Advertisement

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ಅನಾಹುತ

10:11 AM Feb 15, 2020 | Mithun PG |

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಗುರುವಾರ ತಡರಾತ್ರಿ ಹುರಿದಿಟ್ಟ ಮಸಾಲೆ ಕಟಾರಕ್ಕೆ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಸ್ಥಳೀಯ ನಾಗರಿಕರು ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.

Advertisement

ಬೆಂಕಿ ಅವಘಡ ಸಂಭವಿಸುವ ವೇಳೆ ಸ್ಥಳೀಯರು ಪಕ್ಕದ ನೂಚಿಲದಲ್ಲಿ ಭೂತನೆಮೊತ್ಸವದಲ್ಲಿ ಸೇರಿದ್ದರು. ವಿಷಯ ತಿಳಿದು ಕೂಡಲೇ  ದೇವಸ್ಥಾನದ ಭೋಜನ ಶಾಲೆಗೆ ಬಂದು ಬೆಂಕಿ ನಂದಿಸಿದ್ದಾರೆ. ಕ್ಷೇತ್ರದ ಭೋಜನಶಾಲೆಯಲ್ಲಿ ಸುಮಾರು  30 ಗ್ಯಾಸ್ ತುಂಬಿದ ಸಿಲಿಂಡರ್ ಗಳಿದ್ದವು ಎಂದು ತಿಳಿದುಬಂದಿದೆ.

ಬೆಂಕಿಯನ್ನು ನಂದಿಸಿ ಕಟಾರಗಳನ್ನು ಮಸಾಲೆ ಸಹಿತ ಭೋಜನಶಾಲೆಯಿಂದ ಹೊರಗೆ ತರಲಾಗಿದೆ.  ಬಳಿಕ ಭೋಜನಶಾಲೆಯನ್ನು ಸ್ವಚ್ಛಗೊಳಿಸಲಾಗಿದೆ. ಬೆಂಕಿ ಹಿಡಿದ ಕಠಾರವನ್ನು ನಂದಿಸಲು ಬಟ್ಟೆ ಸಿಗದೆ ಇದ್ದಾಗ ಗ್ರಾ.ಪಂ ಸದಸ್ಯ ಮಣಿಕಂಠ ಎಂಬವರು ಧರಿಸಿದ ಅಂಗಿ ಕಳಚಿ ಅದರ ಸಹಾಯದಿಂದ ಬೆಚ್ಚಗಿನ ಕಠಾರವನ್ನು ಹೊರಹಾಕಿದರು. ಇವರ ಸಾಹಸಕ್ಕೆ ಸ್ಥಳಿಯರಿಂದ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next