾಜ ಬಾಂಧವರನ್ನು ಎತ್ತರಕ್ಕೆ ಬೆಳೆಸಲು ಪೂರಕವಾಗಿದೆ. ಯಾವುದೇ ಮನಸ್ಥಾಪವನ್ನು ಇರಿಸದೆ ಸಂಘದ  ಕೆಲಸ ಮಾಡುವ ಅಭಿಮಾನವನ್ನು ಬೆಳೆಸಿಕೊಳ್ಳಬೇಕು 
– ದೇವದಾಸ್‌ ಎಲ್‌. ಕುಲಾಲ್‌ (ಉಪಾಧ್ಯಕ್ಷ : ಕುಲಾಲ ಸಂಘ ಮುಂಬಯಿ)

ಸಂಘದ ವಾರ್ಷಿಕ ಮಹಾಸಭೆ ಅ. 8 ರಂದು ನಡೆಯಲಿದ್ದು, ಈ ಬಾರಿ ಸಂಘಕ್ಕೆ ನೂತನ ಕಾರ್ಯಕಾರಿ ಸಮಿತಿ ರಚನೆಗೊಳ್ಳಲಿದೆ. ಅದಕ್ಕೆ ಸಮಾಜದ ಯುವಕರು ಅರ್ಜಿ ಸಲ್ಲಿಸಬೇಕು. ಊರಿನಲ್ಲಿ ನಿರ್ಮಾಣವಾಗುತ್ತಿರುವ ಸಮಾಜದ ಭವನದ ಕಾರ್ಯ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಇನ್ನಷ್ಟು ಠೇವಣಿ ಮತ್ತು ದೇಣಿಗೆಯ ಅಗತ್ಯವಿದೆ 
–  ಡಿ. ಐ. ಮೂಲ್ಯ (ಗೌರವ ಪ್ರಧಾನ ಕಾರ್ಯದರ್ಶಿ : ಕುಲಾಲ ಸಂಘ ಮುಂಬಯಿ)

ಪ್ರತೀ ಸ್ಥಳೀಯ ಸಮಿತಿಯಲ್ಲೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವಂತಹ ಕೆಲಸ ಮಾಡಬೇಕು. ಮಹಿಳಾ ವಿಭಾಗ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿದೆ 
– ಜಯ ಅಂಚನ್‌ (ಗೌರವ ಕೋಶಾಧಿಕಾರಿ : ಕುಲಾಲ ಸಂಘ ಮುಂಬಯಿ)
 

Advertisement

Udayavani is now on Telegram. Click here to join our channel and stay updated with the latest news.

Next