Advertisement

Kulageri: ಚಾಂಗಭಲೋ… ಹರ್ಷೋಧ್ಘಾರದ ಮಧ್ಯೆ ಭಂಡಾರದ ಒಡೆಯ ಕುಳಗೇರಿ ಬೀರೇಶ್ವರ ಜಾತ್ರೆ

11:48 AM Nov 16, 2023 | Team Udayavani |

ಕುಳಗೇರಿ ಕ್ರಾಸ್: ಕುಳಗೇರಿ ಗ್ರಾಮದ ಬಂಡಾರಮಯ ಬೀರದೇವರ ರಥೋತ್ಸವ ಸಾವಿರಾರು ಭಕ್ತರ ಮದ್ಯೆ ಸಡಗರ ಸಂಭ್ರಮದಿಂದ ನೆರವೇರಿತು.

Advertisement

“ಚಾಂಗಭಲೆರೆ” ಎಂಬ ಭಕ್ತಿಯ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು, ಭಂಡಾರದಲ್ಲಿ ಮಿಂದೆದ್ದ ಭಕ್ತರು ಚೀಲಗಟ್ಟಲೆ ಭಂಡಾರ ಪರಸ್ಪರ ಎರಚಿ ತಮ್ಮ ಹರಕೆ ತಿರಿಸಿದರು, ಭಕ್ತಿಯಿಂದ ತೇರು ಎಳೆದು ಸಂತಸದಿಂದ ಚಪ್ಪಾಳೆ ತಟ್ಟಿದ ಭಕ್ತರು ತಮ್ಮ ಕರಗಳನ್ನ ಜೋಡಿಸಿ ಶ್ರದ್ಧೆ ಭಕ್ತಿ ಭಾವ ಸಮರ್ಪಿಸಿದರು. ಸಹಸ್ರಾರು ಭಕ್ತರ ಆಗಮನದಿಂದ ರಥೋತ್ಸವಕ್ಕೆ ಎಲ್ಲಿಲ್ಲದ ಕಳೆ ತುಂಬಿಕೊಂಡಿತ್ತು.

ಯುವಕರು ಸೇರಿದಂತೆ ಮಹಿಳೆಯರು, ಮಕ್ಕಳು, ವೃದ್ಧರು ಸಹ ಭಂಡಾರ ಎರಚಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರತಿ ಮನೆಯಲ್ಲೂ ಮಹಿಳೆಯರ ರಂಗೋಲಿಯ ಚಿತ್ತಾರ ಕಂಗೊಳಿಸುತ್ತಿದ್ದವು. ಪ್ರತಿಯೊಂದು ಮನೆ ಹಸಿರು ತೋರಣಗಳಿಂದ ಶೃಂಗಾರಗೊಂಡಿದ್ದವು, ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಇತ್ತ ಬಂದು ಬಾಂಧವರು ಜಾತ್ರೆಗೆ ಆಗಮಿಸಿದ ಸ್ನೇಹಿತರೊಡನೆ ರಸಬೂರಿ ಬೋಜನದ ಸವಿರುಚಿ ಸವಿದು ಜಾತ್ರೆಗೆ ಮೆರಗು ತಂದರು.

ಬೀರೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ ಪುನಷ್ಕಾರಗಳು ಸಹ ನಡೆದವು. ಭಕ್ತರು ಹಣ್ಣುಕಾಯಿ ಸಮರ್ಪಿಸಿ ತಮ್ಮ ಹರಕೆ ತಿರಿಸಿದರು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಸೆರಿದ್ದರು.

ಬರಮದೇವರ ಹಬ್ಬ. ಪಲ್ಲಕ್ಕಿ ಉತ್ಸವ, ವಾಹನೋತ್ಸವ ಹಾಗೂ ದೀಪೋತ್ಸವ, ಡೊಳ್ಳಿನ ಪದಗಳು, ಪುಷ್ಪಪೂಜಾ ಕಾರ್ಯಕ್ರಮ ನಡೆದವು ನ.16ರಂದು ಬೆಳಿಗ್ಗೆ11ಗಂಟೆಗೆ ಭಂಡಾರ ಒಡೆಯುವುದು.

Advertisement

ನ.17ರಂದು ರಾತ್ರಿ 9ಗಂಟೆಗೆ ಸಾಂಗ್ಲಿ ಜಿಲ್ಲೆ ಜತ್ತ ತಾಲೂಕಿನ ಕರ್ಜಗಿ ಗ್ರಾಮದ ಭರಮದೇವರ ಡೊಳ್ಳಿನ ಗಾಯನ ಸಂಘ ಹಾಗೂ ಬಾದಾಮಿ ತಾಲೂಕಿನ ಮಾಲಗಿ ಗ್ರಾಮದ ಬೀರೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಜಿದ್ದಾ ಜಿದ್ದಿನ ಡೊಳ್ಳಿನ ಪದಗಳು ನಡೆಯಲಿವೆ. ನ.18ರಂದು ಕಳಸ ಇಳಿಸುವ ಕಾರ್ಯಕ್ರಮ ನಡೆಯಲಿದೆ.

ವರದಿ: ಮಹಾಂತಯ್ಯ ಹಿರೇಮಠ

ಇದನ್ನೂ ಓದಿ: Video: ಹಲೋ ಅಪ್ಪ… ನಾನು ಕೊಟ್ಟಿರುವ ನಾಲ್ಕೈದನ್ನು ಮಾತ್ರ ಮಾಡಿ: ಯತೀಂದ್ರ ತಾಕೀತು

Advertisement

Udayavani is now on Telegram. Click here to join our channel and stay updated with the latest news.

Next