ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಚರ್ಚ್‌ಗೇಟ್-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕುಲಾಲ ಕ್ರೀಡೋತ್ಸವ – 2018 ರ ಜ. 28 ರಂದು ಬೆಳಗ್ಗೆಯಿಂದ ಸಾಯಂಕಾಲದವರೆಗೆ ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ( ಎಸ್‌ಎಐ) ಸಮತಾ ನಗರ್ ಪೋಲಿಸ್ ಸ್ಟೇಷನ್ ಹತ್ತಿರ, ಅಕುರ್ಲಿ ರೋಡ್, ಕಾಂದಿ ವಲಿ ಪೂರ್ವ ಇಲ್ಲಿ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಕ್ರೀಡಾ ಉತ್ಸವವನ್ನು ಸಾಂತಾಕ್ರೂಜ್ ಪಶ್ಚಿಮದ ಶ್ರೀ ಮಂತ್ರದೇವಿ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ವಾಸುದೇವ ಬಂಜನ್ ಅವರು ಗಣಪತಿ ಪೂಜೆ ನಡೆಸಿ ಅನಂತರ ದೀಪ ಬೆಳಗಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ಶರೀರವನ್ನು ಕಾಪಾಡಿಕೊಳ್ಳುವಲ್ಲಿ ವ್ಯಾಯಾಮಗಳು ಅಗತ್ಯವಿದೆ. ವ್ಯಾಯಾಮವಿರುವ ಶರೀರ ಆರೋಗ್ಯವಾಗಿರುತ್ತದೆ. ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಿ ಸಮಾಜ ಪ್ರತಿಭಾವಂತ ಕ್ರೀಡಾಪಟುಗಳ ಕ್ರೀಡೆಯನ್ನು ಗುರುತಿಸುವಂತಾಗಲು ಕ್ರೀಡೋತ್ಸವ ಅಗತ್ಯವಿದೆ. ಕ್ರೀಡೋತ್ಸವದ ಮೂಲಕ ಸಮಾಜ ಒಗ್ಗಟ್ಟು ಸಾಧ್ಯವಾಗುತ್ತದೆ. ಮುಂಬಯಿಯಲ್ಲಿ ಕುಲಾಲ ಭವನ ಅಗತ್ಯವಿದ್ದು ಸಂಘ ನಿರ್ಮಾಣವಾಗುವಲ್ಲಿ ಶ್ರಮಿಸಬೇಕು ಎಂದರು.
ಕ್ರೀಡಾಕೂಟಕ್ಕೆ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದ ಸಂಘದ ಅಧ್ಯಕ್ಷ ದೇವ್‌ದಾಸ್ ಕುಲಾಲ್ ಸಮಾಜ ಬಾಂಧವರು ದಿನಪೂರ್ತಿ ನಡೆಯುವ ಕ್ರೀಡಾಕೂಟವನ್ನು ಶಿಸ್ತುಬದ್ಧವಾಗಿ ನಡೆಸಬೇಕು. ಇದು ಸ್ಪರ್ಧೆಯಲ್ಲ. ನಮ್ಮ ಸಮಾಜ ಬಾಂಧವರ ಕ್ರೀಡಾಭಿಮಾನಕ್ಕೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಕ್ರೀಡೋತ್ಸವ ನಡೆಯಲಿದೆ ಎಂದು ಶುಭ ಹಾರೈಸಿದರು.
ಮೈದಾನದಲ್ಲಿ ನಡೆಯುವ ವಿವಿಧ ಕ್ರೀಡಾಕೂಟಕ್ಕೆ ಸಾಂಕೇತಿಕವಾಗಿ ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡಾಕೂಟ ಪ್ರಾರಂಭಿಸಿದ ಬಂಟರ ಸಂಘದ ವಸಾಯಿ – ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ .ಕೆ. ಶೆಟ್ಟಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಆರ್‌ಬಿಐ ಪುಟ್ಬಾಲ್ ಕೋಚ್ ಸುರೇಶ್ ಬಂಜನ್, ಪುಟ್ಬಾಲ್ ಕೋಚ್ ಲೀಲಾಧರ್ ಬಂಗೇರ, ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ಪ್ರಿಯಾ ಎಂ ಸಾಲ್ಯಾನ್, ಜ್ಯೋತಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಬಂಟರ ಸಂಘದ ವಸಾಯಿ – ಡಾಹಾಣು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು, ಸಂಘದ ಪದಾಧಿಕಾರಿಗಳಾದ ರಘು ಮೂಲ್ಯ ಪಾದೆಬೆಟ್ಟು, ಕರುಣಾಕರ್ ಬಿ. ಸಾಲ್ಯಾನ್, ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್, ಅಮೂಲ್ಯ ಸಂಪಾದಕ ಶಂಕರ್ ವೈ. ಮೂಲ್ಯ, ಮೀರಾರೋಡ್ ಸಮಿತಿಯ ಕಾರ್ಯಾಧ್ಯಕ್ಷ ಸುಂದರ್ ಮೂಲ್ಯ, ಸಯನ್ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಮೂಲ್ಯ, ಡೊಂಬಿವಲಿ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ. ಮೂಲ್ಯ, ನವಿ ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ ಮತ್ತು ಚರ್ಚ್‌ಗೇಟ್ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಘು ಆರ್. ಮೂಲ್ಯ, ಉಪ ಕಾರ್ಯಾಧ್ಯಕ್ಷ ಗಣೇಶ್ ಬಿ. ಸಾಲ್ಯಾನ್, ಕಾರ್ಯದರ್ಶಿ ಅರುಣ್ ಡಿ. ಬಂಗೇರ, ಕೋಶಾಧಿಕಾರಿ ಸತೀಶ್ ಬಿ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಲತಾ ವಿ. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷೆ ಪ್ರಮೀಳಾ ಕುಲಾಲ್, ಕಾರ್ಯದರ್ಶಿ ಆಶಾಲತಾ ಎಸ್. ಮೂಲ್ಯ, ಕೋಶಾಧಿಕಾರಿ ಆರತಿ ಕೆ. ಸಾಲ್ಯಾನ್ ಹಾಗೂ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಕೆ. ಕುಲಾಲ್ ಪಲ್ಲಿಕಂಡ ಬಂಟ್ವಾಳ, ಕಾರ್ಯದರ್ಶಿ ಅಶ್ವಿನ್ ಎ. ಬಂಗೇರ, ಕ್ರೀಡಾ ಸಮನ್ವಯಕರಾದ ಹರೀಶ್ ಜಿ. ಬಂಗೇರ, ಲೀಲಾಧರ್ ಬಂಗೇರ, ಸುರೇಶ್ ಬಂಜನ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ರಘು ಮೂಲ್ಯ ಸ್ವಾಗತಿಸಿದರು. ಬಂಟ್ವಾಳ ಆನಂದ ಕುಲಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನೋಜ್ ಸಾಲ್ಯಾನ್ ಮತ್ತು ರುದ್ರ ಅಂಚನ್ ಅವರು ಕಾರ್ಯಾಕ್ರಮ ನಿರೂಪಿಸಿದರು. ಕುಶಾಲ್ ಬಂಗೇರ, ಯಶ್ ಮೂಲ್ಯ, ಧೃತಿ ಬಂಗೇರ, ಸಾಕ್ಷಿ ಸಾಲ್ಯಾನ್ ಪ್ರಾರ್ಥನೆಗೈದರು. ಬಳಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.