Advertisement

ಕುಕ್ಕೆ, ಶ್ರೀಕೃಷ್ಣ ಮಠ,ಕೊಲ್ಲೂರು ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ

10:59 PM May 15, 2022 | Team Udayavani |

ಸುಬ್ರಹ್ಮಣ್ಯ/ಕೊಲ್ಲೂರು: ರಜಾ ದಿನವಾದ ರವಿವಾರ ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ದಟ್ಟಣೆ ಕಂಡುಬಂದಿತು.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳಿಗೆ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು, ವಿವಿಧ ಸೇವೆಗಳನ್ನು ಸಲ್ಲಿಸಿದರು. ಶನಿವಾರವೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಪೇಟೆಯಲ್ಲಿ ವಾಹನಗಳ ಹೆಚ್ಚಿನ ಓಡಾಟದಿಂದ ಸಂಚಾರ ಸಮಸ್ಯೆ ಎದುರಾಯಿತು.

ಕೊಲ್ಲೂರು ದೇಗುಲಕ್ಕೆ ರವಿವಾರ 15 ಸಾವಿರ ದಷ್ಟು ಭಕ್ತರು ಆಗಮಿಸಿದ್ದಾರೆ. ಮಾರ್ಚ್‌ನಿಂದ ಈವರೆಗೆ ಸುಮಾರು 7 ಲಕ್ಷದಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ದೇವರ ದರ್ಶನ, ಅನ್ನ ಪ್ರಸಾದ ವಿತರಣೆಯಲ್ಲಿ ನೂಕುನುಗ್ಗಲಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಮಣ್ಣಿನ ಹರಕೆಗೆ ಹೆಸರಾಗಿರುವ ಸುರ್ಯ ಶ್ರೀ ಸದಾಶಿವರುದ್ರ ಕ್ಷೇತ್ರದಲ್ಲು ಭಕ್ತರ ಸಂಖ್ಯೆ ಕಂಡುಬಂತು.

ಶ್ರೀಕೃಷ್ಣ ಮಠ
ಉಡುಪಿ ಶ್ರೀಕೃಷ್ಣ ಮಠಕ್ಕೂ ರವಿವಾರ ಹೊರಜಿಲ್ಲೆ ಸಹಿತ ದೂರದ ಊರುಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪ್ರವಾಸಿಗರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ನಗರದಾದ್ಯಂತ ವಾಹನಗಳ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿತ್ತು. ಬೆಳಗ್ಗೆ ಹಾಗೂ ಸಂಜೆ ವೇಳೆ ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು.

Advertisement

ಮಲ್ಪೆ ಬೀಚ್‌ಗೆ ತೆರಳಲು ಅವಕಾಶ ಇಲ್ಲದಿದ್ದರೂ ಪ್ರವಾಸಿಗರು ಆಗಮಿಸಿ ಕಡಲ ವಿಹಾರವನ್ನು ಸವಿದರು. ಹೆಚ್ಚಿನ ಮಂದಿ ಜಲಕ್ರೀಡೆ ಸಿಗದೆ ನಿರಾಸೆಯಿಂದ ಹಿಂದಿರುಗಿದರು.

Advertisement

Udayavani is now on Telegram. Click here to join our channel and stay updated with the latest news.

Next