Advertisement
ಹೆದ್ದಾರಿ ಇಲಾಖೆಯ ನಿರ್ವ ಹಣೆಯನ್ನು ಗುತ್ತಿಗೆ ಪಡೆದಿರುವ ನೂತನ ಕಂಪೆನಿ ಕಾಮಗಾರಿಯನ್ನು ಆರಂಭಿಸಿದೆ. ಕುಳಾಯಿ ಜಂಕ್ಷನ್‌ನಲ್ಲಿ ಮಳೆ ನೀರು ನಿಂತು ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ಸರಿಯಾದ ಒಳಚರಂಡಿಯನ್ನು ಹೆದ್ದಾರಿ ಇಲಾಖೆ ನಿರ್ಮಿಸದ ಕಾರಣ ಮಳೆ ಬರುವಾಗ ಕೃತಕ ನೆರೆ ಉಂಟಾಗಿ ರಸ್ತೆ ಡಾಮರು ಎದ್ದು ಹೋಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಾದ ಕುಳಾಯಿ, ಬೈಕಂಪಾಡಿ ಕೈಗಾರಿಕಾ ಪ್ರದೇಶದ ತಿರುವು ರಸ್ತೆ, ಪಣಂಬೂರು ಬೀಚ್ ತಿರುವು ಜಂಕ್ಷನ್, ಕೂಳೂರು ಬ್ರಿಡ್ಜ್ ಅಯ್ಯಪ್ಪ ಗುಡಿ ಬಳಿ ಕಾಂಕ್ರೀಟ್ ಕಾಮಗಾರಿ ನಡೆಸಲು ಒತ್ತಾಯಿಸಿದ್ದರು. ಇದೀಗ ಇಲಾಖೆ ಕಾಮಗಾರಿ ಆರಂಭಿಸಿದೆ.
ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಮಾತನಾಡಿ, ಇಲ್ಲಿ ಸಮಸ್ಯೆ ಹಲವಾರು ವರ್ಷಗಳಿಂದ ಇತ್ತು. ಪಾಲಿಕೆ ರಸ್ತೆ ಬದಿ ಅಂಚಿನಿಂದ ಕಾಂಕ್ರೀಟ್ ಕಾಮಗಾರಿ ಮಾಡಲು ಯೋಜಿಸಿದ್ದರೂ ಹೆದ್ದಾರಿ ಇಲಾಖೆ ಅನುಮತಿ ನೀಡಿರಲಿಲ್ಲ. ಮಳೆ ತೋಡು ಕೂಡ ಸರಿಯಾಗಿ ಇರದಿದ್ದ ಕಾರಣ ರಸ್ತೆ ಹದೆಗೆಟ್ಟು ಹೋಗುತ್ತಿತ್ತು. ಇದೀಗ ಶಾಸಕ ಒತ್ತಾಯದ ಮೇರೆಗೆ ಶಾಶ್ವತ ಕಾಮಗಾರಿಯನ್ನು ಜಂಕ್ಷನ್‌ನಲ್ಲಿ ನಡೆಸಲಾಗುತ್ತಿದೆ ಎಂದರು.
ಶಾಂತಾ ರವೀಂದ್ರ, ವಿಟuಲ ಸಾಲ್ಯಾನ್, ರಮೇಶ್ ಅಳಪೆ, ವರುಣ್ ಚೌಟ, ಜಯ ರಾಮ ಆಚಾರ್ಯ, ಕಿರಣ್ ಕುಮಾರ್ ಕೋಡಿಕಲ್ ಮತ್ತಿತರರು ಉಪಸ್ಥಿತರಿದ್ದರು. ಶಾಸಕರ ಭೇಟಿ
ಕುಳಾಯಿ ಬಳಿ ಕಾಮಗಾರಿ ವೀಕ್ಷಣೆ ನಡೆಸಿದ ಶಾಸಕ ಡಾ| ಭರತ್ ಶೆಟ್ಟಿ ವೈ. ಹೆದ್ದಾರಿ ನಿರ್ವಹಣೆದಾರರಿಗೆ ಗುಣಮಟ್ಟದ ಕಾಮಗಾರಿ ನಡೆಸಿ ಸಮರ್ಪಕ ಒಳಚರಂಡಿ ವ್ಯವಸ್ಥೆ ನಿರ್ಮಿಸುವಂತೆ ಸೂಚಿಸಿದರು. ಇದೇ ಸಂದರ್ಭ ಶಾಸಕರ ವಿಶೇಷ ಅನುದಾನದಲ್ಲಿ ಹೊನ್ನಕಟ್ಟೆಯಿಂದ ಕಾನಾಗೆ ಹೋಗುವ ಕಾಂಕ್ರೀಟ್ ರಸ್ತೆಯ ವಿಸ್ತರಣೆ, ಚರಂಡಿ ಮತ್ತಿತರ ಕಾಮಗಾರಿ ಕೈಗೊಳ್ಳುವ ಬಗ್ಗೆ ಸ್ಥಳೀಯರಲ್ಲಿ ಚರ್ಚಿಸಿದರು.