Advertisement
ಕಳೆದ ವರ್ಷ ಮಾ. 17ರಿಂದ ಸೆ. 8ರ ತನಕ ದೇವಸ್ಥಾನವು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿತ್ತು. ಈ 6 ತಿಂಗಳ ಅವಧಿಯಲ್ಲಿ ಶ್ರೀ ದೇವಳಕ್ಕೆ ಯಾವುದೇ ಆದಾಯ ಇರಲಿಲ್ಲ. ಬಳಿಕ ಸೆ. 15ರಿಂದ ಮಾ. 31ರ ತನಕ ಶ್ರೀ ದೇವಳಕ್ಕೆ ಬಂದ ಆದಾಯ ಇದಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ಗುತ್ತಿಗೆಗಳಿಂದ 72,35,331 ರೂ., ತೋಟದ ಉತ್ಪನ್ನದಿಂದ 15,64,681 ರೂ., ಕಟ್ಟಡ ಬಾಡಿಗೆಯಿಂದ 37,11,409ರೂ, ಕಾಣಿಕೆಯಿಂದ 3,34,69,717 ರೂ., ಕಾಣಿಕೆ ಹುಂಡಿಯಿಂದ 12,75,11,301 ರೂ., ಹರಕೆ ಸೇವೆಗಳಿಂದ 24,10,63,401 ರೂ., ಅನುದಾನದಿಂದ 80,196 ರೂ., ಹೂಡಿಕೆಯಿಂದ ಬಂದ ಬಡ್ಡಿ 20,49,00,424 ರೂ., ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ 36,72,645 ರೂ., ಸಂಕೀರ್ಣ ಜಮೆಗಳಿಂದ 2,63,07,139 ರೂ., ಅನ್ನಸಂತರ್ಪಣೆ ನಿಧಿಯಿಂದ 3,54,61,982 ರೂ., ಅಭಿವೃದ್ಧಿ ನಿಧಿ 9,20,908 ರೂ., ಶಾಶ್ವತ ಸೇವಾ ಮೂಲಧನ 35,88,900 ರೂ. ಹೀಗೆ ಒಟ್ಟು 68 ಕೋಟಿ 94 ಲಕ್ಷದ 88 ಸಾವಿರದ 039.17 ರೂ. ಆದಾಯ ದೇವಸ್ಥಾನಕ್ಕೆ ಬಂದಿದೆ.
Related Articles
ನಿತ್ಯವೂ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ಸುಮಾರು 180 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯ ಹಲವಾರು ಕಾಮಗಾರಿಗಳು ನಡೆಯುತ್ತಿವೆ. ಭಕ್ತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ, ಶ್ರೀ ಕ್ಷೇತ್ರದಲ್ಲಿ ಸಾಕಷ್ಟು ವಸತಿಗೃಹಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಸಮಗ್ರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಸ್ತೆಗಳ ವಿಸ್ತರಣೆ ಮುಂತಾದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ತಿಳಿಸಿದರು.
Advertisement
ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ವನಜಾ ವಿ. ಭಟ್ ಸುಬ್ರಮಣ್ಯ, ಶೋಭಾ ಗಿರಿಧರ್ ಉಪಸ್ಥಿತರಿದ್ದರು.