Advertisement

ಕುಳಗೇರಿ ಕ್ರಾಸ್‌: ನ.1ರಂದು ನಾಡದೇವಿ ಭುವನೇಶ್ವರಿ ರಥೋತ್ಸವ

06:02 PM Oct 24, 2024 | Team Udayavani |

ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್‌: ರಾಜ್ಯದಲ್ಲಿ ಎಲ್ಲಿಯಾದರೂ ನಿತ್ಯ ಕನ್ನಡ ಭಾವುಟ ಹಾರಾಡುತ್ತಿದೆ ಎಂದರೆ ಅದು ನರಗುಂದ ತಾಲೂಕಿನ ಬೈರನಹಟ್ಟಿ ಮಠದಲ್ಲಿ ಮಾತ್ರ ಎನ್ನಬೇಕು. ಹೌದು. ಮಠಗ ಳೆಂದರೆ ಬರೀ ಪುರಾಣ-ಪ್ರವಚನ, ಪೂಜೆ-ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ, ದಾಸೋಹ ನಡೆಸುವುದು ಎಂದು ಭಾವಿಸುವುದು ಸಹಜ.

Advertisement

ಆದರೆ ಕನ್ನಡದ ಕಟ್ಟಾಳು ಪೂಜ್ಯ ಶಾಂತಲಿಂಗ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮ ಜತೆಗೆ ಕನ್ನಡ ಭಾಷೆ, ಕನ್ನಡ ನೆಲ-ಜಲ ಹೀಗೆ ಸದ್ದಿಲ್ಲದೇ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಎಲ್ಲೆಡೆ ನ.1ರಂದು ಮಾತ್ರ ರಾಜ್ಯೋತ್ಸವ ದಿನ ಮಾತ್ರ ಭುವನೇಶ್ವರಿ ದೇವಿಗೆ ಪೂಜೆ ನಡೆದರೆ, ಭೈರನಹಟ್ಟಿ ಶ್ರೀಮಠದಲ್ಲಿ
ಭುವನೇಶ್ವರಿ ಮೂರ್ತಿಗೆ ನಿತ್ಯ ಪೂಜೆ ನಡೆಯುತ್ತೆ. ಏಕೀಕರಣ ಹೋರಾಟಗಾರರ ಪರಿಚಯಿಸುತ್ತ ವರ್ಷಪೂರ್ತಿ ರಾಜ್ಯೋತ್ಸವ
ಆಚರಿಸಲಾಗುತ್ತದೆ. ಅಷ್ಟೇ ಸಾಹಿತಿಗಳು, ಸಾಧಕರನ್ನು ಗುರುತಿಸಿ ಸತ್ಕರಿಸುವ ಕೆಲಸ ಶ್ರೀಮಠದಿಂದ ಮಾಡಲಾಗುತ್ತಿದೆ.

ಬಡ ಮಕ್ಕಳ ಭರವಸೆ ಬೆಳಕು: ಶ್ರೀಗಳು ಉಚಿತ ಪ್ರಸಾದ ನಿಲಯ ಸ್ಥಾಪಿಸುವುದರೊಂದಿಗೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ, ಸಂಸ್ಕೃತಿ-ಸಂಸ್ಕಾರ ಕಲಿಸುತ್ತ ಬಡಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ಇಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ಕೃಷಿ, ಸರ್ಕಾರಿ ಸೇವೆ ಮಾಡಿದರೆ, ಕೆಲವರು ಕಾವಿ ದೀಕ್ಷೆ ಪಡೆದು ಮಠಾಧೀಶರಾಗಿದ್ದಾರೆ. ಸದ್ಯ 65 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಕಾರ್ಯಕ್ರಮ: ಕನ್ನಡ ಸ್ವಾಮೀಜಿ ಪೂಜ್ಯ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನ.1ರಂದು ಕಾರ್ಯಕ್ರಮಗಳು ನಡೆಯಲಿವೆ. ಧಾರವಾಡದ ಹಿರಿಯ ವಿದ್ವಾಂಸ ಪ್ರೊ| ಚಂದ್ರಮೌಳಿ ಶಿವಲಿಂಗಪ್ಪ ನಾಯ್ಕರ ಕನ್ನಡ ರಥೋತ್ಸವಕ್ಕೆ ಚಾಲನೆ ನೀಡುವರು. ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಬಿ.ಆರ್‌. ಯಾವಗಲ್‌, ಜ್ಞಾನದೇವ ಮನೇನಕೊಪ್ಪ, ಗುರುನಾಥ ಹೂಗಾರ, ಬಿ.ಸಿ. ಹನಮಂತಗೌಡ್ರ, ಎಂ.ಡಿ.ಸಕ್ಕರಿ, ಸಲ್ಮಾ.ಎ.ಎಸ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Advertisement

ಕನ್ನಡ ರಥ: ತಾಯಿ ಭುವನೇಶ್ವರಿ ಪಂಚಲೋಹದ ಮೂರ್ತಿಯನ್ನಿರಿಸಿ ಕನ್ನಡಾಂಬೆಯ ರಥವನ್ನು ನ.1ರಂದು
ಎಳೆಯಲಾಗುವುದು. ರಥೋತ್ಸವದಲ್ಲಿ ಸಾವಿರಾರು ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ.

*ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next