Advertisement
ಜ. 28ರಂದು ಕುಲಾಲ ಸಂಘ ಚರ್ಚ್‌ಗೇಟ್-ದಹಿಸರ್ ಪ್ರಾದೇಶಿಕ ಸಮಿತಿ ಕಾಂದಿವಲಿ ಪಶ್ಚಿಮದ ಎಕ್ಸ್‌ಪ್ರೆಸ್ ಹೈವೇ ಸಮೀಪದ ಸಾಯಿಗ್ರೌಂಡ್‌ನಲ್ಲಿ ಆಯೋಜಿಸಲಾದ ಕ್ರೀಡೋತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದೆಯೂ ಸಂಘದ ವತಿಯಿಂದ ಪ್ರಾದೇಶಿಕ ಸಮಿತಿಗಳಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರ ಮನೋಭಾವ, ಒಗ್ಗಟ್ಟು ಎಲ್ಲರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
Related Articles
Advertisement
ವೇದಿಕೆಯಲ್ಲಿ ಆರ್‌ಬಿಐ ಫುಟ್ಬಾಲ್ ತರಬೇತುದಾರ ಸುರೇಶ್ ಬ ಂಜನ್, ಉದ್ಯಮಿ ಐ. ಆರ್. ಮೂಲ್ಯ, ಸುನಿಲ್ ಆರ್. ಸಾಲ್ಯಾನ್, ಉದ್ಯಮಿ ಎ. ಬಾಲಕೃಷ್ಣ ಸಾಲ್ಯಾನ್, ಅಶೋಕ್ ಸಾಲ್ಯಾನ್, ವಿಠಲ ಎಸ್. ಕುಲಾಲ್, ಕುಲಾಲ ಕೇಂದ್ರ ಸಮಿತಿಯ ಉಪ ಕಾರ್ಯಾಧ್ಯಕ್ಷ, ಸಮಿತಿಯ ಗೌರವ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಗೌರವ ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಘು ಆರ್. ಮೂಲ್ಯ, ಉಪ ಕಾರ್ಯಾಧ್ಯಕ್ಷ ಗಣೇಶ್ ಬಿ. ಸಾಲ್ಯಾನ್, ಕಾರ್ಯದರ್ಶಿ ಅರುಣ್ ಡಿ. ಬಂಗೇರ, ಕೋಶಾಧಿಕಾರಿ ಸತೀಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಲತಾ ವಿ. ಸಾಲ್ಯಾನ್, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್, ಕಾರ್ಯದರ್ಶಿ ಅಶ್ವಿನಿ ಎ. ಬಂಗೇರ, ಸಮನ್ವಯಕ ಹರೀಶ್ ಜಿ. ಬಂಗೇರ, ಕ್ರೀಡಾ ಸಮಿತಿಯ ಯುವ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಕ್ರಿಕೆಟ್, ಯುವತಿಯರಿಗೆ ಬಾಕ್ಸ್ ಕ್ರಿಕೆಟ್, ಮಹಿಳೆಯರಿಗೆ ತ್ರೋಬಾಲ್, ಹದಿನೇಳು ವರ್ಷದೊಳಗಿನ ಯುವಕರಿಗೆ ರಿಂಕ್ ಫುಟ್ಬಾಲ್, ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ-ಜಗ್ಗಾಟ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ವಯೋಮಿತಿಗೆ ಅನುಗುಣವಾಗಿ ರನ್ನಿಂಗ್ ರೇಸ್ ಇನ್ನಿತರ ವೈವಿಧ್ಯಮಯ ಸ್ಪರ್ಧೆಗಳು ನಡೆದವು. ಸಮಾಜ ಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿದರು. ಮನೋಜ್ ಸಾಲ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಕಬಡ್ಡಿ ಪಂದ್ಯವನ್ನು ಆಯೋಜಿ ಸುವ ನನ್ನ ಉದ್ಧೇಶ ಸಾರ್ಥಕಗೊಂಡಿದೆ. ಪ್ರೊ ಕಬಡ್ಡಿಯನ್ನು ಹತ್ತಿರಲ್ಲಿದ್ದು ಕಂಡ ನನಗೆ ಇದನ್ನು ಸಂಯೋಜಿಸುವ ಆಸೆ ಇಟ್ಟುಕೊಂಡಿದ್ದೆ. ಅದು ಯಶಸ್ವಿಯಾಗಿದೆ. ಮುಂದೆ ದೇಶಾದ್ಯಂತ ಸಮಾಜದ ಗಣ್ಯರನ್ನು ಪರಿಚಯಿಸುವ ಮುಖ್ಯ ಕಾರ್ಯಕ್ರಮ ನೃತ್ಯ ಪರ್ವವನ್ನು ಆಯೋಜಿಸುವ ಯೋಜನೆ ಯಿದೆ. ಅದಕ್ಕಾಗಿ ಎಲ್ಲರ ಸಹಕಾರವಿರಲಿ.-ದಿನೇಶ್ ಬಿ. ಕುಲಾಲ್, ಕಾರ್ಯಕರ್ತ, ಸಮಾಜ ಸೇವಕರು ಯಾವುದೇ ಕಾರ್ಯಕ್ರಮ ಯಶಸ್ವಿಯಾದಗ ನಮಗೆ ದೊರ ಕುವ ಸಂತೋಷವೇ ಬಹುದೊಡ್ಡ ದೇಣಿಗೆ. ಕುಲಾಲ ಸಂಘದ ಹಾಗೂ ಮುಂಬಯಿ ತುಳು-ಕನ್ನಡಿಗರು ನನ್ನ ಚಲನಚಿತ್ರದ ಯಶಸ್ಸಿಗೆ ಕಾರಣೀ ಭೂತರಾಗಿದ್ದಾರೆ. ಸಂಸ್ಥೆಯ ಉನ್ನತಿಗೆ ನನ್ನ ಸಹಕಾರ ಸದಾಯಿದೆ.
-ವೇಣುಗೋಪಾಲ್ ಶೆಟ್ಟಿ, ಉದ್ಯಮಿ, ಚಲನಚಿತ್ರ ನಟ, ಸಮಾಜ ಸೇವಕ ಚಿತ್ರ ವರದಿ: ರಮೇಶ್ ಉದ್ಯಾವರ