Advertisement
ಕಾಮಗಾರಿಗಳ ಉದ್ಘಾಟನೆಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಯೋಜನೆಯಡಿ ಕಾಮಗಾರಿಗಳಾದ ನೀರು ಸರಬರಾಜು ಹಾಗೂ ಒಳಚರಂಡಿ ಯೋಜನೆ, ರಥದ ಶೆಡ್, ನೌಕರರ ವಸತಿ ಗೃಹ ಕಟ್ಟಡ ವಸುದಾ, ವರದಾ, ಗಣ್ಯ ಅತಿಥಿಗಳ ಭೋಜನ ಕೊಠಡಿ, ಆದಿಸುಬ್ರಹ್ಮಣ್ಯ ಸೇತುವೆ, ಪ್ರವಾಸೋದ್ಯಮ ಇಲಾಖೆ ಯಿಂದ ನಿರ್ಮಾಣಗೊಂಡ ಆದಿ ಸುಬ್ರಹ್ಮಣ್ಯ ಉದ್ಯಾನವನಗಳು ಜು. 8ರಂದು ಲೋಕಾರ್ಪಣೆಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.
ಶನಿವಾರ ಮುಂಜಾನೆ ನೂತನ ರಥದ ಶೆಡ್, ನೀರು ಸರಬರಾಜು ವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಒಳಚರಂಡಿ ಯೋಜನೆಯನ್ನು ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಲೋಕಾರ್ಪಣೆಗೊಳಿಸುವರು. ವಸುದಾ – ವರದಾ ನೌಕರರ ವಸತಿ ಗೃಹವನ್ನು ಶಾಸಕ ಎಸ್. ಅಂಗಾರ, ಆದಿಸುಬ್ರಹ್ಮಣ್ಯ ಉದ್ಯಾನವನವನ್ನು ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ವಿವಿಐಪಿ ಭೋಜನ ಕೊಠಡಿಯನ್ನು ಧಾರ್ಮಿಕ ದತ್ತಿ ಆಯುಕ್ತ ಎಸ್.ಪಿ., ಷಡಕ್ಷರಿ ಸ್ವಾಮಿ, ಆದಿ ಸುಬ್ರಹ್ಮಣ್ಯ ಸೇತುವೆಯನ್ನು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಉದ್ಘಾಟಿಸುವರು. ಬಳಿಕ ದೇಗುಲದ ವಲ್ಲೀಶ ಸಭಾಭವನದಲ್ಲಿ ನಡೆಯಲಿರುವ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸುವರು. ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಇದೇ ವೇಳೆ ಪದ್ಮಶ್ರೀ ಪುರಸ್ಕೃತ ತೂಗು ಸೇತುವೆ ಸರದಾರ ಗಿರೀಶ್ ಭಾರದ್ವಾಜ್ ಅವರನ್ನು ಸಮ್ಮಾನಿಸಲಾಗುವುದು.
Related Articles
Advertisement
ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್., ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಮಾಧವ ಡಿ., ರಾಜೀವಿ ಆರ್ ರೈ, ದಮಯಂತಿ ಕೂಜುಗೋಡು, ಅಭಿವೃದ್ಧಿ ಸಮಿತಿ ಸದಸ್ಯ ಶಿವರಾಮ ರೈ, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಾಚಾರ ಅಧಿಕಾರಿ ಗೋಪೀನಾಥ್ ನಂಬೀಶ ಉಪಸ್ಥಿತರಿದ್ದರು.