Advertisement
ಅತೀ ಹೆಚ್ಚು ಪಂ. ಸದಸ್ಯರುಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 33 ಮಂದಿ ಸದಸ್ಯರನ್ನು ಹೊಂದಿರುವ ಗ್ರಾ.ಪಂ. ಎನ್ನುವ ಹೆಗ್ಗಳಿಕೆ ಕುಕ್ಕುಂದೂರಿಗಿದೆ. 2010-11ರ ಜನಗಣತಿ ಪ್ರಕಾರ 13,180 ಜನಸಂಖ್ಯೆ, ಕಾರ್ಕಳ ಪುರಸಭೆಗೆ ಹೊಂದಿಕೊಂಡಂತೆ ಕುಕ್ಕುಂದೂರು ಗ್ರಾ.ಪಂ. ಕಚೇರಿ ಇದೆ. ಈ ಕಚೇರಿಯ ಸೇವಾ ವ್ಯಾಪ್ತಿ 33 ವಾರ್ಡ್‌ಗಳಿಗೆ ವಿಸ್ತರಿಸಿಕೊಂಡಿದೆ. ಆದರೆ ಕಚೇರಿಯಲ್ಲಿ ಪೂರ್ಣಕಾಲಿಕ ಪಿಡಿಒ ಅಧಿಕಾರಿಯಿಲ್ಲ. ಆಸುಪಾಸಿನ ಊರುಗಳಿಂದ ಕಚೇರಿ ಕೆಲಸಕ್ಕೆ ಬರುವ ನಾಗರಿಕರಿಗೆ ಇದರಿಂದ ತೊಂದರೆಯಾಗಿದೆ.
Related Articles
Advertisement
ಪಂಚಾಯತ್ ವತಿಯಿಂದ ಸುಮಾರು ನೂರರಷ್ಟು ಸೇವೆಗಳಿವೆ. ಗ್ರಾ. ಪಂ.ನಲ್ಲಿ ಮನೆ ತೆರಿಗೆ, ಕಟ್ಟಡ ತೆರಿಗೆಯಿಂದ ಆರಂಭಗೊಂಡು ಪಡಿತರ ಚೀಟಿ, ಯೋಜನೆಗಳ ಅನುಷ್ಠಾನ, ಗ್ರಾ.ಪಂ. ಸಭೆ, ವಾರ್ಡ್ ಸಭೆ, ಕುಡಿಯುವ ನೀರಿನ ಯೋಜನೆ, ಸ್ವಚ್ಛತೆ ಸಭೆ, ಅದರ ಅನುಷ್ಠಾನ ಹೀಗೆ 20ಕ್ಕೂ ಅಧಿಕ ಪಂಚಾಯತ್‌ನ ನೇರ ಸೇವೆಗಳು ಇರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪಹಣಿಯಂತಹ ಕಂದಾಯವೂ ಸೇರಿ ಇನ್ನಷ್ಟು ಸೇವೆಗಳು ಪಂಚಾಯತ್ ವ್ಯಾಪ್ತಿಗೆ ಸೇರಿಸಲ್ಪಟ್ಟಿವೆ. ಎಲ್ಲ ಸೇವೆಗಳನ್ನು ಸಮರ್ಪಕವಾಗಿ ಗ್ರಾಮಸ್ಥರಿಗೆ ನೀಡಬೇಕಾದರೆ ಪಿಡಿಒ ಪೂರ್ಣಕಾಲಿಕ ವಾಗಿ ಕಚೇರಿಯಲ್ಲಿ ಇರಬೇಕು. ಇವರೇ ಇಲ್ಲದಿದ್ದರೆ ಇವೆಲ್ಲ ಸೇವೆಗಳನ್ನು ಪಡೆಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಇಲ್ಲಿನ ಗ್ರಾಮಸ್ಥರಿಂದ ಕೇಳಿಬಂದಿದೆ.
ನಿತ್ಯ ಅಲೆದಾಟತಾಲೂಕಿನ ಅತೀ ದೊಡ್ಡ ಗ್ರಾ.ಪಂ. ಕುಕ್ಕುಂದೂರು ಆಗಿದೆ. ಪಿಡಿಒ, ಕಾರ್ಯದರ್ಶಿ ಹುದ್ದೆಗಳು ಇಲ್ಲಿ ಇರಬೇಕು. ಆದರೆ ಪಿಡಿಒ ಹುದ್ದೆ ಪ್ರಭಾರ ಆಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್‌ಗೆ ಅತ್ಯಗತ್ಯವಾಗಿ ಪಿಡಿಒ ನೇಮಕಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕರು ಡೋರ್ ನಂಬರ್, ಸ್ಥಳ ಪರಿಶೀಲನೆ ಸೇರಿದಂತೆ ಪಂಚಾಯತ್‌ಗೆಸಂಬಂಧಿಸಿದ ಹಲವು ಸೇವೆಗಳಿಗೆ ನಿತ್ಯ ಅಲೆದಾಟ ನಡೆಸುತ್ತಿರುತ್ತಾರೆ. ಸದ್ಯದಲ್ಲೇ ನೇಮಕ ನಿರೀಕ್ಷೆ
ಪೂರ್ಣಾವಧಿ ಪಿಡಿಒ ಇಲ್ಲದೆ ಸಮಸ್ಯೆಯಾಗುತ್ತಿರುವುದು ಸತ್ಯ. ಈ ಬಗ್ಗೆ ಗಮನಹರಿಸಿ, ಪ್ರಯತ್ನಿಸಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ಪೂರ್ಣಾವಧಿ ಪಿಡಿಒ ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ.
-ಶಶಿಮಣಿ, ಕುಕ್ಕುಂದೂರು
ಗ್ರಾ.ಪಂ. ಅಧ್ಯಕ್ಷೆ – ಬಾಲಕೃಷ್ಣ ಭೀಮಗುಳಿ